ಕೂಡ್ಲಿಗಿ:ಕೋವಿಡ್ ಸಹಾಯ ವಾಣಿ(08391-220225)ಕೇಂದ್ರ ಪ್ರಾರಂಭ…!!!

Listen to this article

*ಕೂಡ್ಲಿಗಿ:ಕೋವಿಡ್ ಸಹಾಯ ವಾಣಿ(08391-220225)ಕೇಂದ್ರ ಪ್ರಾರಂಭ*
-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ತಹಶಿಲ್ದಾರರವರ ಕಚೇರಿಯಲ್ಲಿ,ಸಾರ್ವಜನಿಕರಿಗೆ ಆನುಕೂಲಕ್ಕಾಗಿ ಕೋವಿಡ್19 ಸಹಾಯ ವಾಣಿ ಕೇಂದ್ರ ಪ್ರಾರಂಭಿಸಲಾಗಿದೆ.
ಈ ಕುರಿತು ತಹಶಿಲ್ದಾರರ ಅಧ್ಯಕ್ಷತೆಯಲ್ಲಿ ಸಭೆಯನ್ನ ನಡೆಸಲಾಯಿತು,ಮತ್ತು ಇಂದಿನಿಂದಲೇ ಸಹಾಯವಾಣಿ ಕೇಂದ್ರ ಚಾಲನೆಗೆ ತರಲಾಯಿತು. ಕೋವಿಡ್ ಗೆ ಸಂಬಂಧಿಸಿದಂತೆ ಯಾವುದೇ ಅಗತ್ಯ ಮಾಹಿತಿ ಅಥವಾ ನೆರವನ್ನು ದಿನದ 24ತಾಸುಗಳ ಕಾಲದಲ್ಲಿ,ಸಾರ್ವಜನಿಕರು ಖುದ್ದು ಬೆಟ್ಟಿಯಾಗಿ ಅಗತ್ಯ ನೆರವು ಪಡೆಯಬಹುದು ಅಥವಾ ದೂರವಾಣಿಯ ಮೂಲಕ ಸಂಪರ್ಕಿಸಿ ನೆರವು ಪಡೆಯಬಹುದಾಗಿದೆ.
ಜಿಲ್ಲಾಡಳಿತದ ನಿರ್ಧಶನದಂತೆ ಸಹಾಯವಾಣಿ ಕೇಂದ್ರ ಪ್ರತಿದಿನವೂ ದಿನದ 24ತಾಸುಗಳ ಕಾಲ ಕಾರ್ಯನಿರ್ವಹಿಸಲಿದೆ,
ಸಾರ್ವಜನಿಕರು ಕೋವಿಡ್ ಸಂಬಂಧಿಸಿದಂತೆ
ಅಗತ್ಯ ಮಾಹಿತಿ ಹೊಂದಲು, 08391220225ಗೆ ಕೆರೆ ಮಾಡಿ ಸಹಾಯವಾಣಿ ಕೇಂದ್ರದ ಸೇವೆ ಪಡೆಯಬಹುದಾಗಿದೆ ಎಂದು ತಹಶಿಲ್ದಾರರು ತಿಳಿಸಿದ್ದಾರೆ.
ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖಾ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ,ಸಾರ್ವಜನಿಕರು ಕೋವಿಡ್ ಗೆ ಸಂಬಂಧಿಸಿದಂತೆ ಯಾವುದೇ ನೆರವು ಸಲಹೆ ಸಹಕಾರಕ್ಕೆ ಸಂಪರ್ಕಿಸಬಹುದಾಗಿದೆ ಎಂದು ತಹಶಿಲ್ದಾರರಾದ ಎಸ್.ಮಹಾಬಲೇಶ್ವರ ತಿಳಿಸಿದ್ದಾರೆ.ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಜಿ.ಎಂ.ಬಸಣ್ಣ,ಹಾಗೂ ಕೊಟ್ಟೂರು ತಹಶಿಲ್ದಾರರಾದ ಅನಿಲ್ ಕುಮಾರ ಇದ್ದರು..

*ಡಿ ಎಂ ಈಶ್ವರಪ್ಪ ಸಿದ್ದಾಪುರ*

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend