ನಾವಿಕನಿಲ್ಲದ ದೋಣಿಯಂತಾಗಿದೆ,ಹೂಡೇಂ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ…!!!

Listen to this article

ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ: ಆಸ್ಪತ್ರೆ ಸದ್ಯಕ್ಕೆ ನಾವಿಕನಿಲ್ಲದ ದೋಣಿಯಂತಾಗಿದೆ.? ಸುಮಾರು 25 ವರ್ಷ ಆಯಿತು ಈ ಆಸ್ಪತ್ರೆ ಓಪನ್ಆಗಿ. ಅಂದಿನಿಂದ ಕರುಣ ಟ್ರಸ್ಟ್ ಸಂಸ್ಥೆಯೊಂದು ಕಾಂಟ್ರಾಕ್ಟ್ ತೆಗೆದುಕೊಂಡು ನಿವಾರಿಸುತಿತ್ತು. ಒಂದು ತಿಂಗಳ ನಂತರ ಸರ್ಕಾರಕ್ಕೆ ಸೇರ್ಪಡೆ ಮಾಡಲಾಯಿತು. ಕಾರಣ ಒಂದು ತಿಂಗಳಿಂದ ಆಸ್ಪತ್ರೆಯ ಇಬ್ಬರು ಮುಖ್ಯ ವೈದ್ಯಾಧಿಕಾರಿಗಳಿಲ್ಲದೆ ಆಸ್ಪತ್ರೆ ಬಿಕೋ ಎನ್ನುತ್ತಿದೆ. ವೈದ್ಯರಿದ್ದು ಮೂಲಭೂತ ಸೌಲಭ್ಯಗಳ ಬಗ್ಗೆ ಸಾಮಾನ್ಯವಾಗಿ ದೂರುಗಳು ಕೇಳಿ ಬರುತ್ತವೆ, ಆದರೆ ಎಲ್ಲ ಸೌಕರ್ಯಗಳಿದ್ದರೂ ಸಮರ್ಪಕವಾಗಿ ರೋಗಿಗಳಿಗೆ ಅನುಕೂಲವಾಗದೆ ದಿನನಿತ್ಯ 50ರಿಂದ 100 ರೋಗಿಗಳು ಬಂದ ದಾರಿಗೆ ಸುಂಕವಿಲ್ಲದಂತೆ ನಿರಾಶೆಯಿಂದ ಮರಳುತ್ತಿದ್ದಾರೆ.

ಹೂಡೇಂ ಸರ್ಕಾರಿ ಆಸ್ಪತ್ರೆಯ ಕತೆಯ ವ್ಯಥೆ.?

ಹೂಡೇಂ ಉಪಕೇಂದ್ರ ಇದು ಗಡಿಗ್ರಾಮ ಆಗಿರುವುದರಿಂದ ಸುತ್ತಲಿನ 38 ಹಳ್ಳಿಗಳು ಸೇರುತ್ತವೆ.. ಗ್ರಾಮಸ್ಥರಿಗೆ ತುರ್ತಾಗಿ ಚಿಕಿತ್ಸೆ ಬೇಕಾದರೆ ಸರಕಾರಿ ಆಸ್ಪತ್ರೆಯಿಂದ ನೆರವು ದೊರಕುತ್ತಿತ್ತು. ಇಲ್ಲಿ ಖಾಯಂ ಇಬ್ಬರು ವೈದ್ಯರು ಸರಕಾರಿ ಆಯುರ್ವೇದಿಕ್ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಈ ಎರಡು ಆಸ್ಪತ್ರೆಗಳು ಇದ್ದು ನಿರಂತರ ಸೇವೆ ಸಲ್ಲಿಸುತ್ತಿದ್ದ ಕಾರಣ. ವೈದ್ಯರು ಇಲ್ಲ ಬಿಕೋ….. ವೈದ್ಯರು ವಾರಕ್ಕೆ ಎರಡು ಬಾರಿ ಬೇಟಿ..ಕಾರಣ ಕೇಳಿದರೆ ನಮ್ಮನ್ನು ಬೇರೆ ಕಡೆ ಡ್ಯೂಟಿಗೆ ಹಾಕಿದ್ದಾರೆ ಎಂದು ಉತ್ತರಿಸುತ್ತಾರೆ..

ರೋಗಿಗಳಿಗೆ ಅದರಲ್ಲಿಯೂ ಬಡ ಜನತೆಗೆ ಆಸ್ಪತ್ರೆ ವರದಾನವಾಗಿತ್ತು. ರೋಗಿಗಳು ಪರದಾಡುತ್ತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಹ ಅನಿವಾರ್ಯತೆ ಉಂಟಾಗಿದೆ. ಗ್ರಾಮೀಣ ಭಾಗದಿಂದ ಅನಾರೋಗ್ಯದಿಂದ ಬಳಲಿ ವಾಹನಗಳ ಮೂಲಕ ಆಸ್ಪತ್ರೆಗೆ ಬರುವ ರೋಗಿಗಳು ವೈದ್ಯರೂ ಇಲ್ಲದ ಕಾರಣ ಸುಸ್ತಾಗಿ ಆಸ್ಪತ್ರೆಯ ಮುಂದಿನ ಕಟ್ಟಯಲ್ಲಿ ಮಲಗಿ ನಂತರ ಖಾಸಗಿ ಆಸ್ಪತ್ರೆಯತ್ತ ಕಾಲು ಹಾಕುತ್ತಿದ್ದಾರೆ.

*ಆಂಬುಲೆನ್ಸ್ ಕೊರತೆ: ಈ ಆಸ್ಪತ್ರೆಯಲ್ಲಿ ಅಂಬುಲೆನ್ಸ್ ಕೊರತೆ; ಹೂಡೇಂ ಉಪಕೇಂದ್ರವಾಗಿದ್ದು ಆಸ್ಪತ್ರೆಗೆ ಸುಮಾರು 38 ಹಳ್ಳಿಗಳು ಸೇರುತ್ತವೆ. ಈ ಆಸ್ಪತ್ರೆಗೆ ಅಂಬುಲೆನ್ಸ್ ಬೇಕು ಅಂದ್ರೆ, ಕೂಡ್ಲಿಗಿ 45 ಕಿ.ಮೀಟರ್ ದೂರ, ಮೊಳಕಾಲ್ಮೂರು 35 ಕಿ.ಮೀಟರ್, ಹಾಗೂ ನಾಯಕನಟ್ಟಿ 35 ಕಿ.ಮೀಟರ್, ಎಮರ್ಜೆನ್ಸಿ ಕೇಸ್ ಇದ್ರೆ 1:00 ಗಂಟೆ ಕಾಯಬೇಕು. ಈ ಆಸ್ಪತ್ರೆಯಲ್ಲಿ ಇದುವರೆಗೂ ಹತ್ತು ಸಾವು ಆಗಿದ್ದಾವೆ, ಅಂಬುಲೆನ್ಸ್ ಕೊರತೆಯಿಂದ, ಹಾಗೂ ಆಕ್ಸಿಜನ್ ಕೊರತೆ, ರೋಗಿಗಳಿಗೆ ಬಾತ್ರೂಮ್ ಸ್ವಚ್ಛತೆ ಇಲ್ಲ, ಎಂದು ರೋಗಿಗಳು ದೂರ್ ಇರುತ್ತಾರೆ ಹಾಗೂ ಹೂಡೇಂ ಗ್ರಾಮದ ಟುಕೇಶ್ ಸಮಾಜ ಸೇವಕರು, ಊರಿನ ಸಾರ್ವಜನಿಕರು ದೂರುತ್ತಾರೆ.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend