ವಿವೇಕಾನಂದರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು: ಬಿ.ಜಿ ಅಜ್ಜಯ್ಯ ಶಿಕ್ಷಕರ…!!!ವಿವೇಕಾನಂದರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು: ಬಿ.ಜಿ ಅಜ್ಜಯ್ಯ ಶಿಕ್ಷಕರ.

Listen to this article

ವಿವೇಕಾನಂದರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು: ಬಿ.ಜಿ ಅಜ್ಜಯ್ಯ ಶಿಕ್ಷಕರ.

ವಿಜಯನಗರ: ಕೂಡ್ಲಿಗಿ ತಾಲ್ಲೂಕಿನ ಹೂಡೇಂ ಗ್ರಾಮದ ಶ್ರೀ ಕಂಪಳರಂಗ ಸ್ವಾಮಿ ಪ್ರೌಢ ಶಾಲೆಯಲ್ಲಿ ಇಂದು ಶಾಲೆಯ ಆವರಣದಲ್ಲಿ ಸ್ವಾಮಿ ವಿವೇಕಾನಂದರ 159ನೇ ಜನ್ಮದಿನಾಚರಣೆ ಸರಳ ಸಾಂಕೇತಿಕವಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಿ.ಜಿ ಅಜ್ಜಯ್ಯ ಪ್ರಭಾರಿ ಮುಖ್ಯ ಗುರುಗಳು ಮಾತನಾಡಿ ಸ್ವಾಮಿ ವಿವೇಕಾನಂದ ಅವರು ಸಂಪೂರ್ಣವಾಗಿ ನಮ್ಮ ಭವ್ಯ ಭಾರತದ ಹೆಮ್ಮೆಯ ಪುತ್ರ ಭಾರತ ಮಾತೆಯ ಒಬ್ಬ ಶ್ರೇಷ್ಠ ವಿದ್ವಾಂಸ, ತತ್ವಶಾಸ್ತ್ರಜ್ಞ, ಶಿಕ್ಷಣತಜ್ಞ ಹಾಗೂ ನಮ್ಮ ಭಗವತಗೀತೆ, ಎಲ್ಲಾ ಧರ್ಮಗಳ ಸಮ್ಮೇಳನ ಪ್ರಪಂಚಕ್ಕೆ ಸಾರಿದಂತೆ ಶ್ರೇಷ್ಠ ವ್ಯಕ್ತಿ ಎಂಬುದು ತಪ್ಪಾಗಲಾರದು. ಈ ನಿಟ್ಟಿನಲ್ಲಿ ನೀವು ಉತ್ತಮ ಆಲೋಚನೆ ರೂಢಿಸಿಕೊಳ್ಳಬೇಕು. ವಿವೇಕಾನಂದರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಯುವಕರಾದವರು ಪರೀಕ್ಷಿಸುವ, ಪ್ರಶ್ನಿಸುವ ಗುಣಗಳನ್ನು ರೂಢಿಸಿಕೊಳ್ಳಬೇಕು. ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಾಧ್ಯ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಎನ್ ಸೋಮಣ್ಣ ಶಿಕ್ಷಕ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಸ್ವಾಗತಿಸಿದರು, ಸುಪ್ರೀತ್ ಕೆ ಎಸ್ ದೈಹಿಕ ಶಿಕ್ಷಕ, ಕಲಂದರ್ ಶಿಕ್ಷಕ ವಂದನಾರ್ಪಣೆ ಮಾಡಿದರು, ಜಂಬುನಾಥ್ ತೋಟಗಾರಿಕೆ ಶಿಕ್ಷಕ, ಲಲಿತಮ್ಮ ಶಿಕ್ಷಕಿ, ಚಂದ್ರಪ್ಪ, ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend