ಅಭಿವೃದ್ಧಿ ಅರಿಕಾರರ ಆಡಳಿತ ಅವಧಿಯಲ್ಲಿ, ಕನಸು ನನಸಾಗುವುದೇ, ಕೂಡ್ಲಿಗಿ ತಾಲೂಕಿನ ಜನತೆಯ ಕನಸು???

Listen to this article

ವಿಜಯನಗರ ಜಿಲ್ಲೆಯ, ಕೂಡ್ಲಿಗಿ ತಾಲೂಕು ರಾಜ್ಯದಲ್ಲಿ ಅತೀ ಬಡ ತಾಲೋಕು ಎನ್ನುವಂತೆ ಬಿಂಬಿತವಾಗಿರುವುದು ಅಕ್ಷರ ಸಹ ಸತ್ಯ, ಈ ಒಂದು ತಾಲೋಕಿನಲ್ಲಿ ಬರೀ ಬರಡು ಭೂಮಿ ಸರಿಸುಮಾರು 75% ರಷ್ಟು ಇದ್ದು ಇಲ್ಲಿನ ಜನರು ಕೃಷಿಗೆ ಹೆಚ್ಚು ಆದ್ಯತೆ ನೀಡಿರುವರು ಮತ್ತು ಪ್ರತಿ ವರ್ಷ ಅತೀ ಕಡಿಮೆ, ಮಳೆಯಾಗುವ ಒಂದು ಪ್ರದೇಶ ಇದಾಗಿದ್ದು ಇಲ್ಲಿನ ರೈತರು ಹಾಕಿರುವ ಬಂಡವಾಳವನ್ನು ನಿರೀಕ್ಷಿಸದೇ ಹಲವು ವರ್ಷಗಳಿಂದ ಬರೀ ಬರಗಾಲವನ್ನೇ ಅನುಭವಿಸಿ ಜೀವನವನ್ನು ಕಳೆಯುತ್ತಿರುವುದು ಮಾತ್ರ, ಸರ್ಕಾರದ ಕಣ್ಣಿಗೆ ಕಾಣದೆ ಇರುವುದು ಮಾತ್ರ ತುಂಬಾ ವಿಪರ್ಯಾಸದ ಸಂಗತಿ.


ಹಲವು ಸರ್ಕಾರಗಳೇ ಕಳೆದವು, ಸುಮಾರು ಶಾಸಕರೇ ಬಂದು ಹೋದರು, ಬರುವಾಗಲೆಲ್ಲ ಬರೀ ಅಸ್ವಾಸನೆಗಳ ಮಹಾಪೂರದ ಆಸೆಗಳನ್ನು ತೋರಿಸಿ, ಗೆದ್ದ ತಕ್ಷಣ ನನಗೂ ಹಾಗೂ ಈ ಒಂದು ತಾಲೂಕಿನ ಜನತೆಗೆ ಸಂಬಂಧವಿಲ್ಲ ಎನ್ನುವಂತೆ ಇರುವುದನ್ನು ನೋಡಿದರೆ ಈ ಒಂದು ತಾಲೂಕಿನ ಜನರನ್ನು ಬರೀ “ವೋಟ್ ಬ್ಯಾಂಕ್ ರೀತಿಯಲ್ಲಿ “ಉಪಯೋಗಿಸಿಕೊಳ್ಳುವುದು ಎಷ್ಟು ಸರಿ ಯೋಚಿಸಿ, ಮತ್ತು ಈ ಒಂದು ತಾಲೂಕಿನ ಕೂಗಳತೆಯಷ್ಟು ದೂರದಲ್ಲಿ ತುಂಗಭದ್ರಾ ನದಿಯಿದ್ದು, ಇಲ್ಲದಂತಾಗಿರುದನ್ನು ನೋಡಿದರೆ ರಾಜ್ಯ ಸರ್ಕಾರ ಇಲ್ಲಿನ ಜನರನ್ನು ಮಲತಾಯಿ ದೋರಣೆನ್ನು ಮಾಡುತ್ತಿದೆ ಎನ್ನುವುದು ಸತ್ಯವಾದ ಮಾತು.
ಹಾಗೂ ಈ ಒಂದು ತಾಲೂಕಿಗೆ ಭದ್ರ ಮೆಲ್ದಂಡೆ ಯೋಜನೆ ಜಾರಿಯಾಗಬೇಕು ಎಂದು ತಾಲೂಕಿನ ಜನತೆ ಸುಮಾರು ಮನವಿಯನ್ನು ಕೊಟ್ಟರು ಪ್ರಯೋಜನವಾಗಿಲ್ಲ ಇಂದಿಗೂ ಸಹ ಕಾರ್ಯರೂಪಕ್ಕೆ ಬಾರದೇ ಇರುವುದನ್ನು ನೋಡಿದರೆ ತುಂಬಾ ವಿಪರ್ಯಾಸ ಹಾಗೂ ಬೇಸಿಗೆ ಕಾಲ ಶುರುವಾಯಿತೆಂದರೆ, ಧನ, ಕುರಿ ಗಳಿಗೆ ಮತ್ತು ಮನುಷ್ಯರಿಗೆ ಕುಡಿಯುವ ನೀರಿನ ಒಂದು ಸಮಸ್ಯೆ ಹೇಳತೀರದಷ್ಟು ಉಂಟಾಗುತ್ತದೆ
ಇಷ್ಟೆಲ್ಲಾ ಸಮಸ್ಯೆಗಳು ಇದ್ದರು ತಾಲೂಕಿನ ಸಂಬಂಧಪಟ್ಟ, ಅಧಿಕಾರಿಗಳು, ಹಾಗೂ ಶಾಸಕರು ಬರೀ ಭರವಸೆಯ ಭೂಪರಂತೆ ವರ್ತನೆಮಾಡುತ್ತಿರುವುದನ್ನು ನೋಡಿದರೆ ಇಂತವರನ್ನು ಆಯ್ಕೆ ಮಾಡಿದ ಈ ಒಂದು ತಾಲೂಕಿನ ಜನರು ಎಷ್ಟು ದುರದೃಷ್ಟವಂತರು ಅಲ್ವಾ, ಮತ್ತು ಈ ಒಂದು ತಾಲೂಕಿನ ಗ್ರಾಮಪಂಚಾಯಿತಿಗಳಲ್ಲಿ ಸಾಮಾನ್ಯಜನರು ತಮ್ಮ ಒಂದು ಸವಲತ್ತನ್ನು ಪಡೆಯಬೇಕೆಂದರೆ ಚಪ್ಪಲಿಗಳನ್ನು ಸವೆಸಬೇಕು ಎನ್ನುತ್ತಾರೆ ನೋವನ್ನು ಅನುಭವಿಸಿದ ಜನಸಾಮಾನ್ಯರು.
ಹಾಗೂ ನಮಗೆ ಏನೂ ಬೇಡ ಜೀವನವನ್ನು ನಡೆಸಲು, ಭದ್ರ ಮೆಲ್ದಂಡೆ ಯೋಜನೆಯನ್ನಾದರೂ, ಕಲ್ಪಿಸಿಕೊಡಿ ಅಂತ ಮಾನ್ಯ ಶಾಸಕರು ಅಭಿವೃದ್ಧಿ ಅರಿಕಾರರಿಗೆ ಹಲವು ಬಾರಿ ಮನವಿಯನ್ನು ಕೊಟ್ಟರು ಇಂದಿಗೂ ಸಹ ಏನೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ತಾಲೂಕಿನ ಹಲವಾರು ಹಳ್ಳಿಗಳ ರೈತರು ನಮ್ಮ ಒಂದು ಜಿಲ್ಲೆಯಲ್ಲಿ ತುಂಗಭದ್ರಾ ನದಿಇದ್ದರು ನಾವೇಸ್ಟ್ ಕಷ್ಟವನ್ನು ಪಡೆಯಬೇಕು ನೀರನ್ನು ಪಡೆಯಲು, ಎನ್ನುವ ಒಂದು ಮನಸ್ಥಿತಿ ಕಾಡುತ್ತಿದೆ ಹಲವು ಗ್ರಾಮದ ಜನಸಾಮಾನ್ಯರಲ್ಲಿ ಹಾಗೂ ರೈತರಲ್ಲಿ ಈ ಇಂದೇ ಇದ್ದ ಶಾಸಕರಾದ ಶ್ರೀ ನಾಗೇಂದ್ರಪ್ಪ ಇದ್ದ ಸಮಯದಲ್ಲಿ ಅಲ್ಪ, ಸ್ವಲ್ಪ ಕೆಲಸಗಳಾಗಿದ್ದವು ಅಷ್ಟೇ ಈಗಿನ ಸರ್ಕಾರದಿಂದ ನಮ್ಮ ಒಂದು ತಾಲೂಕಿಗೆ ಸರಿಯಾದ ಅಭಿವೃದ್ಧಿ ಕಾರ್ಯಕ್ರಮಗಳು ನಮಗೆ ಸಿಗುತ್ತಿಲ್ಲ ಹಾಗೂ ಅವರ ಒಂದು ಆಡಳಿತದಲ್ಲಿ ಬಂದ ಭದ್ರ ಮೆಲ್ದಂಡೆ ಯೋಜನೆಗೆ ಬಂದ ಪೈಪ್ ಗಳು ತುಕ್ಕುಹಿಡಿಯುವ ಮಟ್ಟಿಗೆ ಬಂದಿದ್ದರು ಸಹ ಯಾವೊಂದು ಪ್ರಯೋಜನವಾಗಿಲ್ಲ, ರೈತರು ಮನವಿಯನ್ನು ಕೊಡುವ ಸಮಯದಲ್ಲಿ ಬರೀ ಅಸ್ವಾಸನೆಯ ಸುಳ್ಳಿನ ಸುರಿಮಳೆಯನ್ನು ಕೊಟ್ಟು ಹಲವಾರು ಕುಂಟು ನೆಪವನ್ನು ಹೇಳಿ ಕೈತೋಳೆದುಕೊಳ್ಳುವುದೊಂದೇ ಇವರ ದಾರಿ, ಇಂತಹ ಒಂದು ಭ್ರಷ್ಟ ಸರ್ಕಾರ ರೈತರ ಒಂದು ಬಾಳಲ್ಲಿ ಆಟವಾಡುವುದನ್ನುಬಿಟ್ಟು, ನಿರನ್ನಾದರೂ ನಮ್ಮ ಒಂದು ತಾಲೂಕಿಗೆ ಬರಲು ಸಹಕರಿಸಿ ಅನುವು ಮಾಡಿಕೊಟ್ಟರೆ ಕಷ್ಟಪಟ್ಟು ನೆಮ್ಮದಿಯಿಂದಾದರೂ ಬದುಕುತ್ತೇವೆ ಎನ್ನುತ್ತಾರೆ ಇಲ್ಲಿನ ಬಡ ರೈತರು.
ಈಗಿನ ಬಿಜೆಪಿ ಸರ್ಕಾರ ಬರೀ ಸುಳ್ಳು ಬುರುಡೆಗಳನ್ನು ಬಿಟ್ಟು ಜನಸಾಮಾನ್ಯರನ್ನು ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಿದೆ ಎನ್ನುವ ವಿರೋಧ ಪಕ್ಷದ ಕೂಗು ಅಕ್ಷರ ಸಹ ಸತ್ಯವಾದ ಮಾತು ಎನ್ನುವುದು ಎದ್ದು ಕಾಣುತ್ತಿದೆ, ಇಂತಹ ಹಲವು ಸನ್ನಿವೇಶಗಳನ್ನು ನೋಡಿದರೆ ಇನ್ನಾದರೂ ಬಡವರ ಪಾಲಿನ ಕಷ್ಟಗಳನ್ನು ಆಲಿಸಿ ಸಾಮಾನ್ಯ ಜನರ ಬದುಕಲ್ಲಿ ಬೆಳಕಾಗಲಿ ಎನ್ನುವುದೇ ನಮ್ಮ ಒಂದು ಆಶಯ….

 

ವರದಿ. ಮಂಜುನಾಥ್, ಎನ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend