ಕೂಡ್ಲಿಗಿ:ಲಾಕ್ ಡೌನ್ ಗೆ ಸಾರ್ವಜನಿಕರ ಸಹಕಾರ ಅಗತ್ಯ- ಡಿವೈಎಸ್ಪಿ ಜಿ.ಹರೀಶ್*

Listen to this article

*ಕೂಡ್ಲಿಗಿ:ಲಾಕ್ ಡೌನ್ ಗೆ ಸಾರ್ವಜನಿಕರ ಸಹಕಾರ ಅಗತ್ಯ- ಡಿವೈಎಸ್ಪಿ ಜಿ.ಹರೀಶ್*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಸಾರ್ವಜನಿಕರಿಂದ ಲಾಕ್ ಡೌನ್ ಗೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ದೊರಕಿದೆ,
ಈ ಹಿನ್ನಲೆಯಲ್ಲಿ ಕೂಡ್ಲಿಗಿ ಡಿವೈಎಸ್ಪಿ ಜಿ.ಹರೀಶ್ ರವರು ಮಾತನಾಡಿ,ಲಾಕ್ ಡೌನ್ ಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಿದೆ.
ಪರಿಸ್ಥಿತಿಯ ಗಂಭೀರತೆ ಅರಿತುಕೊಂಡು ಎಲ್ಲರೂ ಕೋವಿಡ್ ನಿಯಮ ಗಳನ್ನ ಪಾಲಿಸಬೇಕು ಹಾಗೂ ಸರ್ಕಾರ ವಿಧಿಸಿರುವ ಲಾಕ್ ಡೌನ್ ಎಲ್ಲರೂ ಸ್ವಂಪ್ರೇರಿತವಾಗಿ ಪಾಲಿಸಲೇಕಾಗಿದೆ. ಇಲಾಖೆಯ ಕರ್ಥವ್ಯಕ್ಕೆ ಸಹನೆಯಿಂದ ತಾಳ್ಮೆಯಿಂದ ಸಹಕಾರ ನೀಡಬೇಕು, ಕಾನೂನು ಉಲ್ಲಂಘಸಿದ್ದಲ್ಲಿ ಕರ್ಥವ್ಯಕ್ಕೆ ಆಡ್ಡಿಪಡಿಸಿದ್ದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಖಂಡಿತ ಜರುಗಿಸಲಾಗುವುದು ಎಂದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಕೂಡ್ಲಿಗಿ ಪಟ್ಟಣದಾದ್ಯಂತ ವಾಹನಗಳ ತಪಾಸಣೆ ನಡೆಸುತ್ತಿದ್ದು , ಅನಗತ್ಯವಾಗಿ ಓಡಾಡುತ್ತಿರುವ ವಾಹನಗಳನ್ನು ಸೀಜ್ ಮಾಡಿದ್ದಾರೆ.
ಲಾಕ್ ಡೌನ್ ಜಾರಿಗೊಳಿಸಿದ್ದರೂ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಿಗ್ಗೆ ಗಂಟೆಯಿಂದ 10 ಗಂಟೆಯವರೆಗೆ ಕಾಲಾವಕಾಶ ಮಾಡಿಕೊಡಲಾಗಿದೆ,
ಆ ಸಮಯದಲ್ಲಿ ಅಗತ್ಯ ಕಾರ್ಯಗಳನ್ನ ಮುಗಿಸಿಕೊಳ್ಳಬೇಕು ಜೊತೆಗೆ ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸಿಬೇಕಾಗಿದೆ.
ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಅನಿವಾರ್ಯವಾಗಿ ಸರ್ಕಾರ,ಮೇ 10 ರಿಂದ24 ರವರೆಗೆ ಲಾಕ್ ಡೌನ್ ಘೋಷಿಸಿದ್ದು,
ಈ ಸಂದರ್ಭದಲ್ಲಿ ಕಠಿಣ ನಿಯಮಗಳ ಪರಿಷ್ಕೃತ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದ್ದು.
ಕಾರಣ ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಸಹಕರಿಸಬೇಕೆಂದು ಡಿವೈಎಸ್ಪಿ ಜಿ.ಹರೀಶ್ ತಿಳಿಸಿದ್ದಾರೆ.

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend