ಶಿಕ್ಷಣ ಮತ್ತು ಸಂಸ್ಕಾರ ಕಲಿಸುವುದರಿಂದ ಮಕ್ಕಳ ವ್ಯಕ್ತಿತ್ವ, ವಿಕಸನ ರೂಪುಗೊಳ್ಳುತ್ತದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ ನಾಗಪ್ಪ…!!!

Listen to this article

ಶಿಕ್ಷಣ ಮತ್ತು ಸಂಸ್ಕಾರ ಕಲಿಸುವುದರಿಂದ ಮಕ್ಕಳ ವ್ಯಕ್ತಿತ್ವ, ವಿಕಸನ ರೂಪುಗೊಳ್ಳುತ್ತದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ ನಾಗಪ್ಪ ಹೇಳಿದರು.
ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ಇಂದು ನಿಜ ಶರಣ ಅಂಬಿಗರ ಚೌಡಯ್ಯ ಯುವಕರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಒಂಟಿಗನಾಗಿ ಹೋರಾಟ ನಡೆಸುವುದು ಅಸಾದ್ಯ, ಹಾಗಾಗಿ ಸಂಘಟನೆ ಅತ್ಯವಶ್ಯಕವಾಗಿದೆ. ಇದರ ಮೂಲಕ ಅನ್ಯಾಯದ ವಿರುದ್ದ ಹೋರಾಟ ಮಾಡುವುದು, ತುಳಿತಕ್ಕೊಳಗಾದವರಿಗೆ ನ್ಯಾಯ ಕೊಡಿಸಬಹುದು ಎಂದರು.
12ನೇಯ ಶತಮಾನದಲ್ಲಿ ಜೀವಿಸಿದ್ದ ಅಂಬಿಗರ ಚೌಡಯ್ಯ ಶಿವಶರಣ ಹಾಗೂ ವಚನಗಾರರಾಗಿ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ತಾನೂ ಕೇವಲ ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟು ಹಾಕುವ ಅಂಬಿಗ ಮಾತ್ರವಲ್ಲಾ, ಭಮಸಾಗರದಲ್ಲೂ ಹುಟ್ಟು ಹಾಕುವ ಕೌಶ್ಯಲ್ಯವುಳ್ಳವುಳ್ಳವರಾಗಿದ್ದರು. ಅಂತಹ ಸಮುದಾಯದಲ್ಲಿ ಹುಟ್ಟಿರುವ ತಾವೂಗಳು ಭಾಗ್ಯ ಶಾಲಿಗಳು ಎಂದರು.
ಸಂಘದ ಅಧ್ಯಕ್ಷ ಭೈರಪ್ಪ ಮಾತನಾಡಿ, ನಮ್ಮ ಸಮುದಾಯವೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ತೀರಾ ಹಿಂದುಳಿದಿದೆ. ಹಲವು ತಲೆ ಮಾರುಗಳಿಂದಲೂ ನಮ್ಮ ವೃತ್ತಿಯಲ್ಲಿ ಬದುಕು ಕಳೆದಿದ್ದೇವೆ ಆದರೆ ಮುಂದಿನ ಪೀಳಿಗೆ ಪ್ರಜ್ಞಾವಂತ ಬುದ್ದಿ ಶಾಲಿಗಳಾಗಿ ಬೆಳೆಯಲು ಕಡ್ಡಾಯವಾಗಿ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿ ಉತ್ತಮ ವ್ಯಕ್ತಿಯನ್ನಾಗಿ ಬೆಳೆಸಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ನರೇಶ್, ಜಕವುಲ್ಲಾ, ಮಾಜಿ ಅಧ್ಯಕ್ಷ ಅಜ್ಜಯ್ಯ, ತಾ.ಪಂ ವಸತಿ ಯೋಜನೆ ನೋಡಲ್ ಅಧಿಕಾರಿ ತಿಮ್ಮೇಶ್, ಅರಣ್ಯ ರಕ್ಷಕ ಕೆ.ವಿ ಬಸವರಾಜ್, ಸಂಘದ ಉಪಾಧ್ಯಕ್ಷ ಏಕಾಂತಪ್ಪ, ಕಾರ್ಯದರ್ಶಿ ಅಹಮದ್ ಅಲಿ, ಪದಾಧಿಕಾರಿಗಳಾದ ಎ.ನಾಗೇಶ್, ರಾಜಪ್ಪ, ಸಿದ್ದೇಶ್, ಬಿ. ಮಹಾಂತೇಶ್, ಮುಖಂಡ ಯೋಗೇಶ್ ಇದ್ದರು.
(ಚಿತ್ರ-2ಜೆಎಲ್‍ಆರ್ ಸಂಘ ಉದ್ಘಾಟನೆ ಜುಲೈ 05)
ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಯುವಕರ ಸಂಘವನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ ನಾಗಪ್ಪ ಉದ್ಘಾಟಿಸಿದರು. ಗ್ರಾ.ಪಂ ಸದಸ್ಯರಾದ ನರೇಶ್, ಜಕವುಲ್ಲಾ, ಮಾಜಿ ಅಧ್ಯಕ್ಷ ಅಜ್ಜಯ್ಯ, ತಾ.ಪಂ ವಸತಿ ಯೋಜನೆ ನೋಡಲ್ ಅಧಿಕಾರಿ ತಿಮ್ಮೇಶ್, ಅರಣ್ಯ ರಕ್ಷಕ ಕೆ.ವಿ ಬಸವರಾಜ್ ಇದ್ದರು.

ವರದಿ. ಸಂದೀಪ್, ಸಿ, ಎಂ, ಹೊಳೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend