ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸ್ಥಗಿತಕ್ಕೆ ಭಾರತ ಕಮ್ಯುನಿಷ್ಟ ಪಕ್ಷ ವಿರೋಧ*

Listen to this article

ವರದಿ.ಬಸವರಾಜ್ ಹಡಗಲಿ

*ಭಾರತ ಕಮ್ಯುನಿಸ್ಟ್ ಪಕ್ಷ*
*ತಾಲೂಕು ಮಂಡಳಿ*
*ಹೂವಿನ ಹಡಗಲಿ*

*ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸ್ಥಗಿತಕ್ಕೆ ಭಾರತ ಕಮ್ಯುನಿಷ್ಟ ಪಕ್ಷ ವಿರೋಧ*

ರಾಜ್ಯ ಸರ್ಕಾರ ತಾನು ಘೋಷಣೆ ಮಾಡಿರುವ ಲಾಕ್‌ಡೌನ್ ಅವಧಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸ್ಥಗಿತಗೊಳಿಸಿರುವುದರಿಂದ ಲಕ್ಷಾಂತರ ಭೂರಹಿತ ಕೃಷಿಕೂಲಿಕಾರರು ಹಸಿವಿನಿಂದ ಸಾಯುವಂತಾಗಿದೆ. ಕರ್ನಾಟಕದ ಲಕ್ಷಾಂತರ ಬಡ ದಲಿತ ಮತ್ತು ಹಿಂದುಳಿದ ಕುಟುಂಬಗಳು ತಮ್ಮ ದೈನಂದಿನ ಕೂಲಿಗಾಗಿ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಅವಲಂಬಿಸಿವೆ. ಕೋವಿಡ್-19 ಪರಿಸ್ಥಿತಿಯಿಂದ ಗ್ರಾಮೀಣ ಪ್ರದೇಶಗಳ ಕೃಷಿ ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ನಡೆಯಲು ಸಾಧ್ಯವವಾಗದೇ ಇರುವುದು ಮತ್ತು ಸ್ವಂತ ಉದ್ಯೋಗಗಳನ್ನು ಅವಲಂಬಿಸಿರುವ ಜನತೆ ಲಾಕಡೌನ್/ ಕರ್ಪ್ಯೂ ಅವಧಿಯಲ್ಲಿ ಕೆಲಸವಿಲ್ಲದ ದೈನಂದಿನ ದುಡಿಮೆಯನ್ನು ಕಳೆದುಕೊಂಡಿದ್ದಾರೆ. ಈಗ ಸರ್ಕಾರ ಪಡಿತರ ವ್ಯವಸ್ಥೆಯಲ್ಲಿ ಅಗತ್ಯ ವಸ್ತುಗಳನ್ನು ನೀಡುತ್ತಿಲ್ಲ. ಇತ್ತ ಆಹಾರ ಭದ್ರತೆ ಮತ್ತು ಕೂಲಿ ಎರಡನ್ನೂ ಕಿತ್ತುಕೊಂಡು ರಾಜ್ಯದ ಲಕ್ಷಾಂತರ ದುಡಿಯುವ ಜನರ ಕುಟುಂಬಗಳನ್ನು ಅಕ್ಷರಶಃ ಹಸಿವಿನಿಂದ ಸಾಯುವಂತಹ ಸ್ಥಿತಿಗೆ ತಳ್ಳಿದೆ. ಸರ್ಕಾರ ಕೂಡಲೇ ಜನರಿಗೆ ಎಲ್ಲಾ ರೀತಿಯ ಸುರಕ್ಷತೆ ಒದಗಿಸಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ನೀಡಬೇಕು, ಇಲ್ಲದೇ ಈ ಕುಟುಂಬಗಳಿಗೆ ನಿರುದ್ಯೋಗ ಭತ್ಯೆ ನೀಡಲು ಮುಂದಾಗಬೇಕು. ಮುಖ್ಯಮಂತ್ರಿಗಳು ಯಾವುದೇ ರೀತಿಯಲ್ಲೂ ಲಾಕ್‌ಡೌನ್ ಆವಧಿಯಲ್ಲಿ ಪರಿಹಾರ ನೀಡುವುದಿಲ್ಲ ಎಂದಿರುವುದು ರಾಜ್ಯದ ಜನತೆಗೆ ಎಸಗಿರುವ ದ್ರೋಹ ಎಂದು ಭಾರತ ಕಮ್ಯುನಿಸ್ಟ್ ಪಕ್ಷ ಅಭಿಪ್ರಾಯಪಡುತ್ತದೆ, ಹಾಗೂ ಈಗಾಗಲೇ ಇತರ ನೆರೆಹೊರೆಯ ರಾಜ್ಯಗಳಲ್ಲಿ ಕೋವಿಡ್ ಪರಿಹಾರವಾಗಿ ಆಯಾ ರಾಜ್ಯ ಸರ್ಕಾರಗಳು ತಮ್ಮ ಜನರಿಗೆ ಹಣಕಾಸಿನ ಮತ್ತು ದಿನಬಳಕ ಆಹಾರ ಪ್ಯಾಕೇಜ್‌ಗಳನ್ನು ಒದಗಿಸುತ್ತಿವೆ. ನಮ್ಮ ರಾಜ್ಯದಲ್ಲಿ ಜನತೆ ಹಸಿವು ಮತ್ತು ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದರೂ ಸರ್ಕಾರ ಅತ್ಯಂತ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿರುವುದು ಶೋಚನೀಯ. ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿರುವ ಅಗತ್ಯವಾಗಿ ಆಗಬೇಕಿರುವ ಕಾಮಗಾರಿಗಳ ಅನುದಾನವನ್ನು ಹೊರತುಪಡಿಸಿ ಉಳಿದ ಎಲ್ಲ ಕಾರ್ಯಕ್ರಮಗಳ ಅನುದಾನವನ್ನು ಕ್ರೋಢೀಕರಿಸಿ ಕೋವಿಡ್ ಸಂದರ್ಭದಲ್ಲಿ ರಾಜ್ಯದ ಬಡಜನತೆಗೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ ಆಗ್ರಹಿಸುತ್ತದೆ.

ಗ್ರಾಮೀಣ ಪ್ರದೇಶದಲ್ಲಿ ಹೋಮ್ ಕ್ವಾರೆಂಟೈನ್‌ನಿಂದ ಸೋಂಕು ಹರಡುವ ಸಾದ್ಯತೆ ಅಧಿಕ ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸ್ವಂತ ಮನೆಯಿಲ್ಲದೆ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಬಹುತೇಕ ಮನೆಗಳಲ್ಲಿ ಪ್ರತ್ಯೇಕ ಕೊಠಡಿ ಇಲ್ಲದೆ ಒಂದೇ ಕೋಣೆಯಲ್ಲಿ ಜನ ಜೀವನ ಸಾಗಿಸುತ್ತಿದ್ದಾರೆ. ಇನ್ನು ಬಹಳಷ್ಟು ಬಡ ಕುಟುಂಬಗಳು, ಅದರಲ್ಲೂ ದಲಿತ ಕಾಲೋನಿಗಳಲ್ಲಿ ಒಂದೇ ಮನೆಯಲ್ಲಿ ಹಲವು ಕುಟುಂಬಗಳು ವಾಸಿಸುತ್ತಿವೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೋಂ ಐಸೋಲೇಷನ್ ಮಾಡುವುದು ದುಸ್ತರ. ಈಗಾಗಲೇ ಕೋವಿಡ್ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದೆ. ಸರ್ಕಾರ ಗ್ರಾಮೀಣ ಬಡಜನರಿಗೆ ಐಸೊಲೇಷನ್ ಕೇಂದ್ರಗಳನ್ನು ತೆರೆಯದೇ ಹೋದಲ್ಲಿ ಕರ್ನಾಟಕದ ಹಳ್ಳಿಗಳು ಸಾವಿನ ಕೂಪಗಳಾಗುತ್ತವೆ. ಆದುದರಿಂದ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತ ಕೋವಿಡ್ ಐಸೊಲೇಷನ್ ಕೇಂದ್ರಗಳನ್ನು ಆರಂಭಿಸುವುದು ಇಂದಿನ ತುರ್ತು ಅಗತ್ಯ. ಕೂಡಲೇ ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಳ್ಳಲು ಭಾರತ ಕಮ್ಯುನಿಸ್ಟ್ ಪಕ್ಷ ತಾಲೂಕು ಮಂಡಳಿ ಆಗ್ರಹಿಸುತ್ತದೆ.

ಮುಖಂಡರುಗಳಾದ
ಹಲಗಿ ಸುರೇಶ. ಶಾಂತರಾಜ್ ಜೈನ. ಬಸವರಾಜ ಸಂಶಿ. ದಯಾನಂದ ಎಂ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend