ಹೂಡೇಂ: ಸ.ಹಿ.ಪ್ರಾ ಶಾಲೆಯ ಆವರಣದಲ್ಲಿ ಕೋವಿಡ್-19 ಲಸಿಕೆ-ವ್ಯಾಕ್ಸಿನ್ ಬಗ್ಗೆ ಸಭೆ..!!

Listen to this article

ವರದಿ. ಮಂಜುನಾಥ್, ಎಚ್

ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇಂದು ಮಾರ್ಚ್ 16-21 ರ ಸಭೆಯಲ್ಲಿ ಮಾನ್ಯ ಜಿಲ್ಲಾ ಅಧಿಕಾರಿಗಳು ಹಾಗೂ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ, ತಾಲ್ಲೂಕ್ ಅಧಿಕಾರಿಗಳು ಅಧ್ಯಕ್ಷತೆಯಲ್ಲಿ. ಸರ್ಕಾರದ ಮುಖಾಂತರ ಎಲ್ಲಾ ಜನ ಸಾಮಾನ್ಯರು ಕೋವಿಡ್ ಲಸಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಹೆಚ್ಚಿನ ಮಟ್ಟದಲ್ಲಿ ಅವರಿಗೆ ಲಸಿಕೆಯನ್ನು ಹಾಕಿಸಿ. ಹೆಚ್ಚಾಗಿ 55 ರಿಂದ 60 ವರ್ಷದ ಮೇಲಿನ ಅವರನ್ನು ಗುರುತಿಸಿ ಲಸಿಕೆಯನ್ನು ಹಾಕಿಸಬೇಕು. ಲಸಿಕೆ ಸುರಕ್ಷಿತವಾಗಿದೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸರ್ಕಾರ ತಿಳಿಸಿದೆ. ಇಂಜಕ್ಷನ್ ತೆಗೆದುಕೊಂಡಾಗಲೂ ಕೆಲವರಿಗೆ ಕೆಲವೊಂದು ಅಡ್ಡ ಪರಿಣಾಮಗಳು ಸಹಜ. ಇಂತಹ ಸಣ್ಣ ಪುಟ್ಟ ಅಡ್ಡಪರಿಣಾಮಗಳು ಕೆಲವರಲ್ಲಿ ಕಾಣಿಸಿಕೊಂಡರೆ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ. ಲಸಿಕೆ ಪಡೆದುಕೊಂಡವರ ಮೇಲೆ ವೈದ್ಯರು ನಿಗಾ ಇಡಲಿದ್ದಾರೆ. ಯಾವುದೇ ಆತಂಕ ಪಡದೆ ಲಸಿಕೆ ಪಡೆದುಕೊಳ್ಳಬಹುದು. ದೇಶದಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎಂಬ ಎರಡು ರೀತಿಯ ಲಸಿಕೆಯನ್ನು ನೀಡಲಾಗುತ್ತಿದೆ. ದೇಶಿಯವಾಗಿ ಅಭಿವೃದ್ದಿ ಪಡಿಸಿರುವ ಈ ಲಸಿಕೆಗಳ ಬಗ್ಗೆ ಆರಂಭದಲ್ಲಿ ಕೆಲವೊಂದು ಅಭಿಪ್ರಾಯಗಳು, ಚರ್ಚೆಗಳು ವ್ಯಕ್ತವಾಗುತ್ತಿದ್ದವು. ಲಸಿಕೆಯ ಪರಿಣಾಮ ಹಾಗೂ ಅಡ್ಡ ಪರಿಣಾಮಗಳ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಇವೆಲ್ಲವೂ ಜನರಲ್ಲಿ ಒಂದು ರೀತಿಯ ಆತಂಕವನ್ನು ಸೃಷ್ಟಿಸಿದೆ ಎಂದರೆ ತಪ್ಪಿಲ್ಲ. ಇಂತಹ ಸಂದರ್ಭದಲ್ಲಿ ಜನರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನವನ್ನು ನಾವು ಮಾಡಬೇಕು ಎಂದು ಕಾನಹೊಸಹಳ್ಳಿಯ ಉಪ ತಾಸಿಲ್ದಾರ್ ಚಂದ್ರಮೋಹನ್ ಅವರು ಮಾತನಾಡಿ ಹೇಳಿದರು. ಈ ಸಂದರ್ಭದಲ್ಲಿ ಗ್ರ.ಪಂ ಅಧ್ಯಕ್ಷರಾದ ಕರಿಬಸಮ್ಮ ದುರ್ಗಪ್ಪ, ಉಪಾಧ್ಯಕ್ಷರು ಕೆ.ಎನ್ ರಾಘವೇಂದ್ರ, ಗ್ರಾ.ಪಂ ಸದಸ್ಯರುಗಳು ವಿಲೇಜ್ ಅಕೌಂಟ್ ಮರಳಸಿದ್ದಪ್ಪ, ಹಾಗೂ ಗ್ರಾ.ಪಂ ಕಾರ್ಯದರ್ಶಿ ಚಂದ್ರಣ್ಣ, ಸಿಬ್ಬಂದಿ ವರ್ಗದವರು, ಸ. ಹಿ.ಪ್ರಾ ಶಾಲೆಯ ಶಿಕ್ಷಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಇಲಾಖೆಯವರು, ಊರಿನ ಗ್ರಾಮಸ್ಥರು ಉಪಸ್ಥಿತರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend