ಅಗತ್ಯ ಸಾಮಾಗ್ರಿಗಳ ಬೆಲೆ ಇಳಿಸಿ-ಕಾಂಗ್ರೇಸ್ ನಾಯಕಿ ನೇತ್ರಾವತಿ ಆಗ್ರಹ…!!!

Listen to this article

ಅಗತ್ಯ ಸಾಮಾಗ್ರಿಗಳ ಬೆಲೆ ಇಳಿಸಿ-ಕಾಂಗ್ರೇಸ್ ನಾಯಕಿ ನೇತ್ರಾವತಿ ಆಗ್ರಹ.
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಜೂ7ರಂದು ತಹಶಿಲ್ದಾರರ ಕಚೇರಿ ಆವರಣದಲ್ಲಿ,ರಾಜ್ಯ ಹಾಗ‍ೂ ಕೇಂದ್ರ ಸರ್ಕಾರಗಳು ಅಗತ್ಯ ವಸ್ಥುಗಳ ಬೆಲೆ ಇಳಿಸುವಂತೆ ಕಾಂಗ್ರೇಸ್ ಮಹಿಳಾ ಘಟಕ ಪ್ರತಿಭಟಿಸಿ ಸರ್ಕಾರಗಳಿಗೆ ಆಗ್ರಹಿಸಿದೆ.
ಮಹಿಳಾ ಕಾಂಗ್ರೇಸ್ ಘಟಕ ಪದಾಧಿಕಾರಿಗಳು ರಾಷ್ಟ್ರಪತಿಗಳಿಗೆ ಹಾಗೂ ರಾಜ್ಯ ಪಾಲರಿಗೆ ಕ್ರಮಕ್ಕಾಗಿ ಒತ್ತಾಯಸಿ ಮನವಿ ಪತ್ರ ನೀಡಿದ್ದು,
ಕಾಂಗ್ರೇಸ್ ಮಹಿಳಾ ಘಟಕ ಅಧ್ಯಕ್ಷೆ ನೇತ್ರಾವತಿ ನೇತೃತ್ವದಲ್ಲಿ ತಹಶಿಲ್ದಾರರಿಗೆ ಮನವಿ ಪತ್ರ ನೀಡಿದರು.ಇದಕ್ಕೂ ಮುನ್ನ ಕಾರ್ಯಕರ್ತರು ಸ್ಥಳೀಯ ಪೆಟ್ರೋಲ್ ಬಂಕ್ ಹತ್ತಿರ,ಬೆಲೆ ಏರಿಕೆ ವಿರೋಧಿಸಿ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು, ನಂತರ ಸೈಕಲ್ ಜಾಥಾ ದೊಂದಿಗೆ ತಹಶಿಲ್ದಾರ ಕಛೇರಿ ತಲುಪಿದರು.
ಈ ಸಂದರ್ಭದಲ್ಲಿ ಅಧ್ಯಕ್ಷೆ ನೇತ್ರಾವತಿ ಮಾತನಾಡಿ,
ಡೀಸೆಲ್ ಹಾಗೂ ಪೆಟ್ರೋಲ್ ಸೇರಿದಂತೆ ದಿನ ಬಳಕೆಗೆ ಸಾಮಗ್ರಿಗಳ ಬೆಲೆ ದಿನೇ ದಿನೇ ಜಾಸ್ತಿ ಮಾಡಲಾಗುತ್ತಿದೆ,ಈಗಾಗಲೇ ಪ್ರತಿ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನಸಾಮಾನ್ಯರು ಖರೀದಿಸಲು ಸಾಧ್ಯವಾಗುತ್ತಿಲ್ಲ. ಕೋವಿಡ್ ಲಾಕ್ ಡೌನ್ ನಿಂದಾಗಿ ಸುಧಾರಿಸಿಕೊಳ್ಳುವ ಕ್ಲಷ್ಟಕರ ಸಂದರ್ಭದಲ್ಲಿ ಬದುಕುವುದೇ ದುಸ್ಥರವಾಗಿರುವಾಗ, ಬೆಲೆ ಏರಿಕೆ ಗಾಯದ ಮೇಲೆ ಬರೆಯಂತಾಗಿದೆ ಬದುಕಲು ಕಷ್ಟಕರವಾಗಿದೆ ಕಾರಣ ಶೀಘ್ರವೇ ಬೆಲೆ ಇಳಿಸಲೇಬೇಕಾಗಿದೆ ಎಂದು ಅವರು ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಬಗ್ಗೆ ಚಿಂತಿಸದೆ ಅಧಿಕಾರದ ಕಿತ್ತಾಟದಲ್ಲಿ ರಾಜಕೀಯ ಗುದ್ದಾಟದಲ್ಲಿ ತೊಡಗಿಕೊಂಡಿವೆ, ಕೋವಿಡ್ 19ರ ಸಂದರ್ಭದಲ್ಲಿ ರೋಗಕ್ಕೆ ಬಲಿಯಾದ ಜನರಿಗೆ ಚಿಕಿತ್ಸೆ ನೀಡದೆ ಸರ್ಕಾರ ವಿಫಲವಾಗಿದೆ. ವೈರಸ್ ಬಾರದಂತೆ ಸಾರ್ವಜನಿಕರಿಗೆ ವ್ಯಾಕ್ಸಿನ್ ನೀಡುವಲ್ಲಿ ಸರ್ಕಾರ ವಿಪಲವಾಗಿದ್ದು,ಲಾಕ್ ಡೌನ್ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಪರಿಹಾರ ಕಲ್ಪಿಸುವಲ್ಲಿ ಸರ್ಕಾರಗಳು ವಂಪೂರ್ಣ ವಿಫಲವಾಗಿವೆ.ಕೇಂದ್ರ ಸರ್ಕಾರ ರೈತರ ವಿರೋದಿ ಎಪಿಎಂಸಿ ಕಾಯ್ದೆ ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡಯಬೇಕಿದೆ, ರೈತರು ಬೆಳೆದ ಬೆಳೆಗೆ ಬೆಲೆ ನಿಗದಿಪಡಿಸಿದೆ ಭಾರತ ದೇಶದ ಆರ್ಥಿಕ ವ್ಯವಸ್ಥೆಯನ್ನು ಕುಸಿಯುವಂತೆ ಮಾಡಿದ್ದು.ಪರಿಸ್ಥಿತಿ ಬದಾಲಾಗದಿದ್ದರೆ ಜನಪರ ಕಾಳಜಿ ತೋರದಿದ್ದರೆ,ಮಿಂದಿನ ದಿನಗಳಲ್ಲಿ ಕಾಂಗ್ರೇಸ್ ಪಕ್ಷ ರಾಜ್ಯ ವ್ಯಾಪ್ತಿ ನೀಡಿ ಹೋರಾಟಗಳನ್ನು ಮಾಡಲಾಗುತ್ತದೆ ಎಂದು ಅವರು ಎಚ್ಚರಿಸಿದರು. ತಹಶಿಲ್ದಾರರಾದ ಟಿ.ಜಗದೀಶರಿಗೆ ಮನವಿ ಪತ್ರ ನೀಡಲಾಯಿತು,ಪಕ್ಷದ ಉಪಾಧ್ಯಕ್ಷೆ ರತ್ನಾ ಬಾಯಿ,ಕಾವೇರಿ,ವಸಂತ,ಭವಾನಿ,ಸುಮ್ಮಮ್ಮ ಸೇರಿದಂತೆ ಮತ್ತಿತರು ಇದ್ದರು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend