ಹೂಡೇಂ: ಗ್ರಾ.ಪಂ14ನೇ ಹಣಕಾಸು ಉಳಿದ ಹಣ: ಕ್ರೀಡಾ ಸಾಮಗ್ರಿಗಳು ಹಾಗೂ ಕಂಪ್ಯೂಟರ್ ವಿತರಣೆ: ಪಿಡಿಓ ಮಹಂತೇಶ್..!!!

Listen to this article

ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿಯ 14ನೇ ಹಣಕಾಸು ನಲ್ಲಿ ಉಳಿದ ಹಣವನ್ನು ಶಾಲೆಗಳಿಗೆ ಕ್ರೀಡಾ ಸಾಮಾಗ್ರಿಗಳು, ಗ್ರಂಥಾಲಯಕ್ಕೆ ಕಂಪ್ಯೂಟರ್, ಅಂಗನವಾಡಿ ಕೇಂದ್ರಗಳಿಗೆ ಚೇರ್, ಆಟದ ಸಾಮಾನುಗಳು, ಗ್ಯಾಸ್ ಓಲೆಗಳು, ಆಟದ ಸಾಮಾನುಗಳು, ಗಾಡ್ರೇಜ್, ಸುಣ್ಣ-ಬಣ್ಣ ಮಾಡಿಸಿದರು. ಹಾಗೂ ಶಾಲೆಗಳಿಗೆ ಕ್ರೀಡಾ ಸಾಮಗ್ರಿಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಮಕ್ಕಳಿಗೆ ಆಟದ ಸಾಮಾನುಗಳು ವಿತರಣೆ ಮಾಡಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಹಾಂತೇಶ ಸ್ವಾಮಿ ಅವರು ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ, 14ನೆ ಹಣಕಾಸು ಯೋಜನೆಯಲ್ಲಿ ಉಳಿದ ಹಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೂಡೇಂ ಹಾಗೂ ತಾಯಕನಹಳ್ಳಿ ಸರಕಾರಿ ಪ್ರೌಢಶಾಲೆ ಮಕ್ಕಳಿಗೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ವಿತರಣೆ ಮಾಡಲಾಯಿತು. ಗ್ರಂಥಾಲಯದ ಸಂಗ್ರಹಗಳನ್ನು ವಿಷಯ, ಲೇಖಕ-ಲೇಖಕಿವಾರು ಜೋಡಿಸಲಾಗಿದೆ. ಸದಸ್ಯರು ತಮಗೆ ಬೇಕಾದ ಪುಸ್ತಕಗಳನ್ನು ಕಂಪ್ಯೂಟರ್ ಮೂಲಕವೇ ಆಯ್ದುಕೊಳ್ಳಬಹುದು. ದಾಖಲಾತಿ ಕ್ರಮವು ಇ-ಗ್ರಂಥಾಲಯ ತಂತ್ರಾಂಶ ಬಳಸಿ ಕಂಪ್ಯೂಟರಿನಲ್ಲೇ ವ್ಯವಸ್ಥೆ ಮಾಡಲಾಗಿದೆ. ಗ್ರಂಥಾಲಯದಲ್ಲಿ ಅತ್ಯುತ್ತಮ ಸಾಹಿತ್ಯ ಪುಸ್ತಕಗಳು, ಕಾದಂಬರಿಗಳು, ಆತ್ಮಚರಿತ್ರೆಗಳು, ವಿಜ್ಞಾನ, ತಂತ್ರಜ್ಞಾನ, ಕೃಷಿ ಆಧ್ಯಾತ್ಮಿಕ, ಆರೋಗ್ಯ, ವಾಸ್ತು, ಕಲೆ, ವಾಣಿಜ್ಯ, ಕಾನೂನು ಸಂಬಂಧಿತ ಪುಸ್ತಕಗಳು, ಸ್ಥಳ ಪುರಾಣಗಳು, ಮನಃಶಾಸ್ತ್ರ, ಶಿಕ್ಷಣ, ರಾಜಕೀಯ ಮುಂತಾದ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳು ಲಭ್ಯವಿದೆ.


ಇದರಿಂದ ಪುಸ್ತಕಗಳನ್ನು ಹುಡುಕುವ ಸಮಯ ಉಳಿಯಲಿದೆ. ಅಲ್ಲದೆ ತಮ್ಮ ಆಯ್ಕೆಯ ಪುಸ್ತಕಗಳು ಇತರ ಓದುಗರು ಕೊಂಡೊಯ್ದಿದ್ದರೆ ಅದನ್ನೂ ಕಂಪ್ಯೂಟರ್ ಮೂಲಕ ತಿಳಿಯಬಹುದುದಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಕರಿಬಸಮ್ಮ-ದುರ್ಗಪ್ಪ, ಸದಸ್ಯರುಗಳಾದ ರಾಮಚಂದ್ರಪ್ಪ , ಕುರಿ ಪಾಲಯ್ಯ, ಅಜ್ಜಣ್ಣ, ಶಶಿಕಲಾ ಜಯಣ್ಣ, ಸುಂದ್ರಮ್ಮ ಮಲ್ಲಿಕಾರ್ಜುನ್, ನಾಗಮ್ಮ ಗದ್ದಿ ಸ್ವಾಮಿ, ಎಲ್ಲಾ ಸದಸ್ಯರು, ಕಾರ್ಯದರ್ಶಿ ಚಂದ್ರಪ್ಪ, ಗ್ರಂಥಾಲಯ ಮೇಲ್ವಿಚಾರಕರು ಗುರುರಾಜ್, ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಉಪಸ್ಥಿತರು.

ವರದಿ. ಮಂಜುನಾಥ್, ಎಚ್, ಹೂಡೇo

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend