ಚಿಕ್ಕಜೋಗಿಹಳ್ಳಿ ಆರೋಗ್ಯ ಕೇಂದ್ರದಲ್ಲಿ ನಡೆಯುವ ಕಾಮಗಾರಿ, ಕೆಲಸ ಕಳಪೆಮಟ್ಟದಲ್ಲಿ ಪ್ರಶ್ನೆ ಮಾಡಿದರೆ ಉಷಾರ್…!!!

Listen to this article

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಚಿಕ್ಕಜೋಗಿಹಳ್ಳಿಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಒಳಗೆ ಕಾಮಗಾರಿ ನಡೆಯುತ್ತಿದೆ ಈ ಕಾಮಗಾರಿಯನ್ನು ನಿರ್ಮಿತಿ ಕೇಂದ್ರ ಬಳ್ಳಾರಿ ಇವರು ಮಾಡುತ್ತಿದ್ದು
ಈ ಕಾಮಗಾರಿಯನ್ನು ಸಿ.ಜೆ.ಹಳ್ಳಿ ತಾಂಡ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಯಕುಮಾರ್ ನಾಯ್ಕ ಪರಿಶೀಲನೆ ಮಾಡಲು ಹೋದ ಸಮಯದಲ್ಲಿ ಕೆಳಗಡೆ ಬರೀ ಎಂ,ಸ್ಯಾಂಡ್ ಹಾಕಿ ಕಡಿಮೆ ಮಟ್ಟದಲ್ಲಿ ಸಿಮೆಂಟ್ ಬಳಸಿ ಕಡಿಮೆ ಗುಣಮಟ್ಟದ ಟೈಲ್ಸ್ ಬಳಸಿದ್ದು ಮೇಲ್ನೋಟಕ್ಕೆ ಕಳಪೆ ಕಾಮಗಾರಿ ಎಂದು ಕಾಣುತ್ತಿದ್ದು.

ಇದನ್ನು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಅಲ್ಲಿನ. ಕಾರ್ಯನಿರ್ವಾಹಕ ಇಂಜಿನಿಯರವರು, ನಾನು ಇಗೆ ಮಾಡುವುದು ನೀನು ಏನೂ ಬೇಕಾದರೂ ಮಾಡಿಕೋ, ಎನ್ನುವ ದುರಕಾoರದ ಮಾತನ್ನು ಆಡುವ ಮುಖಂತಾರ ಅದಿಕಾರದ ದರ್ಪವನ್ನು ತೋರುವುದು ಎಷ್ಟು ಸರಿ, ಏಳಿ ಯಾಕೆ ಸಾರ್ವಜನಿಕರಿಗೆ ಇದನ್ನು ಪ್ರಶ್ನೆ ಮಾಡುವ ಅಧಿಕಾರ ಇಲ್ಲವ ಹೇಳಿ, ಇದನ್ನು ಒಂದು ಮಾದ್ಯಮದವರು ಕೇಳಿದರೆ ಅವರಿಗೆ ಏಕ ವಚನದಲ್ಲಿ ಮಾತನಾಡುವ ಇಂತಹ ಅಧಿಕಾರಿಯ ಅವಶ್ಯಕತೆ ನಮ್ಮ ಸಮಾಜಕ್ಕೆ ಇದೆಯಾ ಹೇಳಿ,ಸಾರ್ವಜನಿಕರಿಗೆ ಮತ್ತು ಹಲವಾರು ಬಡ ಕುಟುಂಬಗಳಿಗೆ ನೇರವಾಗಬೇಕಿದ್ದ ಆರೋಗ್ಯ ಕೇಂದ್ರದ ಸುಸಜ್ಜಿತ ಕಟ್ಟಡದಲ್ಲಿ ನೆಲಕ್ಕೆ ಟೈಲ್ ಹಾಕುವ ಒಂದು ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯುವುದು ಎಷ್ಟು ಸರಿ ಅದನ್ನು,ಸಾರ್ವಜನಿಕರು ಪ್ರಶ್ನೆ ಮಾಡುವುದು ಎಷ್ಟು ಸರಿ, ಸಂಬಂಧ ಪಟ್ಟವರು ವಹಿಸಿಕೊಂಡ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಅದನ್ನು ಪ್ರಶ್ನೆ ಮಾಡುವ ಅವಶ್ಯಕತೆ ಬೇರೊಬ್ಬರಿಗೆ ಏಕೆ ಇರುತ್ತೆ ನೀವೇ ಹೇಳಿ ಇಂತಹ ಭ್ರಷ್ಟರನ್ನು ಕೆಲಸದಿಂದ ವಜಾ ಮಾಡಲಿ ಸಂಬಂಧ ಪಟ್ಟ ಮೇಲಾಧಿಕಾರಿಗಳು, ಯಾಕೆ ಇವರಿಗೆಲ್ಲ ಸರ್ಕಾರ ಸಂಬಳ ಕೊಡುವುದಿಲ್ಲವೇ? ಕೊಟ್ಟರು ಅದು ಸಾಲುವುದಿಲ್ಲವೇ?ಸಾರ್ವಜನಿಕರ ವಸ್ತು ಮತ್ತು ಆಸ್ತಿ ನಾವುಗಳು ಕೊಟ್ಟಿರುವ ಸ್ವತ್ತಲ್ಲವೇ, ಇಂತಹ ಭ್ರಷ್ಟಾಚಾರ ಮಾಡುವವರ ಒಂದು ವ್ಯವಸ್ಥೆಯಲ್ಲಿ ಇದನ್ನು ಯಾರು ರಕ್ಷಿಸಬೇಕು ಮತ್ತು ಈ ಒಂದು ಆರೋಗ್ಯ ಕೇಂದ್ರದ ಕೆಲಸ ಸುಗಮ ಹಾಗೂ ಉತ್ತಮವಾದ ಗುಣಮಟ್ಟದಲ್ಲಿ ನಡೆದರೆ ಬಿಲ್ ಮಾಡುವುದು ಒಳಿತು ಇಲ್ಲದಿದ್ದರೆ ಈಗ ಹಾಲಿ ಕೆಲಸ ಮಾಡುವವರನ್ನು ಬಿಟ್ಟು ಬೇರೆಯವರಿಗೆ ವಹಿಸಿಕೊಡುವುದು ಒಳಿತು ಮತ್ತು ಈ, ಕಾಮಗಾರಿಯನ್ನು ಕೊಡಲೇ ಸಂಬಂಧಪಟ್ಟ ಅಧಿಕಾರಿಗಳು,ಶಾಸಕರು, ಹಾಗೂ ಜಿಲ್ಲೆಯ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಖುದ್ದು ಬೇಟಿಯನ್ನು ಮಾಡಿ ಪರೀಕ್ಷಿಸಬೇಕು ಮತ್ತು  ಪರಿಶೀಲನೆ ನಡೆಸಿ ಸಂಬಂಧ ಪಟ್ಟ ಕಾಮಗಾರಿಯ ಇಂಜಿನಿಯರ್ ವಿನೋದ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸಿ. ಜೆ. ಹಳ್ಳಿ ತಾಂಡ ಗ್ರಾಮದ ಮಾಜಿ ಗ್ರಾಂ.ಪಂ. ಸದಸ್ಯ ಜಯಕುಮಾರ್ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗು ಊರಿನ ಮುಖಂಡರು ಯುವಕರು ಸೇರಿ ಗುಣಮಟ್ಟದ ಗಾಮಗಾರಿ ನಡೆಸುವಂತೆ ಆಗ್ರಹಿಸಿದರು…

ವರದಿ.ಮಂಜುನಾಥ್, ಎನ್,

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend