ಕೂಡ್ಲಿಗಿ :-55 ದಿನ ಲಾಕ್ ಆಗಿದ್ದ ಬಸ್ಸುಗಳು ಇಂದು ರಸ್ತೆಗೆ ಇಳಿದಿವೆ…!!”

Listen to this article

ವರದಿ ಜೂನ್ 20 ಕೂಡ್ಲಿಗಿ

55 ದಿನ ಲಾಕ್ ಆಗಿದ್ದ ಬಸ್ಸುಗಳು ಇಂದು ರಸ್ತೆಗೆ ಇಳಿದಿವೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಕೆಎಸ್ಸಾರ್ಟಿಸಿ ಬಸ್ಸುಗಳು ಈ ದಿನ ಬೆಳಿಗ್ಗೆ 6 ಗಂಟೆಯಿಂದಲೇ ರಸ್ತೆಯಲ್ಲಿ ಸಂಚರಿಸಲು ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ಪ್ಲಾಟ್ ಫಾರಂನಲ್ಲಿ ರೆಡಿಯಾಗಿ ನಿಂತಿವೆ. ಆದರೆ ಸರ್ಕಾರ ಜಾರಿಮಾಡಿದ ಲಾಕ್ಡೌನ್ ನಲ್ಲಿ ಜನರು ಇದ್ದು ಇನ್ನು ಹೊರಗಡೆ ಬರುವಲ್ಲಿ ಆಮೆ ಓಟದ ನಡೆ ಪ್ರಯಾಣಿಕರು ನಿಲ್ದಾಣದ ಕಡೆ ಬರುತ್ತಾ ಇದ್ದು ನಿರ್ವಾಹಕ ಮತ್ತು ಚಾಲಕರು ಪ್ರಯಾಣಿಕರ ಬರುವಿಕೆಗಾಗಿ ಕಾಯುತ್ತಿರುವ ದೃಶ್ಯ ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ಕಾಣುತ್ತಿದ್ದು ಈಗಾಗಲೇ ಕೂಡ್ಲಿಗಿಯಿಂದ ಹೊಸಪೇಟೆ ಕೊಟ್ಟೂರು ಸಂಡೂರು ಬಳ್ಳಾರಿ ರಾಂಪುರ ಬಳ್ಳಾರಿ ಹಾಗೂ ಬೆಂಗಳೂರು ಮಾರ್ಗವಾಗಿ ಸಾರಿಗೆ ಬಸ್ಸುಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಈಗಾಗಲೇ ಬಿಡಲಾಗಿದ್ದು ಈ ದಿನದ ಸ್ಥಿತಿಯನ್ನು ನೋಡಿಕೊಂಡು ಉಳಿದ ಮಾರ್ಗಗಳ ಬಸ್ಸುಗಳನ್ನು ಪ್ರಯಾಣಿಕರಿಗೆ ತಮ್ಮ ಗ್ರಾಮಗಳಿಗೆ ಹೋಗಲು ಕಲ್ಪಿಸಲಾಗುವುದು ನಾವು ಎಲ್ಲಾ ಮಾರ್ಗಗಳಿಗೆ ವಾಹನಗಳನ್ನು ಬಿಡಲು ಸಿದ್ಧರಿದ್ದು ಪ್ರಯಾಣಿಕರು ಬರುತ್ತಿಲ್ಲ ವಾಹನದಲ್ಲಿ ಕೋವಿಡ್ 19 ರ ಹಾಗೂ ನಮ್ಮ ಮೇಲಧಿಕಾರಿಗಳ ಆದೇಶದ ಮೇರೆಗೆ ನಿಯಮವನ್ನು ಎಲ್ಲಾ ಚಾಲಕ ಮತ್ತು ನಿರ್ವಾಹಕರು ಪಾಲಿಸಲು ತಿಳಿಸಿದ್ದು ಪ್ರತಿಯೊಬ್ಬರಿಗೆ N 95 ಮಾತುಗಳನ್ನ ಹಾಗೂ ಸ್ಯಾನಿಟೈಜರ್ ಅನ್ನ ನೀಡಲಾಗಿದ್ದು ನಿಯಮಗಳನ್ನು uಪಾಲಿಸಿ ವಾಹನವನ್ನು ನಡೆಸಿ ಎಂದು ಎಲ್ಲಾ ಸಿಬ್ಬಂದಿಗೆ ಕಟ್ಟುನಿಟ್ಟಾಗಿ ತಿಳಿಸಲಾಗಿದೆ ಎಂದು ಘಟಕ ವ್ಯವಸ್ಥಾಪಕರಾದ ಶ್ರೀನಿವಾಸ್ ಶರಣಪ್ಪ ಮುಂತಾದವರು ಉಪಸ್ಥಿತರಿದ್ದರ

ಬಾಕ್ಸ್ ಐಟಮ್ಸ್. ಕೂಡ್ಲಿಗಿ ಘಟಕದಲ್ಲಿ ಒಟ್ಟು 315 ಜನ ಸಿಬ್ಬಂದಿಗಳಿಗೆ ಕೋರೋಣ ತಡೆಗಟ್ಟಲು 55 ದಿನಗಳ ಕಾಲ ಯಾವುದೇ ವಾಹನವನ್ನು ರಸ್ತೆಗಿಳಿಸದೇ ಎಲ್ಲಾ ಸಿಬ್ಬಂದಿಗಳು ಸರ್ಕಾರದ ಆದೇಶದಂತೆ ಚಾಲನೆಯಲ್ಲಿದ್ದು ಈ ದಿನ ಬೆಳಿಗ್ಗೆ ಆರರಿಂದಲೇ ಕೆಲವು ಮಾರ್ಗಗಳನ್ನು ಪ್ರಾರಂಭಿಸಿದ್ದೇವೆ ಆದರೆ ಪ್ರಯಾಣಿಕರು ಬರಲು ಹಿಂದೇಟು ಹಾಕುತ್ತಿದ್ದು ನಾಳೆಯಿಂದ ಹೆಚ್ಚು ಪ್ರಯಾಣಿಕರು ಬರುವ ನಿರೀಕ್ಷೆಯಲ್ಲಿದ್ದು ಎಲ್ಲಾ ಮಾರ್ಗಗಳನ್ನು ಪ್ರಾರಂಭಿಸಲಿದ್ದೇವೆ ಈಗಾಗಲೇ ಸೇವೆಗೆ ಬರುವ ಎಲ್ಲಾ ಸಿಬ್ಬಂದಿಗಳು ಕೋವಿಡ್ 19 ಪರೀಕ್ಷಿಸಿಕೊಂಡು ಸೇವೆಯಲ್ಲಿ ಕಾರ್ಯಪ್ರವೃತ್ತರಾಗಿ ಪ್ರತಿ ವಾಹನದಲ್ಲಿ ನಿಗದಿಪಡಿಸಿದ ಸಂಖ್ಯೆಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯಲು ಆಗುವುದಿಲ್ಲ ಈಗಾಗಲೇ ಬೆಂಗಳೂರು ಹೊಸಪೇಟೆ ಬಳ್ಳಾರಿ ಕೊಟ್ಟೂರು ಮಾರ್ಗಗಳಿಗೆ ಬಸ್ ಸಂಚಾರ ಪ್ರಾರಂಭಿಸಿದ್ದೇವೆ.. ಇನ್ನು ಉಳಿದ ಎಲ್ಲಾ ಭಾಗಗಳಿಗೂ ಪ್ರಯಾಣಿಕರು ಬಂದರೆ ಬಸ್ಸುಗಳನ್ನು ಬಿಡಲು ನಾವು ಸಿದ್ಧರಿದ್ದೇವೆ ಪ್ರತಿಯೊಬ್ಬರು ಮಾಸ್ಕ್ ಧರಿಸಿ ಅಂತರ ಕಾಪಾಡಿ ಪ್ರಯಾಣಿಕರು ಸಹಕರಿಸಬೇಕು.. ಜಿಆರ್ ದಯಾನಂದ್ ಸಾರಿಗೆ ಇಲಾಖೆ ಘಟಕ ವ್ಯವಸ್ಥಾಪಕರು ಕೂಡ್ಲಿಗಿ.

ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend