ಓಬಳಶೆಟ್ಟಿಹಳ್ಳಿ:ಆಕಸ್ಮಿಕ ಅಗ್ನಿಗೆ ಮನೆಯೊಳಗಿನ ಸಾಮಾಗ್ರಿಗಳು ಭಸ್ಮ-ತುರ್ತು ನೆರವು ನೀಡಿದ ಸ್ಥಳೀಯ ಆಢಳಿತ, ಜನ ಪ್ರತಿನಿಧಿಗಳು…!!!

Listen to this article

ಓಬಳಶೆಟ್ಟಿಹಳ್ಳಿ:ಆಕಸ್ಮಿಕ ಅಗ್ನಿಗೆ ಮನೆಯೊಳಗಿನ ಸಾಮಾಗ್ರಿಗಳು ಭಸ್ಮ-ತುರ್ತು ನೆರವು ನೀಡಿದ ಸ್ಥಳೀಯ ಆಢಳಿತ, ಜನ ಪ್ರತಿನಿಧಿಗಳು -ವಿಜಯನಗರ ಜಿಲ್ಲೆ ಕೂಡ್ಲಿಗಿ:ತಾಲೂಕಿನ ಗುಂಡುಮುಣುಗು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಓಬಳಶೆಟ್ಟಿಹಳ್ಳಿಯಲ್ಲಿ. ಆ17ಂರಂದು ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ, ಮನೆಯೊಳಗಡೆ ಆಕಸ್ಮಿಕ ಬೆಂಕಿ ಹತ್ತಿ ಮನೆಯೊಳಗಿನ ಸಾಮಾಗ್ರಿಗಳೆಲ್ಲ ಸಂಪೂರ್ಣ ಭಸ್ಮವಾಗಿರುವ ಅವಘಡ ಜರುಗಿದೆ. ಗ್ರಾಮದ ನಿಂಗಮ್ಮ ಗಂಡ ಲೇಟ್ ಶಿವನಜ್ಜಿ ಹನುಮಂತಪ್ಪ ಎಂಬುವರ ಮನೆ, ಅಗ್ನಿ ಆಕಸ್ಮಿಕದಿಂದ ಸಂಪೂರ್ಣ ಸುಟ್ಟು ಬಸ್ಮವಾಗಿದೆ. ನಿಂಗಮ್ಮಳು ಕೂಲಿ ಕೆಸಕ್ಕೆಂದು ಹೊಲಕ್ಕೆ ತೆರಳಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯೊಳಗೆ ಬೆಂಕಿ ಹತ್ತಿಕೊಂಡಿದೆ. ಮನೆಯಿಂದ ಭಾರೀ ಹೊಗೆ ಬಂದ ಹಿನ್ನಲೆಯಲ್ಲಿ, ನೆರ ಹೊರೆಯವರು ಗ್ರಾಮಸ್ಥರು ದಾವಿಸಿ ಬೆಂಕಿ ನಂದಿಸುವ ಹರಸಾಹಸ ಮಾಡಿದ್ದಾರಾದರು ಪ್ರಯೋಜನವಾಗಿಲ್ಲ. ಪರಿಣಾಮ ಮನೆಯೊಳಗಿನ ಎಲ್ಲಾ ಸಾಮಾಗ್ರಿಗಳು, ಬಟ್ಟೆ ನಗದು ಹಣ, ದವಸ ಧಾನ್ಯಗಳು ಟಿವಿ.ಮಂಚ ಸೇರಿದಂತೆ. ದುಭಾರೀ ಬೆಲೆ ಇತರೆ ಸಾಮಾಗ್ರಿಗಳು ಸಂಪೂರ್ಣ ಭಸ್ಮವಾಗಿವೆ. ತಾಸು ಗಟ್ಟಲೆ ನಡೆದ ಬೆಂಕಿವ ನಂದಿಸುವ ಸತತ ಪ್ರಯತ್ನ ನಡೆಸಿದ್ದಾರೆ. ಅಗ್ನಿ ಶಾಮಕ ಠಾಣಾ ಸಿಬ್ಬಂದಿ ಸ್ಥಳಕ್ಕಾಗಮಿಸಿ ಅಗ್ನಿಯನ್ನು ಸಂಪೂರ್ಣನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಜೀವ ಹಾನಿಯಾಗಿಲ್ಲ, ಹಾಗೂ ಬೆಂಕಿಯಿಂದ ಹೆಚ್ಚಿನ ಹಾನಿ ಸಂಭವಿಸದಂತೆ ಜಾಗ್ರತೆ ವಹಿಸಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ಗ್ರಾಮದ ಮುಖಂಡರು, ಸಂಕಷ್ಟದಲ್ಲಿರುವ ನಿಂಗಮ್ಮಳಿಗೆ ಸಾಂತ್ವಾನ ತಿಳಿಸಿ ಧೈರ್ಯ ತುಂಬಿದ್ದಾರೆ. ಮತ್ತು ಗ್ರಾಮಸ್ಥರು ಶಕ್ತಾನುಸಾರ ಅಗತ್ಯ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ, ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು. ಕಂದಾಯ ಇಲಾಖಾಧಿಕಾರಿ ಚೌಡಪ್ಪ ಹಾಗೂ ಗ್ರಾಮ ಲೆಕ್ಕಾಧಿಕಾರಿ ನಿಂಗಮ್ಮಳ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೆಂಕಿ ಗಾಹುತಿಯ‍ಾಗಿರುವ ಸಾಮಾಗ್ರಿಗಳ ವಿವರ ಹಾಗೂ ಅವುಗಳ ಮೊತ್ತ ಒಟ್ಟು ನಷ್ಟದ ಪ್ರಮಾಣದ ವಿವರ ಪಡೆದಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ, ಅವಘಡದಿಂದ ತುಂಬಾ ಗಂಭೀರ ಸ್ವರೂಪದಲ್ಲಿ ನಷ್ಟಾಗಿದೆ. ನಿಂಗಮ್ಮ ಅವಘಡದಿಂದ ತುಂಬಾ ಅನುಭವಿಸಿರುವ ನಷ್ಟ ಭರಿಸುವ ನಿಟ್ಟಿನಲ್ಲಿ ನಿಯಮಾನುಸಾರ, ಸೂಕ್ತ ಪರಿಹಾರ ಸರ್ಕಾರದಿಂದ ಒದಗಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಬೆಂಕಿಗೆ ಮನೆಯ ಮೂಲ ದಾಖಲಾತಿಗಳು, ಮತ್ತು ಬೆಲೆ ಬಾಳುವ ಸಾಮಾಗ್ರಿಗಳು, ಟಿವಿ, ಶೋಕೆಸ್, ಮಂಚ, ರಾಟಿ, ಮೊಬೈಲ್, ಬಟ್ಟೆ, ಹಾಸಿಗೆ, ಬ್ರೆಡ್ಶೀಟ್, ಇನ್ನೂ ತುಂಬಾ ಬೆಲೆ ಬಾಳುವ ದವಸ ಧಾನ್ಯಗಳು, 4 ಚೀಲ್ ಅಕ್ಕಿ, 5 ಚೀಲ ರಾಗಿ ಮತ್ತು ಮೆಕ್ಕೆಜೋಳ, ಶೇಂಗಾ, ಭರಣಗಳು ಇನ್ನೂ ಹಲವಾರು ಸಾಮಗ್ರಿಗಳು ಸುಟ್ಟು ನಾಶವಾಗಿರುವುದು ತಿಳಿದು ಬಂದಿದೆ. ಘಟನೆ ಜರುಗಿದ ಕೆಲ ಹೊತ್ತಲ್ಲೇ ಸಂಕಷ್ಟಕ್ಕೀಡಾಗಿರುವ ನಿಂಗಮ್ಮಳಿಗೆ, ಗ್ರಾಮ ಪಂಚಾಯತಿ ವತಿಯಿಂದ 10,000/- ತುರ್ತು ಸಹಾಯ ಧನ ವನ್ನು ನೀಡಲ‍ಾಗಿದ್ದು, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್ ನಗದು ಹಣ ವಿತರಿಸಿದ್ದಾರೆ. ಉಪಸ್ಥಿತರಿದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭಾಗ್ಯಮ್ಮ ಅಂಜಿನಪ್ಪ. ಸದಸ್ಯರಾದ ಬಿ. ನಾಗರಾಜ್ ರವರು, ವೈಯಕ್ತಿಕವಾಗಿ 25ಕಿಲೋ ರಾಗಿ ಮತ್ತು 25 ಕಿಲೋ ಅಕ್ಕಿಯನ್ನು ನೀಡಿ ನೆರವಾಗಿದ್ದಾರೆ. ಕೆಲ ಗ್ರಾಮಸ್ಥರು ಸಂಕಷ್ಟದಲ್ಲಿರುವ ನಿಂಗಮ್ಮಳಿಗೆ, ಸ್ವಯಂ ಪ್ರೇರಣೆಯಿಂದ ಶಕ್ತಾನುಸಾರ ನೆರವು ನೀಡುವುದಕ್ಕೆ ಮುಂದಾಗಿ ಮಾನವೀಯತೆ ಮೆರೆದಿದ್ದಾರೆ…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend