ಸಿಂಧನೂರು : ಪರಿಸರ ಜಾಗೃತಿಗಾಗಿ ಹಳ್ಳಿ ಹಳ್ಳಿಗೆ ವೃಕ್ಷ ರಥ – ಅಮರೇಗೌಡ ಮಲ್ಲಾಪೂರು…!!!

Listen to this article

ಸಿಂಧನೂರು : ಪರಿಸರ ಜಾಗೃತಿಗಾಗಿ ಹಳ್ಳಿ ಹಳ್ಳಿಗೆ ವೃಕ್ಷ ರಥ – ಅಮರೇಗೌಡ ಮಲ್ಲಾಪೂರು.

ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಳ್ಳಿ( ಕೆ.) ಹಾಗೂ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡದೂರುದಲ್ಲಿ ಪರಿಸರ ಜಾಗೃತಿ ಮೊದಲನೆ ದಿನ 2 ಶಾಲೆಯಲ್ಲಿ ಪರಿಸರ ಜಾಗೃತಿ ಮಾಡಲಾಯಿತು.ನಿರಂತರವಾಗಿ ಈ ವೃಕ್ಷ ರಥ ಪರಿಸರ ಸಂರಕ್ಷಣೆಗಾಗಿ ಜಿಲ್ಲೆಯಾದ್ಯಂತ ಸಂಚರಿಸಲಿದೆ.ಸರ್ಕಾರಿ ಶಾಲೆಯ ಆವರಣದಲ್ಲಿ ಹಸಿರು ತೋರೋಣ ಮಾಡುವುದು, ಜೊತೆಗೆ ವಿದ್ಯಾರ್ಥಿಗಳಲ್ಲಿ ಗಿಡ ಮರಗಳ ಬಗ್ಗೆ ವಿಶೇಷವಾಗಿ ಮಾಹಿತಿ ನೀಡಲಾಗುವದು. ಮೊದಲ ಹೆಜ್ಜೆ ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ.
ಮುಂಬರುವ ದಿನ ಬೇಸಿಗೆ ಕಾಲದಲ್ಲಿ ಮೂಕ ಪಕ್ಷಿ ಪ್ರಾಣಿಗಳಿಗೆ ನೀರಿನ ಅರವಟ್ಟಿಗೆ ರಾಜ್ಯದ್ಯಂತ ಮಾಡಲಾಗುವುದು
‘ಪರಿಸರವೇ ಉಸಿರು ಪರಿಸರವೇ ಹಸಿರು’ ಜಾಗ್ರತೆಯನ್ನು ಪ್ರತಿ ನಿತ್ಯ ಈ ವೃಕ್ಷ ರಥ ಕಾಯಕ ನಿರಂತರವಾಗಿರುತ್ತದೆ ಎಂದು ಅಮರೇಗೌಡ ಮಲ್ಲಾಪುರ ವನಸಿರಿ ಫೌಂಡೇಶನ್ ಸಂಸ್ಥಾಪಕಾಧ್ಯಕ್ಷರು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಹನುಮಂತಗೌಡ, ಶಿಕ್ಷಕರಾದ ದೊಡ್ಡಪ್ಪ, ಛತ್ರಪ್ಪ, ಹುಸೇನಸಾಬ್,ಕಲ್ಲನಗೌಡ, ಸೌಮ್ಯ, ಪರ್ವಿನ್,ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಚನ್ನಪ್ಪ ವಿಶ್ವಕರ್ಮ, ಶರಣಬಸವ ಅಬ್ಬಿಗೇರಿ,ಮುದಿಯಪ್ಪವನಸಿರಿ, ಮಾಂತೇಶ ಉಪ್ಪಾರ,ಹಾಗೂ ಉನ್ನತಿಕರಿಸಿದ ಸರ್ಕರಿ ಹಿರಿಯ ಪ್ರಾಥಮಿಕ ಶಾಲೆ ಗುಡುದುರು ಶಾಲೆಯ ಮುಖ್ಯಗುರುಗಳಾದ ನೇತ್ರಾವತಿ,ಸಿದ್ರಾಮೇಶ್ ಶಿಕ್ಷಕರು, ಲಕ್ಷ್ಮಣ ಶಿಕ್ಷಕರು, ಸಂಪತ್ ಶಿಕ್ಷಕರು,ಅಬ್ದುಲ್ ರಜಾಕ್ ಶಿಕ್ಷಕರು, ದೀಪಾ ಶಿಕ್ಷಕಿ, ಗೀತ ಶಿಕ್ಷಕಿ, ಶ್ರೀ ಭಾರತಿ ಗುಡದೂರು ಹಾಗೂ ಮುದ್ದು ವಿದ್ಯಾರ್ಥಿಗಳು ಭಾಗಿಯಾಗಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend