ಕೂಡ್ಲಿಗಿ:ಅಗತ್ಯವಿದ್ದಲ್ಲಿ ಶೀಲ್ಡೌನ್,ನಕಲಿ ವೈಧ್ಯರ ವಿರುದ್ಧಕೇಸ್-ತಹಶಿಲ್ದಾರ್ ಎಸ್. ಮಹಾಬಲೇಶ್ವರ*

Listen to this article

*ಕೂಡ್ಲಿಗಿ:ಅಗತ್ಯವಿದ್ದಲ್ಲಿ ಶೀಲ್ಡೌನ್,ನಕಲಿ ವೈಧ್ಯರ ವಿರುದ್ಧಕೇಸ್-ತಹಶಿಲ್ದಾರ್ ಎಸ್. ಮಹಾಬಲೇಶ್ವರ*-ವಿಜಯನಗರ ಜಿಲ್ಲೆ ಕೂಡ್ಲಿಗಿ,ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಿಂದ ನಕಲಿ ವೈದ್ಯರ ಬಗ್ಗೆ ದೂರು ಕೇಳಿಬರುತಿದ್ದು.ಖಚಿತ ಮಾಹಿತಿ ಒದಗಿಸಿದ್ದಲ್ಲಿ ಅವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಿ, ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದೆಂದು ತಹಶಿಲ್ದಾರ್ ಎಸ್.ಮಹಾಬಲೇಶ್ವರ ತಿಳಿಸಿದರು.ಗ್ರಾಪಂ ಅಭಿವೃದ್ಧಿ ಅಧಕಾರಿಗಳ ಸಭೆಯಲ್ಲಿ ಮಾತನಾಡಿದರು,ಕೆಬಿಎಮ್ಇ ಪ್ರಮಾಣ ಪತ್ರ ಹೊಂದದ ನಕಲಿ ವೈದ್ಯರಿಂದಾಗಿ ಅಮಾಯಕರು ಬಲಿಯ‍ಾಗುತ್ತಿದ್ದಾರೆ.ಜನ ಆರ್ಥಿಕವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ ಅಂತವರಿದ್ದಲ್ಲಿ ಮಾಹಿತಿ ಕೊಡಿ ಎಂದರು.
*ಸೋಂಕಿತರ ಬಗ್ಗೆ ತೀವ್ರ ನಿಗಾ*-ಸೋಂಕಿತರು ಸಂಪರ್ಕಕ್ಕೆ ಬಾರದಂತೆ ಜಾಗ್ರತೆ ವಹಿಸಬೇಕು, ತೀವ್ರ ನಿಗಾವಹಿಸುವ ಜವಾಬ್ದಾರಿ ಪಿಡಿಓಗಳ ಮೇಲಿದೆ ಎಂದು ತಹಶಿಲ್ದಾರ ಎಸ್.ಮಹಾಬಲೇಶ್ವರ ಸೂಚಿಸಿದ್ದಾರೆ.ಸೋಂಕು ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಶೀಘ್ರವಾಗಿ ಕೈಗೊಳ್ಳಬೇಕು,ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದರು.
ಕಳೆದ ವರ್ಷದ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತಾಲೂಕಾಡಳಿತದೊಂದಿಗೆ ಪಿಡಿಓ ಗಳ ಸಹಕಾರ ಮಹತ್ವದ್ದಾಗಿತ್ತು, ಇದು ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಗಮನಿಸಿದ್ದು ಪಿಡಿಓಗಳ ಬಗ್ಗೆ ಸಚಿವರಿಂದ ಪ್ರಶಂಸೆ ವ್ಯೆಕ್ತವಾಗಿದೆ. ಸೋಂಕು ಪ್ರಮಾಣ ನಿಂತ್ರಿಸುವ ಕಾರ್ಯದಲ್ಲಿ ತಾಲೂಕಾಡಳಿತದಿಂದ ಸಂಪೂರ್ಣ ಸಹಕಾರ ಇರುತ್ತದೆ, ನಿರ್ಲಕ್ಷ್ಯ ವಹಿಸುವ ಅಥವಾ ಕರ್ಥವ್ಯ ಲೋಪ ಎಸಗುವ ಪಿಡಿಓ ಹಾಗೂ ಸಿಬ್ಬಂದಿ ಗಳ ವಿರುದ್ಧ ನಿರ್ಧಾಕ್ಷಿಣ್ಯ ಶಿಸ್ಥು ಕ್ರಮ ಖಚಿತ ಎಂದು ಅವರು ಎಚ್ಚರಿಸಿದರು.
*ಅಕ್ರಮ ಮದ್ಯ ಮಾರಾಟ ನಿಲ್ಲಿಸಿ-ಇಓ ಬಸಣ್ಣ ಸೂಚನೆ*:- ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಜರುಗುತ್ತಿರುವುದಾಗಿ, ಅದರಿಂದಾಗಿಯೇ ಸೋಂಕು ಹೆಚ್ಚಾಗಿದ್ದು ನಿಯಂತ್ರಿಸಿರೆಂದು ತಾಂಡಗಳು ಸೇರಿದಂತೆ ಅನೇಕ ಗ್ರ‍ಾಮಗಳಿಂದ ಸಾಕಷ್ಟು ದೂರುಗಳು ಬಂದಿವೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಜಿ.ಎಂ.ಬಸಣ್ಣರವರು ಚರ್ಚಿಸಿದರು. ಈ ಕುರಿತು ಪೊಲೀಸ್ ಹಾಗೂ ಅಬಕಾರಿ ಇಲಾಖೆಗೆ ಅಗತ್ಯ ಕ್ರಮಕ್ಕೆ ತಾಲೂಕಾಡಳಿತದ ಮೂಲಕ ಸೂಚಿಸಲಾಗುವುದು,
ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಪಿಡಿಓಗಳು ಅಗತ್ಯ ಶಿಸ್ಥು ಕ್ರಮ ಜರುಗಿಸಿ ಹಾಗೂ ತಾಲೂಕಾಡಳಿತಕ್ಕೆ ದೂರು ನೀಡಿ ಎಂದರು.ಹೆಚ್ಚು ಪ್ರಕರಣಗಳಿರುವೆಡೆ ಏರಿಯಾ ಶೀಲ್ಡ್ ಮಾಡಿ ಪ್ರತಿದಿನ ಸ್ಯಾನಿಟೇಷನ್‌ ಮಾಡಿಸಿ,ನೈರ್ಮಲ್ಯತೆ ಕಾಪಾಡಿ ಸೋಂಕಿತರಲ್ಲಿ ತೀವ್ರ ನಿಗಾ ಇಡಿ ಮೂಲಭೂತ ಸೌಕರ್ಯ ಒದಗಿಸಿ ಹಾಗೂ ಜಾಗ್ರತೆ ಮೂಡಿಸಿ ಎಂದರು.ಹೆಚ್ಚು ಪ್ರಕರಣಗಳಿರುವೆಡೆ ಏರಿಯಾ ಶೀಲ್ಡ್ ಡೌನ್ ಮಾಡಿ ಪ್ರತಿದಿನ ಸ್ಯಾನಿಟೇಷನ್‌ ಮಾಡಿಸಿ,ನೈರ್ಮಲ್ಯತೆ ಕಾಪಾಡಿ ಸೋಂಕಿತರಲ್ಲಿ ತೀವ್ರ ನಿಗಾ ಇಡಿ ಮೂಲಭೂತ ಸೌಕರ್ಯ ಒದಗಿಸಿ ಹಾಗೂ ಜಾಗ್ರತೆ ಮೂಡಿಸಿ ಎಂದರು.ನರೇಗಾ ಕೂಲಿಕಾರ್ಮಿಕರಲ್ಲಿ ಅಗತ್ಯ ಜಾಗ್ರತೆ ಮೂಡಿಸಿ ಕಾಮಗಾರಿ ಸ್ಥಳದಲ್ಲಿ,ಕೋವಿಡ್ ನಿಯಂತ್ರಣದ ನಿಯಮ ಪಾಲನೆ ಮತ್ತು ಮುಂಜಾಗ್ರತಾ ಕ್ರಮ ಪಾಲನೆ ಅಗತ್ಯ ಎಂದರು.
*‍ಪಿಡಿಓಗಳ ಪಾತ್ರಮಹತ್ವದ್ದು- ಡಾ,ಷಣ್ಮುಖನಾಯ್ಕ*:– ಜಿಲ್ಲಾ ಆರೋಗ್ಯ ಇಲಾಖೆಯಿಂದ ತಾಲೂಕಾಡಳಿತಕ್ಕೆ ಅಗತ್ಯ ನೆರವು ದೊರಕುತ್ತಿದ್ದು,ಅನಿವಾರ್ಯ ಹಾಗೂ ತುರ್ತುಸ್ಥಿತಿಗೆ ಹೆಚ್ಚು ಆಧ್ಯತೆ ನೀಡಿ ಸೌಕರ್ಯ ಹಾಗೂ ಅಗತ್ಯ ಸೇವೆಗಳನ್ನು ಒದಗಿಲಾಗುವುದು.
ತಾಲೂಕಾಧ್ಯಂತ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದು ಅಗತ್ಯ ಸಿಬ್ಬಂದಿ ನಿಯೋಜನೆಯನ್ನ ಮಾಡಲಾಗಿದೆ,
ಸೋಂಕು ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಪಿಡಿಓರವರ ಸಹಕಾರ ಮಹತ್ವದ್ದಾಗಿದೆ, ಇಲಾಖೆಯೊಂದಿಗೆ ಸಹಕರಿಸಬೇಕಿದೆ ಹಾಗೂ ಈ ನಿಟ್ಟಿನಲ್ಲಿ ಆರೋಗ್ಯ ಇಲ‍ಾಖೆ ಕೂಡ ಪಿಡಿಓರೊಂದಿಗೆ ಸ್ಪಂಧಿಸುತ್ತದೆ ಎಂದರು.ಸೋಂಕು ನಿಯಂತ್ರಣದಲ್ಲಿ
“ಟಾಸ್ಕ್ ಪೋರ್ಸ್” ಸಮಿತಿ ವಾರಿಯರ್ಸ್ ರಾಗಿ ಕರ್ಥವ್ಯದಲ್ಲಿದ್ದಾಗ,ಪ್ರತಿಯೊಬ್ಬರೂ
ವೈಯಕ್ತಿಕ ಆರೋಗ್ಯ ಹಾಗೂ ರಕ್ಷಣೆಯಲ್ಲಿ ಜಾಗ್ರತೆ ವಹಿಸಬೇಕು ಎಂದರು.
*ಪೊಲೀಸ್ ಹಾಗೂ ಆರೋಗ್ಯ ಸಿಬ್ಬಂದಿ ನಿಯೋಜಿಸಿ-ಪಿಡಿಓಗಳ ಒತ್ತಾಯ*: -ಸೋಂಕಿತರನ್ನು ಸಾರ್ವಜನಿಕ ವಲಯದಿಂದ ನಿಯಂತ್ರಿಸುವ ಸಂದರ್ಭದಲ್ಲಿ, ಗ್ರಾಮಸ್ಥರೊಂದಿಗೆ
ತಾವು ಸಾಕಷ್ಟು ಹರಸಾಹಸ ಮಾಡಬೇಕಾಗುತ್ತದೆ,
ಕಾರಣ ತಮ್ಮೊಂದಿಗೆ ಓರ್ವ ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ನೇಮಿಸಿ ಎಂದು ಪಿಡಿಓಗಳು ಕೋರಿದರು.
ಅಗತ್ಯ ಸಂದರ್ಭದಲ್ಲಿಯೇ ಆರೋಗ್ಯ ಇಲಾಖಾ ಸಿಬ್ಬಂದಿಗಳು ಸಂಪರ್ಕಕ್ಕೆ ಲಭ್ಯವಾಗೋದಿಲ್ಲ, ಕಾರಣ ತಮ್ಮೊಂದಿಗೆ ಕಾರ್ಯನಿರ್ವಹಿಸಲು ಅಗತ್ಯವಾಗಿ ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಗಳಿಂದ ಓರ್ವ ಸಿಬ್ಬಂದಿ ನಿಯೋಜಿಸಬೇಕೆಂದು ಪಿಡಿಓರವರು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ತಾಲೂಕು ಪಂಚಾಯ್ತಿ ಸಿಬ್ಬಂದಿ ಹಾಗೂ ತಾಲೂಕಿನ ಪಿಡಿಓರವರು ಸಭೆಯಲ್ಲಿದ್ದರು.

*ಅಕ್ರಮ ಮದ್ಯ ಮಾರಾಟ.!? ಮುಲಾಜೇಕೆ.!!??*-ಮಾಸ್ಕ್ ಧರಿಸದಿದ್ದರೆ ನಿಯಮಗಳನ್ನ ಗಾಳಿಗೆ ಮೀರಿದರೆ ಮುಲಾಜಿಲ್ಲದೇ ಲಾಟಿ ಪ್ರಯೋಗ ಮಾಡೋ ಶಿಸ್ಥಿನ ಸಿಪಾಯಿಗಳು,ಅಕ್ರಮ ಮದ್ಯ ಮಾತರಾಟಗಾರರ ಮೇಲೆ ಏಕೆ ಮುಲಾಜು..!?ಇದು ಕೆಲ ಗ್ರಾಮಗಳ ಹೋರಾಟಗಾರರ ಪ್ರೆಶ್ನೆಯಾಗಿದೆ.
ಅಕ್ರಮ ಮದ್ಯಮಾರಾಟ ಎಗ್ಗಿಲ್ಲದೆ ಜರುಗುತ್ತಿದೆ ಇದರಿಂದಲೂ ಸೋಂಕಿ ಹೆಚ್ಚಾಗಬಹುದಾಗಿದೆ ಎಂಬ ಸಾಕಷ್ಟು ದೂರುಗಳು ತಮಗೆ ಬಂದಿರುವುದಾಗಿ,
ಸ್ವತಃ ತಾಪಂ ಕಾರ್ಯನಿರ್ವಹಣಾಧಿಕಾರಿ ಜಿ.ಎಮ್.ಬಸಣ್ನವರೇ ಪಿಡಿಓಗಳ ಸಭೆಯಲ್ಲಿ ತಿಳಸಿದ್ದಾರೆ. ಅಮಾಯಕರನ್ನ ಲಾಟಿ ಮುರಿಯೋ ರೀತಿ ದಾಳಿ ಮಾಡೋ ಶಿಸ್ಥಿನ ಸಿಪಾಯಿಗಳು,ಅಕ್ರಮ ಕೋರರ ವಿರುದ್ಧ ಮೃಧುಧೋರಣೆ ಏಕೆ..!? ಎಂದು ಕೆಲ ಸಾಮಾಜಿಕ ಹೋರಾಟಗಾರರು ಪ್ರೆಶ್ನಿಸಿದ್ದಾರೆ.
ತಾಲೂಕಿನ ಕೆಲ ಗ್ರಾಮಗಳು ಅಕ್ರಮ ಮದ್ಯ ಮಾರಾಟ ಕೇಂದ್ರಗಳಾಗಿ ಗುರುತಿಸಿಕೊಂಡಿವೆ ಎಂದು ಕೆಲ ಸಂಘಟನೆಗಳು ದೂರಿವೆ. ಇದರಿಂದಾಗಿ ಅಪರಿಚಿತರು ಶಂಕಿತ ಸೋಂಕಿತರು ಗ್ರಾಮಕ್ಕೆ ಲಗ್ಗೆ ಇಡುತ್ತಿದ್ದಾರೆ ಎಂದು ಗ್ರ‍ಾಮಸ್ಥರು ಆತಂಕ ವ್ಯೆಕ್ತಪಡಿಸಿದ್ದಾರೆ, ಸಂಬಂದಿಸಿದಂತೆ ಇಲಾಖಾಧಿಕಾರಿಗಳ ಗಮನಕ್ಕೆ ತಂದರೆ ಕೂಡ ಪ್ರಯೋಜನವಾಗಿಲ್ಲ,ಕೆಲ ಭ್ರಷ್ಟ ಅಧಿಕಾರಿಗಳು ಈ ತುರ್ತಪರಿಸ್ಥಿತಿಯನ್ನ ದುರುಪಯೋಗಡಿಸಿಕೋಳ್ಳುತ್ತಿದ್ದಾರೆಂಬ ಗಂಭೀರ ಆರೋಪವಿದೆ. ಸರ್ಕಾರಿ ಸಂಬಳ ತಿನ್ನೊ ಕೆಲ ಭ್ರಷ್ಟ ಅಧಿಕಾರಿಗಳು ಹಾಗೂ ಭ್ರಷ್ಟ ಜನಪ್ರತಿನಿಧಿಗಳು ಬಂಡವಾಳ ಶಾಹಿಗಳ ಸೇವಕರಾಗಿದ್ದಾರೆಂದು ಕೆಲ ಹೋರಟಗಾರರು ಆಕ್ರೋಶ ವ್ಯೆಕ್ತಪಡಿಸಿದ್ದಾರೆ.
ತಾಲೂಕಿನ ಬಹತೇಕ ಗ್ರಾಮಗಳು ಅಕ್ರಮ ಮದ್ಯ ಮಾರಾಟ ಕೇಂದ್ರಗಳಂತೆ ಕಾರ್ಯನಿರ್ವಹಿಸುತ್ತಿದ್ದು,
ಪೊಲೀಸ್ ಇಲಾಖಾ ಅಪರಾಧ ಪತ್ತೆ ದಳ ಹಾಗೂ ಸಾರ್ವಜನಿಕರೊಂದಿಗೆ ಸ್ನೇಹ ಸಂಪರ್ಕ ಹೊಂದಿರುವ ಸಿಬ್ಬಂದಿಗೆ,ಅಕ್ರಮ ಕೋರರ ಬಗ್ಗೆ ನಿಖರ ಮಾಹಿತಿ ಇದ್ದೇ ಇರುತ್ತದೆ ಆದರೂ ಈ ಮೌನವೇಕೆ..!? ಸಾರ್ವಜನಿಕ ವಲಯದ ಪ್ರೆಶ್ನೆಯಾಗಿದೆ.
ಅಕ್ರಮ ಮದ್ಯ ಮಾರಾಟದಿಂದಾಗಿ ಕರೋನಾ ಸೋಂಕು ಗ್ರಾಮಗಳಿಗೆ ಬಹು ಬೇಗ ಹರಡುವ ಸಾಧ್ಯತೆ ಹೆಚ್ಚಿದೆ,
ಪೊಲೀಸ್ ಇಲಾಖೆಗೆ ಅಕ್ರಮ ಮದ್ಯ ಮಾರಾಟಗಾರರ ಮಾಹಿತಿ ಇದ್ದೇ ಇರುತ್ತದೆ.ಕೂಡಲೇ ಅಕ್ರಮ ಮದ್ಯ ಮಾರಾಟಗಾರರನ್ನ ವಶಕ್ಕೆ ಪಡೆದು ಪ್ರಕೆಣ ದಾಖಲಿಸುವ ಧೈರ್ಯಮಾಡಬೇಕಿದೆ ಎನ್ನುತ್ತಾರೆ ಕೆಲ ಗ್ರಾಮಗಳ ಗ್ರಾಮಸ್ಥರು ಹಾಗೂ ಸಂಘ ಸಂಸ್ಥೆಗಳ ಮುಖಂಡರು.
ದಕ್ಷ ತಹಶಿಲ್ದಾರರೆಂದೇ ಗುರುತಿಸಿಕೊಂಡಿರುವ ಡಿ.ವೈ.ಎಸ್.ಪಿ ಹರೀಶ್,
ತಹಶಿಲ್ದಾರರಾದ ಎಸ್.ಮಹಾಬಲೇಶ್ವರವರು.
ಸಿಪಿಐ ವಸಂತ ಅಸೋದೆ,ಪಿಎಸ್ಐ ಡಿ.ಸುರೇಶ,ಎಸ್.ಮಹಾಬಲೇಶ್ವರವರು ಅಕ್ರಮ ಕೋರರನ್ನು ಸದೆ ಬಡಿಯಬೇಕಿದೆ.
ಪರಿಶೀಲನೆ ನೆಪದಲ್ಲಿ
ಅಮಾಯಕರ ಮೇಲೆ ತಮ್ಮ ಲಾಟಿ ಪ್ರಯೋಗ ಮಾಡಿ ತಮ್ಮ ದರ್ಪ ಪೌರುಷ ತೋರೋ ಪೊಲೀಸರು, ಅಕ್ರಮ ಕೋರರ ವಿರುದ್ಧ ತೊರಿ ತಮ್ಮ ಪ್ರಾಮಾಣಕತೆ ದಕ್ಷತೆ,ಕರ್ಥವ್ಯ ನಿಷ್ಠೆ ಮೆರೆಯಬೇಕಿದೆ.‍.

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend