ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಗಾಂಧಿ ಚಿತಾಭಸ್ಮ ಕೂಡ್ಲಿಗಿ…!!!

Listen to this article

ವರದಿ ಜುಲೈ 14 ಕೂಡ್ಲಿಗಿ

ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಗಾಂಧಿ ಚಿತಾಭಸ್ಮ ಕೂಡ್ಲಿಗಿ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಇಂದು ಬೆಳಿಗ್ಗೆ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ( ರಕ್ತ ಸುರಕ್ಷತಾ) ಬಳ್ಳಾರಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಕೂಡ್ಲಿಗಿ ಹಾಗೂ ಮೈದಾನ ಗೆಳೆಯರ ಬಳಗ ಸೇವಾಭಾರತಿ ಯುವ ಬ್ರಿಗೇಡ್ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಕ್ತನಿಧಿ ಬಂಡಾರ ವಿಮ್ಸ್ ಇವರ ಸಹಯೋಗದಲ್ಲಿ ಕೂಡ್ಲಿಗಿ ಪಟ್ಟಣದ ಗಾಂಧಿ ಚಿತಾಭಸ್ಮ ದಲ್ಲಿ ಇಂದು ಬೆಳಗ್ಗೆ ಗಾಂಧಿ ಚಿತಾಬಸ್ಮ ಕ್ಕೆ ಹೂ ಅರ್ಪಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು ಉದ್ಘಾಟಿಸಿ ಮಾತನಾಡಿದ ಕೂಡ್ಲಿಗಿ ಸರ್ಕಲ್ ಇನ್ಸ್ಪೆಕ್ಟರ್ ವಸಂತ ಅಸೋದೆ ಮಾತನಾಡಿ ದೇಶದಲ್ಲಿ ಕೊರೋನ ಮಹಾಮಾರಿಯ ಅಟ್ಟಹಾಸಕ್ಕೆ ನಲುಗಿ ಹೋಗಿದ್ದ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಎಲ್ಲರೂ ತಮ್ಮ ಮನೆಗಳಲ್ಲಿ ಇರುವಂತ ಸಂದರ್ಭ ತಮ್ಮೆಲ್ಲರಿಗೆ ಒದಗಿಬಂದಿದ್ದು ಅಂತ ಪರಿಸ್ಥಿತಿಯಲ್ಲಿ ಅನಾರೋಗ್ಯದಿಂದ ಬಳಲುವ ಅದೆಷ್ಟು ರೋಗಿಗಳಿಗೆ ಪ್ರಾಣ ಉಳಿಸಲು ಅವಶ್ಯಕವಾದ ರಕ್ತ ಬೇಕಾಗಿದ್ದು ಲಾಕ್ಡೌನ್ ಸಂದರ್ಭದಲ್ಲಿ ರಕ್ತ ಭಂಡಾರಗಳಲ್ಲಿ ರೋಗಿಗಳಿಗೆ ಬೇಕಾಗಿರುವ ರಕ್ತ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅನಾರೋಗ್ಯದಿಂದ ಬಳಲುವ ಬಡವರ ಪ್ರಾಣ ಉಳಿಸಲು ಸ್ವಯಂ ಪ್ರೇರಿತರಾಗಿ ಎಲ್ಲರೂ “ರಕ್ತ ನೀಡಿ ಜೀವ ಉಳಿಸಿ” ಎಂದು ಕರೆ ನೀಡಿದರು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯ ತಾಲೂಕು ವೈದ್ಯಾಧಿಕಾರಿ ಷಣ್ಮುಖ ನಾಯಕ ಮಾತನಾಡಿ ಈಗಾಗಲೇ ಲಾಕ್ ಡೌನ್ ಸಂದರ್ಭದಲ್ಲಿ ರಕ್ತ ಭಂಡಾರಗಳಲ್ಲಿ ರಕ್ತವಿಲ್ಲದೆ ರೋಗಿಗಳು ಪರಿತಪಿಸುವ ಸಂದರ್ಭ ಉಂಟಾಗಿದ್ದು ಒಂದು ಹನಿ ರಕ್ತದಿಂದ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಗಳ ಪ್ರಾಣ ಉಳಿಸಲು ಸಹಾಯವಾಗುತ್ತಿದೆ ಹೆಚ್ಚೆಚ್ಚು ಇಂಥ ರಕ್ತದಾನ ಶಿಬಿರಗಳನ್ನು ಮಾಡಬೇಕಾಗಿದ್ದು ತಾಲೂಕಿನ ನಾನಾ ಭಾಗಗಳಲ್ಲಿ ರಕ್ತದಾನ ಶಿಬಿರ ಮಾಡುವುದರ ಮೂಲಕ ಯುವಕರು ಸ್ವಯಂ ಪ್ರೇರಿತರಾಗಿ ರಕ್ತ ನೀಡುವುದರಿಂದ ತಮ್ಮ ಆರೋಗ್ಯವು ಸಹ ಸುರಕ್ಷಿತವಾಗಿದ್ದು ನೀವು ನೀಡಿದ ರಕ್ತದಿಂದ ಇನ್ನೊಬ್ಬರ ಪ್ರಾಣ ಉಳಿಸಿದಂತಾಗುತ್ತದೆ ಎಂದು ತಿಳಿಸಿದರು ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಶಾಂತ್ ಹೆಚ್ಐವಿ ಯೋಜನೆಯ ಮೇಲ್ವಿಚಾರಕರು ಜಿಲ್ಲಾ ರಕ್ತ ಬಂಡಾರದ ಯೋಜನಾಧಿಕಾರಿಗಳು ಆಸ್ಪತ್ರೆಯ ಸಿಬ್ಬಂದಿ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದು .ರಕ್ತ ನೀಡಿದ ಫಲಾನುಭವಿಗಳಿಗೆ . ಕಾರ್ಯಕ್ರಮದ ಪ್ರಯೋಜಕರು ಎಳೆನೀರು ಜ್ಯೂಸ್ ಉಪಹಾರ ವ್ಯವಸ್ಥೆ ಮಾಡಲಾಗಿತ್ತು..

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend