ಕೂಡ್ಲಿಗಿಯಲ್ಲಿ ಜನತಾ ಕರ್ಫ್ಯೂ,ಬೇಕಾಬಿಟ್ಟಿ ತಿರುಗಾಡುವ ವಾಹನಕ್ಕೆ ಮುಲಾಜಿಲ್ಲದೆ ದಂಢ…. !       

Listen to this article
ಕೂಡ್ಲಿಗಿಯಲ್ಲಿ ಜನತಾ ಕರ್ಫ್ಯೂ,ಬೇಕಾಬಿಟ್ಟಿ ತಿರುಗಾಡುವ ವಾಹನಕ್ಕೆ ಮುಲಾಜಿಲ್ಲದೆ ದಂಢ…. !                                                                                         ಕೂಡ್ಲಿಗಿ.ಮೇ. 5 :- ಬೆಳಗ್ಗೆ 10 ಗಂಟೆವರೆಗೆ ಮಾತ್ರ ದಿನನಿತ್ಯ ಬಳಕೆ ವಸ್ತುಗಳ ಖರೀದಿಗೆ ಅವಕಾಶವಿದ್ದು ನಂತರ ಜನತಾ ಕರ್ಫ್ಯೂ ಬಿಗಿಗೊಳ್ಳಲಿದ್ದು ಕೂಡ್ಲಿಗಿಯಲ್ಲಿ ಆಸ್ಪತ್ರೆ, ಮೆಡಿಕಲ್ ಸ್ಟೋರ್ ಮತ್ತು ರೈತರಿಗೆ ಹೊರತುಪಡಿಸಿ ವಿನಾಃ ಕಾರಣ ರಸ್ತೆಯಲ್ಲಿ ಓಡಾಡುವ ಬೇಕಾಬಿಟ್ಟಿ ವಾಹನಗಳ ತಿರುಗಾಡಿದರೆ ಯಾವುದೇ ಮುಲಾಜಿಲ್ಲದೆ ಸರ್ಕಾರದ ದಂಢಕ್ಕೆ ಕೆಲವರು ಬೀಳುತ್ತಿದ್ದಾರೆ.                                                    ಪಟ್ಟಣದ ಪಾದಗಟ್ಟೆ ಸರ್ಕಲ್ ಬಳಿ ಬ್ಯಾರಿಕೇಟ್ ಗಳನ್ನು ಹಾಕಿದ್ದು ಯಾವುದೇ ವಾಹನಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಇದರಿಂದ ಒಂದು ಕಡೆ ಮಾತ್ರ ವಾಹನಗಳು ಓಡಾಡಲು ದಾರಿ ಇದ್ದು ಪ್ರತಿ ವಾಹನಗಳಿಗೂ ತಪಾಸಣೆ ಮಾಡಿ ಬಿಡುತ್ತಿದ್ದು ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಸಹ ಆಗದೆ ಇಲಿ ಬಂದು ಬೋನಿಗೆ ಸಿಲುಕಿಕೊಂಡಂತೆ ಬೇಕಾಬಿಟ್ಟಿ ತಿರುಗಾಡುವ ವಾಹನಕ್ಕೆ ಪ್ರೊಬೆಷನರಿ ಪಿಎಸ್ಐ ಮಣಿಕಂಠ ಯಾವುದೇ ಮುಲಾಜಿಲ್ಲದೆ ದಂಢ ಕಟ್ಟಿ ರಸೀದಿ ಕೊಡುತ್ತಿದ್ದು ವಾಹನಗಳಿಗೆ ಸಂಬಂದಿಸಿದ ದಾಖಲೆಗಳು ಸರಿ ಇಲ್ಲದೆ ಇದ್ದಲ್ಲಿ ಅಂತಹ ವಾಹನಗಳನ್ನು ಸೀಜ್ ಮಾಡಿ ಪೊಲೀಸ್ ಠಾಣಾ ಆವರಣಕ್ಕೆ ಕಳಿಸುತ್ತಿರುವುದು ಕಾಣುತ್ತಿದೆ.                                                 ಮನೆಯಲ್ಲೇ ಇರೀ ಮಹಾಮಾರಿ ಕೊರೋನಾ ನಿಯಂತ್ರಣ ಮಾಡಿ :- ಮಹಾಮಾರಿ ಕೊರೋನಾ ನಿಯಂತ್ರಣ ಮಾಡುವಲ್ಲಿ ಸರ್ಕಾರವು ಜನತಾ ಕರ್ಫ್ಯೂ ಜಾರಿಗೆ ತಂದು ಜನರು ಆರೋಗ್ಯದಿಂದ ಇರಲು ಮನೆಯಲ್ಲೇ ಇರೀ ಎಂದು ರಸ್ತೆಯಲ್ಲಿ ನಿಮ್ಮಗಳ ಆರೋಗ್ಯದ ದೃಷ್ಟಿಯಿಂದ ದಂಡ ಹಾಕುವಲ್ಲಿ ಮುಂದಾಗಿದ್ದು ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ನೀವೇ ಕಾಪಾಡಿಕೊಳ್ಳಲು ಮುಂದಾಗಿ ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದಾರೆ.
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend