ಅಪ್ಪೇನಹಳ್ಳಿಗ್ರಾಪಂ:ಗ್ರ‍ಾಮಗಳಿಗೆ ತೆರಳಿ ,ಅಹವಾಲು ಆಲಿಸಿದ ಶಾಸಕ ಡಾ”ಎನ್.ಟಿ.ಶ್ರೀನಿವಾಸ್…!!!

Listen to this article

ಅಪ್ಪೇನಹಳ್ಳಿಗ್ರಾಪಂ:ಗ್ರ‍ಾಮಗಳಿಗೆ ತೆರಳಿ ,ಅಹವಾಲು ಆಲಿಸಿದ ಶಾಸಕ ಡಾ”ಎನ್.ಟಿ.ಶ್ರೀನಿವಾಸ್.
ವಿಜಯನಗರ ಜಿಲ್ಲೆ ಕೂಡ್ಲಿಗಿ:ತಾಲೂಕಿನ ಅಪ್ಪೇನಹಳ್ಳಿ ಗ್ರ‍ಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಿಗೆ, ಶಾಸಕ ಡಾ”ಎನ್.ಟಿ.ಶ್ರೀನಿವಾಸ್ ಮೇ28ರಂದು ಬೇಟಿ ನೀಡಿ ಅಹವಾಲು ಆಲಿಸಿದ್ದಾರೆ. ಬೆಳಿಗ್ಗೆ ರಾಯಾಪುರ ಗ್ರಾಮದ ಶ್ರೀಶಿವಣ್ಣತಾತ ದರ್ಶನ ಪಡೆದ ಶಾಸಕರು, ಗ್ರಾಮದ ಮುಖ್ಯಸ್ತರೊಂದಿಗೆ ಗ್ರಾಮದಲ್ಲಿ ಸಂಚರಿಸಿದರು, ಸಮಸ್ಯೆಗಳಿರುವೆಡೆ ಪರಿಶೀಲಿಸಿ ಗ್ರ‍ಾಮಸ್ಥರ ಅಹವಾಲು ಆಲಿಸಿದರು. ನಂತರ ಮತದಾರರಿಗೆ ಅಭಿನಂದಿಸುವ “ಅಭಿನಂದನಾ ಕಾರ್ಯಕ್ರಮ” ದಲ್ಲಿ ಶಾಸಕರು ಭಾಗಿಯಾದರು.
ಮೃತ ಗ್ರ‍ಾಪಂ ಸದಸ್ಯರ ಕುಟುಂಬಗಳಿಗೆ ಶಾಸಕರಿಂದ ಸಾಂತ್ವಾನ:


ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸರವರು ತಾಲೂಕಿನ ಗಡಿಗ್ರಾಮ ಡಿ.ಸಿದ್ದಾಪುರ ಗ್ರಮಕ್ಕೆ ತೆರಳಿದರು. ಕೆಲವು ದಿನಗಳ ಹಿಂದೆ ಮೃತಪಟ್ಟಿದ್ದ, ಗ್ರಾಮ ಪಂಚಾಯ್ತಿ ಸದಸ್ಯ ಮೃತ ಮಲ್ಲಿಕಾರ್ಜುನ ರವರ ಮನೆಗೆ ತೆರಳಿ.ಕುಟುಂಬ ಸದಸ್ಯರಿಗೆ ಆತ್ಮ ವಿಶ್ವಾಸ ತುಂಬಿ ಸಾಂತ್ವಾನ ತಿಳಿಸಿದರು. ಮತ್ತು ಗ್ರ‍ಾಮದಲ್ಲಿ ಸಂಚರಿಸಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು. ನಂತರ ಮಹಾದೇವಪುರ ಗ್ರಾಮಕ್ಕೆ ತೆರಳಿದರು, ಹಲವು ದಿನಗಳ ಹಿಂದೆಯಷ್ಟೇ ಮೃತ ಪಟ್ಟಿದ್ದ.
ಗ್ರಾಮ ಪಂಚಾಯ್ತಿ ಸದಸ್ಯ ಮೃತ ಧಳಪತಿ ಬಸವರಾಜ ರವರ ಮನೆಗೆ ಬೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು.
ನಂತರ ಗ್ರಾಮದಲ್ಲೆಲ್ಲಾ ಸಂಚರಿಸಿ ಗ್ರ‍ಾಮಸ್ಥರಿಂದ ಖುದ್ದು ಅಹವಾಲು ಆಲಿಸಿದರು. ನಂತರ
ದೇವರ ಹಟ್ಟಿ , ಹಾಲಸಾಗರ, ಹಾಲಸಾಗರ ಹಟ್ಟಿ, ಅಪ್ಪೇನಹಳ್ಳಿ ಗ್ರಾಮ, ಅಪ್ಪೇನಹಳ್ಳಿ ತಾಂಡ, ಬಾಂಬೆ ಕಾಲೋನಿ ಗೆ ಭೇಟಿ ನೀಡಿ ಗ್ರ‍‍ಾಮಗಳಲ್ಲಿ ಸಂಚರಿಸಿ ಅಹವಾಲು ಆಲಿಸಿದರು. ಪ್ರತಿ ಗ್ರಾಮಗಳಲ್ಲಿನ ಪ್ರಮುಖ ಸಮಸ್ಯೆಗಳ ಕುರಿತು, ಖುದ್ದು ಪರಿಶೀಲಿಸಿ ಪರಿಹಾರಕ್ಕೆ ಉಪಸ್ಥಿತರಿದ್ದ ಸ್ಥಳೀಯ ಆಡಳಿತಾಧಿಕಾರಿಗಳಿಗೆ ಸೂಚಿಸಿದರು.
ಜ್ವಲಂತ ಸಮಸ್ಯೆ ತ್ವರಿತವಾಗಿ ಇತ್ಯಾರ್ಥಕ್ಕೆ ಅಧಿಕಾರಿಗಳಿಗೆ ಶಾಸಕರ ತಾಕೀತು.

ಕೆಲ ಗ್ರ‍ಾಮಗಳಲ್ಲಿನ ಜ್ವಲಂತ ಸಮಸ್ಯೆಗಳ ಕುರಿತು ಮುಖಂಡರೊಂದಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ, ಗ್ರಾಮಸ್ಥರ ಸಮಕ್ಷಮದಲ್ಲಿಯೇ ಸ್ಥಳದಲ್ಲಿದ್ಧು ಪರಿಹಾರಕ್ಕಾಗಿ ಚರ್ಚೆ ನಡೆಸಿದರು. ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು, ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವಂತೆ. ಸ್ಥಳೀಯ ಆಡಳಿತಾಧಿಕಾರಿಗಳಿಗೆ ಸೂಚಿಸಿದರು, ಸಂಬಂಧಿಸಿದ ಇಲಾಖೆಯ ತಾಲೂಕು ಅಧಿಕಾರಿಗಳಿಗೆ ಶೀಘ್ರವೇ ಸ್ಪಂಧಿಸುವಂತೆ ತಾಕೀತು ಮಾಡಿದರು.
ಶಾಸಕರ ಆತ್ಮೀಯತೆಯ ಅಪ್ಪುಗೆಗೆ ಫಿದಾ ಆದ ಹಿರಿಯರು ವಿಕಲಚೇತನರು.


ಈ ಸಂದರ್ಭದಲ್ಲಿ ವೃದ್ಧರ, ಹಿರಿಯ ಮಹಿಳೆಯರನ್ನು, ಗ್ರಾಮದ ಹಿರಿಯರನ್ನು, ವಿಕಲಾಂಗರನ್ನು. ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು, ತುಂಬಾ ಗೌರವ ಹಾಗೂ ಆತ್ಮೀಯತೆಯಿಂದ ಸಂದರ್ಶಿಸಿದರು, ಕೆಲವು ವೃದ್ಧರನ್ನು ವಿಕಲ ಚೇತನರನ್ನು ಶಾಸಕರು ಅಪ್ಪಿಕೊಂಡು ಸಂತೈಸಿ ಭಾವುಕರಾಗಿ ಮಾತನಾಡಿಸಿದರು. ಮತ್ತು ಅವರ ಅಹವಾಲುಗಳನ್ನು ಶಾಸಕರು ಶ್ರದ್ಧೆಯಿಂದ ಆಲಿಸಿದರು, ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹರಿಸುವ ಪ್ರಯತ್ನ ಮಾಡಿದರು.
ಕೆಲವು ಜ್ವಲಂತ ಸಮಸ್ಯೆಗಳಿಗೆ ಸ್ಥಳೀಯ ಆಢಳಿತಾಧಿಕಾರಿಗಳ ಹತ್ತಿರ ಚರ್ಚೆ ಮಾಡಿ, ಸಂಬಂಧಿಸಿದ ಇಲಾಖೆಯ ಉನ್ನತಾಧಿಕಾರಿಗಳಲ್ಲಿ ಚರ್ಚಿಸಿ ಶೀಘ್ರವೇ ಪರಿಹರಿಸುವುದಾಗಿ ಭರವಸೆ ನೀಡಿದರು. ಇಂತಹ ಅನಿರೀಕ್ಷಿತ ಸ್ಪಂಧನೆಗೆ ಹಲವರು ಫಿದಾ ಆದರು, ಶಾಸಕರನ್ನು ಕುರಿತು ಶುಭ ಹರಸಿದರು ಮತ್ತು ಹಲವರು ಸಂತಸದಿಂದ ತಮ್ಮ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಶಾಸಕರತ್ತ ಧನ್ಯತಾ ಭಾವದಿಂದ ಮುಗುಳ್ನಗೆ ಬೀರಿದರು. ಇದು ಕೇವಲ ಒಂದು ಗ್ರಾಮದಲ್ಲಿನ ದೃಶ್ಯ ಅಲ್ಲ, ಶಾಸಕರಾದ ಡಾ” ಎನ್.ಟಿ.ಶ್ರೀನಿವಾಸ್ ರವರು ಭೇಟಿ ನೀಡಿದ ಪ್ರತಿಯೊಂದು ಹಳ್ಳಿಯಲ್ಲಿ ಇಂತಹದ್ದೇ ಭಾವನಾತ್ಮಕ ಸನ್ನಿವೇಶ ಜರುಗಿದೆ.
ಶಾಸಕರು ಈ ಸಂದರ್ಭದಲ್ಲಿ ಸ್ಥಳೀಯ ಆಡಳಿತಾಧಿಕಾರಿಯನ್ನುದ್ದೇಶಿಸಿ ಮ‍ಾತನಾಡಿದರು, ಗ್ರ‍ಾಮಗಳಿಗೆ ಸ್ಥಳೀಯ ಆಢಳಿತ ಸಮಪರ್ಕವಾಗಿ,ಸಕಾಲಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಿದೆ, ನಿರ್ಲಕ್ಷ್ಯ ತೋರಿದ್ದಲ್ಲಿ ಅಥವಾ ಗಂಭೀರ ಆರೋಪ ಕೇಳಿ ಬಂದಲ್ಲಿ. ಅಂತಹ ಜನ ವಿರೋಧಿ ನೀತಿಯ ಬಂಡ ಧೋರಣೆ ಅಧಿಕಾರಿಗಳ ವಿರುದ್ಧ, ಕಾನೂನು ರೀತ್ಯ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲ‍ಾಗುವುದು ಎಂದು ಅವರು ಈ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ. ಶಾಸಕರ ‍ ಶ್ರೀಮತಿಯವರಾದ ಪುಷ್ಪರವರು, ಬೆಳಿಗ್ಗೆಯಿಂದ ಸಂಜೆಯವರೆಗೆ ತಮ್ಮ ಪತಿಯೊಂದಿಗೆ ಪ್ರತಿ ಕ್ಷಣವೂ ಇದ್ದು ಅವರಿಗೆ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ನಾಗರಕಟ್ಟೆ ರಾಜಣ್ಣ, ಗುಡೇಕೋಟೆ ರಾಘವೇಂದ್ರಸ್ವಾಮಿ, ದಿನ್ನೆ ಮಲ್ಲಿಕಾರ್ಜುನ, ನರಸಿಂಹ ಗಿರಿ ವೆಂಕಟೇಶ, ದಿಬ್ಬದಳ್ಳಿ ಸಿದ್ದೇಶ ಸೇರಿದಂತೆ. ಗ್ರಾಮಗಳ ವಿವಿದ ಸಮುದಾಯಗಳ ಹಿರಿಯರು, ಗ್ರ‍‍ಾಮಗಳ ಗ್ರಾಮಸ್ಥರು ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು, ಮಹಿಳೆಯರು, ವೃದ್ಧರು, ವಿಕಲಚೇತನರು. ವಿಮುಕ್ತ ದೇವದಾಸಿಯರು ಹಾಗೂ ವಿದ್ಯಾರ್ಥಿಗಳು ಯುವಕರು, ಶಾಸಕರೊಂದಿಗೆ ಇದ್ದರು. ಗ್ರಾಮ ಪಂಚಾಯ್ತಿ ಅಧಿಕಾರಿ ಹನುಮಂತಪ್ಪ ಹಾಗೂ ಸಿಬ್ಬಂದಿ ಹಾಜರಿದ್ದರು.

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend