ಕೂಡ್ಲಿಗಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮೇನ್ ಬಾಯ್ಸ್ ಸ್ಕೂಲ್ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ…!!!

Listen to this article

ಕೂಡ್ಲಿಗಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮೇನ್ ಬಾಯ್ಸ್ ಸ್ಕೂಲ್ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಕೂಡ್ಲಿಗಿ: ಕೂಡ್ಲಿಗಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇನ್ ಬಾಯ್ಸ್ ಸ್ಕೂಲ್ ವಿದ್ಯಾರ್ಥಿಗಳು ಕೇವಲ ಓದುವುದು ಅಲ್ಲದೆ ಕ್ರೀಡಾಕೂಟದಲ್ಲಿ ನಾವೇನು ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ. ಕೂಡ್ಲಿಗಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಬ್ಬಡಿಯಲ್ಲಿ ಕೆ.ಎಂ.ಭೂಮಿಕ ತಂಡ ವಿಜೇತರಾದರೇ. 600ಮೀಟರ್ ಓಟದಲ್ಲಿ ಈರಮ್ಮ, ನಂದಿನಿ.400 ಮೀಟರ್ ಓಟದಲ್ಲಿ ಸಂಧ್ಯಾ, ರಿಲೇಯಲ್ಲಿ, ಸಂಧ್ಯಾ, ನಯನ, ಸಿಂಧೂ, ದಿವ್ಯ.ತಟ್ಟೆ ಎಸೆತದಲ್ಲಿ ಯಶವಂತ್, ನಯನ, ಗುಂಡು ಎಸೆತದಲ್ಲಿ ಯಶವಂತ್, ಲಾಂಗ್ ಜಂಫ್ ನಲ್ಲಿ ಈರಮ್ಮ, ಐ ಜಂಪ್ ನಲ್ಲಿ ಕಾರ್ತಿಕ್ ಸೇರಿದಂತೆ ಇತರೇ ಆಟಗಳಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿ ಪತಾಕಿಯನ್ನು ಎತ್ತಿ ಹಿಡಿದಿದ್ದಾರೆ. ಕೂಡ್ಲಿಗಿಯ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕರು ಆದ ಬಿ.ಎಂ.ಕೆಂಚನಗೌಡ ಹಾಗೂ ಪ್ರೋತ್ಸಾಹಕರಾದ ಬಿ.ಬಿ.ಶಿವಾನಂದ, ಬಸವರಾಜ್ ಇವರು ಮಕ್ಕಳಿಗೆ ಪಾಠದ ಜೊತೆಗೆ ಕ್ರೀಡಾಕೂಟದಲ್ಲಿ ಯಾವ ರೀತಿ ಕಲಿಸಿದ್ದಾರೆ ಎನ್ನುವುದು ಎದ್ದುಕಾಣುತ್ತಿದೆ.ಮಕ್ಕಳ ಈ ಸಾಧನೆಗೆ ದಹಿಕ ಶಿಕ್ಷಕರು ಆದ ಬಿ.ಎಂ.ಕೆಂಚನಗೌಡ, ಬಿ.ಬಿ.ಶಿವಾನಂದ, ಬಸವರಾಜ್ ರವರು ಮಾರ್ಗದರ್ಶನರಾಗಿದ್ದಾರೆ. ಮಕ್ಕಳ ಸಾಧನೆ ಕುರಿತು ಮಾತನಾಡಿದ ಎಸ್ಡಿಎಂಸಿ ಅಧ್ಯಕ್ಷರಾದ ನಲ್ಲಮುತ್ತಿ ದುರುಗೇಶ್.ಮಾತನಾಡಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಇನ್ನೂ ಹೆಚ್ಚಾಗಿ ಸರ್ಕಾರಿ ಶಾಲೆಯ ಕ್ರೀಡಾಕೂಟದಲ್ಲಿ ಮಕ್ಕಳು ಭಾಗವಹಿಸಿ ಉನ್ನತ ಮಟ್ಟದ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು. 2022-23 ರ ಸಾಲಿನ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ ಎಲ್ಲ ಮಕ್ಕಳಿಗೆ ಶುಭವಾಗಲಿ. ಈ ಸಂದರ್ಭದಲ್ಲಿ ಕೂಡ್ಲಿಗಿ ಪಟ್ಟಣದ ಮೇನ್ ಬಾಯ್ಸ್ ಸ್ಕೂಲ್ ಮುಖ್ಯಗುರುಗಳಾದ ಕೆ.ಗಂಗಮ್ಮ, ಶಾಲೆ ಶಿಕ್ಷಕವೃಂದ ಹಾಗೂ ಪಟ್ಟಣದ ಶಿಕ್ಷಣ ಪ್ರೇಮಿಗಳು ಯುವಕರು ಇನ್ನಿತರೆ ಮುಖಂಡರು ವಿದ್ಯಾರ್ಥಿಗಳಿಗೆ ಇದ್ದರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend