ಕಾಂಕ್ರೀಟ್ ಕುಕ್ಕೆ” ಇನ್ನು ಮುಂದೆ “ಹಸಿರು ಕುಕ್ಕೆ”!

Listen to this article

ಕಾಂಕ್ರೀಟ್ ಕುಕ್ಕೆ” ಇನ್ನು ಮುಂದೆ “ಹಸಿರು ಕುಕ್ಕೆ”!

ಕುಕ್ಕೆ ಸುಬ್ರಹ್ಮಣ್ಯದ ಸುತ್ತಮುತ್ತಲಿನ ಎಲ್ಲಾ ರಸ್ತೆಗಳನ್ನು ಭಕ್ತರ ಹಿತ ದೃಷ್ಟಿಯಿಂದ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಆದರೆ ರಸ್ತೆ ಬದಿ ಯಾವುದೇ ಮರಗಳಿಲ್ಲದೇ ಪ್ರಾಣಿ ಪಕ್ಷಿಗಳಿಗೆ ಮತ್ತು ಸಾರ್ವಜನಿಕರಿಗೆ ಬಿಸಿಲ ಬೇಗೆಗೆ ನಡೆದಾಡಲು ಕಷ್ಟವಾಗಿತ್ತು. ಇದನ್ನು ಮನಗಂಡ ದೇವಸ್ಥಾನದ ಆಡಳಿತ ಮಂಡಳಿ, ರಸ್ತೆ ಬದಿಯಲ್ಲಿ ಹೂ ಹಣ್ಣು ಬಿಡುವಂತಹ ಸ್ಥಳೀಯ ಮರಗಳನ್ನು ನೆಡುವ ಯೋಜನೆ ಹಾಕಿಕೊಂಡಿದ್ದಾರೆ.

ಈ ಯೋಜನೆಯ ಭಾಗವಾಗಿ ನಾಡಿದ್ದು 13 ನೇ ತಾರೀಖಿನಂದು ಕುಕ್ಕೆ ಸುಬ್ರಹ್ಮಣ್ಯದ ರಸ್ತೆ ಬದಿಯಲ್ಲಿ 2000 ಗಿಡಗಳನ್ನು ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ಊರಿನ ಸಂಘ ಸಂಸ್ಥೆಗಳು ನೆಡಲಿವೆ. ಆಸಕ್ತರು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಯೋಜನೆಯನ್ನು ಅನುಷ್ಠಾನ ಗೊಳಿಸಿದ ಪ್ರಕೃತಿಮಾತೆಯ ಆರಾಧಕರಿಗೆ ಹಸಿರು ವಂದನೆಗಳು.

ಮುಂದೊಂದು ದಿನ ಈ ಗಿಡಗಳು ದೊಡ್ಡ ಮರವಾಗಿ ಪ್ರಾಣಿ ಪಕ್ಷಗಳಿಗೆ ಆಹಾರವಾಗಲಿ, ಭಕ್ತಾದಿಗಳಿಗೆ ನೆರಳು ಮತ್ತು ಶುದ್ಧ ಆಮ್ಲಜನಕ ನೀಡಲಿ ಎಂದು ಹಾರೈಸೋಣ

ವರದಿ. ಮಂಜುನಾಥ್ ದೊಡ್ಡಮನಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend