ಕೂಡ್ಲಿಗಿ:ವ್ಯಕ್ತಿಯೋರ್ವರ ಮೇಲೆ ನಾಯಿ ದಾಳಿ,ಆಸ್ಪತ್ರೆಯಲ್ಲಿ ಲಸಿಕೆ ಗಾಗಿ ಪರದಾಟ…!!!

Listen to this article

ಕೂಡ್ಲಿಗಿ:ವ್ಯಕ್ತಿಯೋರ್ವರ ಮೇಲೆ ನಾಯಿ ದಾಳಿ,ಆಸ್ಪತ್ರೆಯಲ್ಲಿ ಲಸಿಕೆ ಗಾಗಿ ಪರದಾಟ.

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಡಿ9ರಂದು ರಾತ್ರಿ ಡಿ.ನಾಗರಾಜ ಎಂಬ ವ್ಯಕ್ತಿಯೋರ್ವರಿಗೆ ನಾಯಿ ಕಚ್ಚಿದೆ.ಆತನು ಪಟ್ಟಣದಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ದಾವಿಸಿದ್ದಾರೆ.ಆದರೆ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಲಸಿಕೆ ಲಭ್ಯವಿಲ್ಲವೆಂದು ಸಿಬ್ಬಂದಿ ತಿಳಿಸಿದ್ದಾರೆಂದು ಡಿ ನಾಗರಾಜ ದೂರಿದ್ದಾರೆ,ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಲಸಿಕೆ ಇಲ್ಲದೆ ಸೂಕ್ತ ಚಿಕಿತ್ಸೆ ಸಿಗದೇ ಗಾಯಾಳು ಡಿ.ನಾಗರಾಜ ತೀವ್ರ ಪರದಾಡಿದ್ದಾರೆ.ಅವರು ಮಾತನಾಡಿ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ರೋಗಿಗಳನ್ನು ಗಮನಿಸುವಲ್ಲಿ ನಿರ್ಲಕ್ಷ್ಯ ಧೋರಣೆ ತಾಳುತಿದ್ದಾರೆಂದು ಗಾಯಾಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಣೆಗೇಡಿ ಆರೋಗ್ಯಾಧಿಕಾರಿ ಹಾಗೂ ಪಪಂ ಅಧಿಕಾರಿ

-ಸಾರ್ವಜನಿಕ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ ಅಗತ್ಯ ಲಸಿಕೆಗಳು ಅಲಭ್ಯವಾಗಿದ್ದು ಹೆಸರಿಗಷ್ಟೇ ಸಾರ್ವಜನಿಕ ಆಸ್ಪತ್ರೆ ಎನಿಸಿದೆ ಈ ಮೂಲಕ ಆರೋಗ್ಯಾಧಿಕಾರಿ ತಮ್ಮ ಹೊಣೆಗೆಡಿತನಕ್ಕೆ ಸಾಕ್ಷಿಯಾಗಿದ್ದಾರೆ. ಮತ್ತು ಪಟ್ಟಣದಲ್ಲಿ ನಿರಂತರ ಬೀದಿನಾಯಿಗಳ ಹಾವಳಿ ಮತ್ತು ದಾಳಿ ಜರುಗುತ್ತಿದ್ದು,ಪಪಂ ಅಧಿಕಾರಿ ಸೂಕ್ತಬ ಕ್ರಮ ಜರುಗಿಸದೇ ತಮ್ಮ ಹೊಣೆಗೇಡಿತನವನ್ನು ಪ್ರದರ್ಶಿಸಿದ್ದಾರೆ.ಈ ಎರೆಡೂ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು, ಸರ್ಕಾರಿ ಸಂಬಳ ತಿಂದು ಸಾರ್ವಜನಿಕರ ನೋವಿಗೆ ಸ್ಪಂಧಿಸುತ್ತಿಲ್ಲ.ಈ ಮೂಲಕ ಹೊಣೆಗೇಡಿತನದ ಅಧಿಕಾರಿಗಳಾಗಿದ್ದಾರೆಂದು,ಪಟ್ಟಣದ ನಾಗರೀಕರು ಕೆಲ ಸಂಘಟನೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಸಿದ್ದಾರೆ. ನಾಯಿಗಳ ಹಾಗೂ ಹಾವುವ ಕಡಿತಕ್ಕೆ ಲಸಿಕೆಗಳಿಲ್ಲ, ಸಿಬ್ಬಂದಿ ರೋಗಿಗಳಿಗೆ ಸಕಾಲಕ್ಕೆ ಸೂಕ್ತ ವಾಗಿ ಚಿಕಿತ್ಸೆ ನೀಡುತ್ತಿಲ್ಲ ಲಕ್ಷಗಟ್ಟಲೆ ಸರ್ಕಾರಿ ಸಂಬಳ ತಿನ್ನೋ ಕೆಲ ವೈದ್ಯರು ಸಾರ್ವಜನಿಕ ಸೇವೆ ಮಾಡುತ್ತಿಲ್ಲ, ಬದಲ‍‍ಾಗಿ ಗುಂಪುಗಾರಿಕೆ ಮತ್ತು ರಾಜಕೀಯ ಮಾಡುತ್ತಾ, ಕೇವಲ ಪ್ರಭಾವಿಗಳ ಜೀತದಾಳಿನಂತೆ ವರ್ತಿಸುತ್ತಿದ್ದಾರೆಂದು ಅವರು ಆಕ್ರೋಶವ್ಯಕ್ತಪಡಸಿದ್ದಾರೆ. ಪ್ರತಿಯೊಂದು ಚಿಕಿತ್ಸೆಯ ಸಾಮ‍ಾಗ್ರಿಗಳನ್ನು ಹೊರಗಡೆ ತರಿಸುತ್ತಿದ್ದಾರೆ,ಮಾತೆತ್ತಿದರೆ ಬಳ್ಳಾರಿ ದಾವಣಗೆರೆಗೆ ಕಳುಹಿಸಿ ಕೈತೊಳೆದುಕೊಳ್ಳುತ್ತಿದ್ದಾರೆ.ಸಿಬ್ಬಂದಿ ಸಕಾಲಕ್ಕೆ ರೋಗಿಗಳಿಗೆ ನೀಡುತ್ತಿಲ್ಲ ಎಲ್ಲದಕ್ಕೂ ಬಳ್ಳಾರಿಗೆ ಕಳುಹಿಸುವ ಇವರು, ಇಲ್ಲಿ ಏಕೆ ಇರಬೇಕು ಎಂದು ನಾಗರಾಜ ಹಾಗೂ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಪ್ರೆಶ್ನಸಿದ್ದಾರೆ.

ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕ್ರಮ ಜರುಗಿಸಬೇಕು- ಆರೋಗ್ಯ ಇಲಾಖೆಯ ಕೆಲ ಅಧಿಕಾರಿಗಳು ಕೆಲ ಸಿಬ್ಬಂದಿಗಳು ಹತ್ತಾರು ವರ್ಷಗಳಿಂದ ತಮ್ಮ ಬೇರು ಬಿಟ್ಟಿದ್ದಾರೆ,ಕಾರಣ ಜಿಲ್ಲಾಧಿಕಾರಿಗಳು ಪರಿಶೀಲಸಿ ಜನಹಿತಕ್ಕಾಗಿ ಸೂಕ್ತ ಕ್ರಮ ಜರುಗಿಸಬೇಕಿದೆ ಎಂದು, ಹಲವು ಸಂಘಟನೆಗಳ ಪದಾಧಿಕಾರಿಗಳು ನಾಗರೀಕರು ಈ ಮೂಲಕ ಒತ್ತಾಯಿಸಿದ್ದಾರೆ….

 

ವರದಿ. ಬಸಣ್ಣಿ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend