ಬಿಬಿತಾಂಡ:ಬಾಯಿ ಬಾಯಿ ಬಡಿದು ಕೊಂಡ್ರೂ ಬ‍ಾಯಿ ತುಂಬ ನೀರು ಬಿಡುವಲ್ರು…!!!ಬಿಬಿತಾಂಡ:ಬಾಯಿ ಬಾಯಿ ಬಡಿದು ಕೊಂಡ್ರೂ ಬ‍ಾಯಿ ತುಂಬ ನೀರು ಬಿಡುವಲ್ರು.

Listen to this article

*ಬಿಬಿತಾಂಡ:ಬಾಯಿ ಬಾಯಿ ಬಡಿದು ಕೊಂಡ್ರೂ ಬ‍ಾಯಿ ತುಂಬ ನೀರು ಬಿಡುವಲ್ರು..*- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಶಿವಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿ,ಬಂಡೇ ಬಸಾಪುರ ತಾಂಡ ಗ್ರಾಮದಲ್ಲಿ
ನೀರಿಗಾಗಿ ದಿನಪೂರ್ತಿ ಸರತಿ ಸಾಲಲ್ಲಿ ನಿಂತರೂ ನಿತ್ಯ ಬಳಕೆಗೆ ನೀರು ಸಾಲೋದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.ಗ್ರಾಮದಲ್ಲಿಯ ಪ್ರಭಾವಿಗಳಿರುವ ಭಾಗದಲ್ಲಿ ಸಮರ್ಪಕ ನೀರು ಪೂರೈಕೆಯಾಗುತ್ತಿದೆ.ಕೂಲಿ ನಾಲಿ ಮಾಡೋ ರೈತಾಪಿ ವರ್ಗ ಗುಳೇಯಿಂದ ಮರಳಿ ಬಂದವರಿಗೆ ನೀರು ದೊರಕದಂತಾಗಿದೆ ಎಂದು ದೂರಿದ್ದಾರೆ.ಸಾವಿರಾರು ಜನ ಸಂಖ್ಯೆಗೆ ಕೇವಲ ಬೆರಳೆಣಿಕೆಯಷ್ಟು ಕಡೆಗಳಲ್ಲಿ ನೀರಿನ ಪೂರೈಕೆ ಮಾಡುತ್ತಿದ್ದು,ಅನಿವಾರ್ಯವಾಗಿ ನೀರಿಗಾಗಿ ಪರದಾಡುವಂತಾಗಿದ್ದು ಹಗಲಿರುಳು ಸರತಿ ನಿಂತರೂ ಕೂಡ ಸಾಕಾಗುವಷ್ಟು ನೀರು ದೊರಕಲ್ಲ. ಸಾಕಷ್ಟು ನೀರಿಗಾಗಿ ಪರಸ್ಪರ ಜನರು ಕಾದಾಡುವ ಗಂಭೀರ ಪ್ರಸಂಗಗಳೂ ಜರುಗಿವೆ,ಹಲವು ತಿಂಗಳುಗಳಿಂದ ಈ ಕುರಿತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದೂ ಪ್ರಯೋಜನವಾಗಿಲ್ಲ.
*ಕೋವಿಡ್ ನಿಯಮ ಗಾಳಿಗೆ.. -ಅಧಿಕಾರಿಗಳ ನಿರ್ಲಕ್ಷ್ಯಕಾರಣ.!?*- ಗುಳೇ ಹೋಗಿರುವವರು ಮರಳಿ ಬಂದ ಹಿನ್ನಲೆಯಲ್ಲಿ ಗ್ರಾಮಸ್ಥರ ಜನ ಸಂಖ್ಯೆ ಹೆಚ್ಚಿದ್ದು,ಅದಕ್ಕನುಗಣವಾಗಿ ನೀರು ಪೂರೈಕೆ ಮಾಡೋ ಸಾಮಾನ್ಯ ಜ್ಞಾನವಿಲ್ಲದ ಹಾಗೂ ಕೇವಲ ಭ್ರಷ್ಠ ಜನಪ್ರತಿನಿಧಿಗಳ ಕೈಗೊಂಬೆಯಂತೆ ವರ್ತಿಸುತ್ತಿರುವ,ನಿರ್ಲಕ್ಷ್ಯ ಧೋರಣೆಯ ಗ್ರಾಪಂ ಅಧಿಕಾರಿಗಳಿಂದಾಗಿ ಈ ದುರಾವಸ್ಥೆಯಾಗಿದೆ ಎಂದು ತಾಂಡಾದ ಯುವಕರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.ನೀರಿಗಾಗಿ ಹತ್ತಾರು ಜನರು ನೀರಿಗಾಗಿ ಒಬ್ಬರ ಮೇಲೊಬ್ಬರು ಮುಗಿ ಬೀಳೋದು ಇಲ್ಲಿ ಸಾಮಾನ್ಯ,ಕರೋನಾ ನಿಯಮಗಳು ಇಲ್ಲಿ ಗಾಳಿಯ ಮಾತಾಗಿವೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂದು ದೂರಲಾಗಿದೆ.
ಇಲ್ಲಿ ಆಡಲಿತ ಪಕ್ಷದವರೂ ವಿರೋಧ ಪಕ್ಷದವರು,ಸಂಘ ಸಂಸ್ಥೆಗಳು, ಸಮಾಜ ಸೇವಕರು ಬಿಟ್ಟಿ ಪ್ರಚಾರಕ್ಕೆ ಸೀಮಿತವಾಗಿದ್ದಾರೆ ಎನ್ನುತ್ತಾರೆ ಗ್ರಾಮದ ಪ್ರಜ್ಞಾವಂತರು.
ಇಂತಹ ದುಸ್ಥಿತಿಯಲ್ಲಿ ಕರೋನ ನಿಯಮ ಪಾಲಿಸಿವುದು ಅಸಾಧ್ಯವಾಗಿದ್ದು,ತಾವು ನಿಯಮ ಪಾಲಿಸುಂತೆ ಎಷ್ಟು ಬೊಬ್ಬೆ ಹೊಡೆದು ಕೊಂಡ್ರೂ ಕೇಳೋ ಪರಿಸ್ಥಿತಿಯಲ್ಲಿ ಕೆಲವು ಗ್ರಾಮಸ್ಥರಿಲ್ಲ.ಗುಳೇಯಿಂದ ಬಂದ ಕುಟುಂಬಗಳಿಗೆ ಈ ರೀತಿ ಶಿಕ್ಷೆ ನೀಡಲಾಗಿದ್ದು ಗಾಯದ ಮೇಲೆ ಬರೆ ಎಳೆದಂತಿದೆ ಎಂದು ಯುವ ಮುಖಂಡ ಲಕ್ಷ್ಮೀಪತಿ ನಾಯ್ಕ ದೂರಿದ್ದಾರೆ. ಒಟ್ಟು ಜನ ಸಂಖ್ಯೆಗೂ ನೀರಿನ ವ್ಯವಸ್ಥೆಗೂ ಸಂಬಂಧನೇ ಇಲ್ಲ,ಈಗ್ಗೆ ಸರಬರಾಜಾಗುತ್ತಿರುವ ನೀರು ಯಾವುದಕ್ಕೂ ಸಾಲದಾಗಿದೆ
ಅಗತ್ಯ ನೀರಿಗಾಗಿ ಸಾಕಷ್ಟು ಬಾರಿ ಮನವಿ ಮಾಡಿದ್ದು ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮದ ಯುವ ಮುಖಂಡ ಲಕ್ಷ್ಮೀಪತಿನಾಯ್ಕ.ಗ್ರಾಮದಲ್ಲಿ ಹಲವು ಗ್ರಾಪಂ ಸದಸ್ಯರಿದ್ದು ಮತ್ತು ತಾಲೂಕು ಪಂಚಾಯ್ತಿ ಸದಸ್ಯರಿದ್ದು ಅವರ್ಯಾರೂ ಪ್ರಯೋಜನವಿಲ್ಲ,
ತಾಲೂಕಾಡಳಿತದಿಂದ ಕೂಗಳತೆ ದೂರದಲ್ಲಿದೆ ಯಾದರೂ ಅಧಿಕಾರಿಗಳು ತಮ್ಮ ಗೋಳು ಆಲಿಸದಿರುವುದು ಖಂಡನೀಯ ಎಂದು ಗ್ರಾಮಸ್ತರು ಆಕ್ರೋಶ ವ್ಯೆಕ್ತಪಡಸಿದ್ದಾರೆ.ಸಂಬಂಧಿಸಿದ ಇಲಾಖಾಧಿಕಾರಿಗಳು ಪರಿಸ್ಥಿತಿಯ ಗಂಭೀರತೆಯನ್ನ ಅರಿಯ ಬೇಕಿದೆ, ತಾಂಡದಲ್ಲಿ ನಿರ್ಮಾಣವಾಗಿರುವ ನೀರಿನ ಸಮಸ್ಯಗೆ ಶೀಘ್ರವೇ ಖಾಯಂ ಪರಿಹಾರ ಒದಗಿಸಬೇಕಿದೆ, ನಿರ್ಲಕ್ಷ್ಯ ತೋರಿದ್ದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಹಾಗೇ ಮುಂದುವರೆದು,ಪರಿಸ್ಥಿತಿ ವಿಕೋಪಕ್ಕೆ ತಿರುಗುವ ದುಸ್ಥಿತಿ ನಿರ್ಮಾಣವಾಗಬಹುದಾಗಿದೆ ಎಂದು ಗ್ರಾಮದ ಪ್ರಜ್ಞಾನವಂತ ಯುವ ಸಮೂಹ ತಾಲೂಕಾಡಳಿತಕ್ಕೆ ಈ ಮೂಲಕ ಎಚ್ಚರಿಸಿದೆ.
ಶಿಘ್ರವೇ ತಹಶಿಲ್ದಾರರು ಹಾಗೂ ತಾಪಂ ಅಧಕಾರಿಗಳು ಭೆಟ್ಟಿ ನೀಡಿ ಪರಿಶೀಲಿಸಿ ನೀರಿನ ವ್ಯವಸ್ಥೆ ಮಾಡಿಕೊಡಬೇಕು,ಮತ್ತು ತಾಂಡದಲ್ಲಿ ಕೆಲವೆಡೆಯಲ್ಲಿ ನೈರ್ಮಲ್ಯತೆಗೆ ಕ್ರಮ ಜರುಗಿಸಬೇಕು ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ತಾಂಡದ ಗ್ರಾಮಸ್ಥರು ಈ ಮೂಲಕ ಒತ್ತಾಯಿಸಿದ್ದಾರೆ.

*ಡಿ ಎಂ ಈಶ್ವರಪ್ಪ ಸಿದ್ದಾಪುರ*

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend