ಹುಗಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಸರಳ ಆಚರಣೆ…!!!

Listen to this article

ಹುಗಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಸರಳ ಆಚರಣೆ!

ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಹುಗಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರು,ಶಿಕ್ಷಕರು, ಎಸ್. ಡಿ. ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು, ಮುಖ್ಯವಾಗಿ ಗಣರಾಜ್ಯೋತ್ಸವದ ಆಚರಣೆ ಮಾಡಲಾಯಿತು.
ಮುಖ್ಯ ಗುರುಗಳಿಂದ ಧ್ವಜಾರೋಹಣ ಶ್ರೀಮತಿ ವಿಜಯ ಅವರು ನೆರೆವೇರಿಸಿದರು.ಮಕ್ಕಳಿಂದ ಪ್ರಾರ್ಥನೆ ಮಾಡಿದರು.ಹಿರಿಯ ಶಿಕ್ಷರರಾದ ಪಾಟೀಲ್ ರವರು ಸ್ವಾಗತ ಭಾಷಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಶ್ರೀ ದೂಪದ ನಾಗರಾಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ
ಶಾಲೆಯ ಎಸ್. ಡಿ.ಎಂ ಸಿ ಸದಸ್ಯರಾದ ರೇಣುಕಮ್ಮ , ಮಲ್ಲಿಕಾರ್ಜುನ, ಕೊಟ್ರೇಶ್ ಪರ್ವತಪ್ಪನರ, ಶಶಿಧರ. ನೀಲಪ್ಪ.ಉಪಸ್ಥಿತರಿದ್ದರು. ಸಿ ಕವನ , ಎಲ್ ಸುಪ್ರೀತ ,
ಎಂ ಯಶೋಧ, ಹೆಚ್ಚ್ ಕಾರ್ತಿಕ್,ಅನ್ನಪೂರ್ಣ ಮುಂತಾದ ವಿದ್ಯಾರ್ಥಿಗಳು ಭಾಷಣ ಮಾಡಿದರು.ರಂಜಿತಾ ಮತ್ತು ಸಂಜನಾ : ಸಂವಿಧಾನದ ಪ್ರಸ್ತಾವನೆ ಕುರಿತು ಮಾತಮಾಡಿದರು.
ಶಾಲೆಯ ಹಿರಿಯ ಶಿಕ್ಷಕರಾದ ಮಲ್ಲಪ ಮಾತನಾಡಿ, ಭಾರತ ವಿಶಾಲ ದೇಶ ಪ್ರತಿ ಹಳ್ಳಿಯಲ್ಲಿ ಸಂಭ್ರಮದಿಂದ ಆಚರಿಲಾಗುವುದು ರಾಷ್ಟ್ರೀಯ ಹಬ್ಬಗಳನ್ನ ಮಾತ್ರ! ಆದರೆ ಕೋವಿಡ್ ಕಾರಣದಿಂದ ರಾಷ್ಟ್ರೀಯ ಹಬ್ಬಗಳ ಆಚರಣೆ ಸರಳ ಆಗುತ್ತಿದೆ, ಸಂಭ್ರಮ ಮರೆಯಾಗುತ್ತಿದೆ.
ಸಂವಿಧಾನ ಸ್ವತಂತ್ರದ ನಂತರ ಭಾರತದ ಆಡಳಿಯಂತ್ರದ ಪರಮೋಚ್ಚ ಕಾನೂನು! ಲಾಹೋರ್ ನ ಕಾಂಗ್ರೆಸ್ ಅಧಿವೇಶನದ ನೆನಪಿಗಾಗಿ ಈ ದಿನ ಗಣರಾಜ್ಯವಾಗಿ ಕಾರ್ಯರೂಪಕ್ಕೆ ತರಲಾಯಿತು.ಎಂದು ಹಿನ್ನೆಲೆ ತಿಳಿಸಿದರು.
ಶಾಲೆಯ ಕುರಿತು ಮಾತನಾಡಿದ ಅವರು, ದೇವಸ್ಥಾನಕ್ಕೆ ಕೊಡುವಷ್ಟು ಪ್ರಾಶಸ್ತ್ಯವನ್ನ ಶಾಲೆಗೂ ನೀಡಿ!. ನಾಳೆನ ಪ್ರೆಜೆಗಳ ಭವಿಷ್ಯ ಶಾಲೆಯ ಕೋಣೆಯಲ್ಲಿ ಆಡಗಿದೆ.! ಪ್ರಸ್ತುತ ಶಾಲೆ ತೀರ ದುಸ್ಥಿತಿಯಲ್ಲಿದೆ. ಅದ್ದರಿಂದ ಹಳೆಯ ಕಟ್ಟಡಗಳ ವಿಲೇವಾರಿ, ಸುಸರ್ಜಿತ ಅಡುಗೆ ಕೋಣೆ,
ಹೊಸ ಕೋಣೆಗಳ ನಿರ್ಮಾಣ ಕಾಂಪೌಂಡ್ ಮತ್ತು ಶಾಲೆಯಲ್ಲಿ ಕೈ ತೋಟ ರಚನೆ ಮಾಡುವ ಕನಸಿದೆ.‌ ಅದ್ದರಿಂದ ಗ್ರಾಮಸ್ಥರ ಸಹಕಾರ ಆಗತ್ಯ..ಎಂದರು.
ಶ್ರೀ ಪಾಟೀಲ್ ರವರು ಮನವಿ ಮಾಡಿದರು.
ಮುಖ್ಯ ಅಥಿಯಾಗಿದ್ದ ಮಲ್ಲಿಕಾರ್ಜುನ ಮಾತನಾಡಿದರು.ಶಾಲೆಯ ಅಭಿವೃದ್ಧಿಗೆ ಹಳೆಯ ವಿಧ್ಯಾರ್ಥಿಗಳು ಮತ್ತು ಗ್ರಾಮಸ್ಥರು, ಗ್ರಾಮ ಪಂಚಾಯತಿ ಸದಸ್ಯರ ಸಹಕಾರ ತುಂಬಾ ಮುಖ್ಯ ಒಟ್ಟಿಗೆ ಎಲ್ಲರೂ ಕೈ ಜೋಡಿಸೊಣ ಎಂದು ಅನಿಸಿಕೆ ವ್ಯಕ್ತ ಪಡಿಸಿದರು‌.
ಶಾಲೆಯ ಹಳೆಯ ವಿಧ್ಯಾರ್ಥಿ ಕಲಾವಿದ, ಪತ್ರಕರ್ತ ಅಜಯ.ಚಲವಾದಿ ಮಾತನಾಡಿ. ಪ್ರಸ್ತುತ ವಿಧ್ಯಮಾನಗಳು ಸಂವಿಧಾನ ಬಾಹಿರವಾಗಿ ಸರ್ಕಾರಗಳು ನಡೆಯುತ್ತಿವೆ. ಸಂವಿಧಾನವನ್ನ ಸಂವಿಧಾನದ ಮೂಲಕವೇ ಹೊಡೆಯುವ ತಂತ್ರ ನಡೆಯುತ್ತಿದೆ. ಅದ್ದರಿಂದ ಸಂವಿಧಾನದ ಪ್ರಸ್ತಾವನೆ ಯುವಕರ, ಮಕ್ಕಳ ಎದೆಯ ದನಿಯಾಗಬೇಕಿದೆ,ಎಲ್ಲರಿಗೂ ಇದೊಂದು ಪ್ರತಿಜ್ಞೆ ವಿಧಿ ಆಗಬೇಕು ಎಂದು ಅಭಿಪ್ರಾಯ ಪಟ್ಟರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು!


ವರದಿ : ಅಜಯ.ಚ.ಹೂವಿನ ಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend