ವಾಲ್ಮೀಕಿ ಸಮುದಾಯ ಭವನವನ್ನು ನಿರ್ಮಿಸಿಕೊಡುವಂತೆ ವಾಲ್ಮೀಕಿ ಮುಖಂಡರಿಂದ ಮನವಿ…!!!

Listen to this article

ವಾಲ್ಮೀಕಿ ಸಮುದಾಯ ಭವನವನ್ನು ನಿರ್ಮಿಸಿಕೊಡುವಂತೆ ವಾಲ್ಮೀಕಿ ಮುಖಂಡರಿಂದ ಮನವಿ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು
ಕಾನಹೊಸಹಳ್ಳಿ ಸರ್ಕಾರಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಸರ್ವೇ ನಂಬರ್ 1000 ಮತ್ತು 999 ಸರ್ಕಾರಿ ಜಮೀನು ಖಾಲಿ ಇದ್ದು ಕಾನಹೊಸಹಳ್ಳಿ ಅಕ್ಕಪಕ್ಕದ ಭಾಗದಲ್ಲಿ ವಾಲ್ಮೀಕಿ ಸಮುದಾಯ ಜಾಸ್ತಿ ಇದ್ದು ಸಭೆ-ಸಮಾರಂಭಗಳಿಗೆ ಸಮುದಾಯ ಭವನ ಇಲ್ಲದೆ ಇರುವುದರಿಂದ ಹೊಸಹಳ್ಳಿ ಭಾಗದ ವಾಲ್ಮೀಕಿ ಮುಖಂಡರು ಗ್ರಾಮ ಪಂಚಾಯಿತಿ ಸದಸ್ಯರು ವಾಲ್ಮೀಕಿ ಯುವ ಮುಖಂಡರು ಗಳು ಸೇರಿ ಖಾಲಿ ಇರುವ ಈ ಜಾಗದಲ್ಲಿ ನಾಮಫಲಕ ಹಾಕಿ ಉದ್ಘಾಟನೆ ಮಾಡುವುದರ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೂ ಹಾಗೂ ಈ ಕ್ಷೇತ್ರದ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರಿಗೆ ಆದಷ್ಟು ಬೇಗ ಅತಿಶೀಘ್ರದಲ್ಲಿ ವಾಲ್ಮೀಕಿ ಸಮುದಾಯ ಭವನವನ್ನು ನಿರ್ಮಿಸಿಕೊಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಅಧ್ಯಕ್ಷರಾದ ಫೋಟೋ ಸಿದ್ದಲಿಂಗಪ್ಪ ನವರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಬೋರಣ್ಣ, ಶರಣಪ್ಪ ಜುಮೋಬನ ಹಳ್ಳಿ ಯುವ ಮುಖಂಡರಾದ ಟಿ.ವೆಂಕಟೇಶ್ ಕಾರ್ಯದರ್ಶಿ ಕತ್ತಿ ಬೋರಣ್ಣ, ಮಂಜುನಾಥ ಗಾಡಿ ಬಸಣ್ಣ. ಮಂಜು. ತಿಪ್ಪೇಶ್ ಅನಿಲ ರಾಘವೇಂದ್ರ ನಾಗರಾಜ ಶಿವಣ್ಣ ಕರ್ನಾಟಕ ರಾಜ್ಯ ವಾಲ್ಮೀಕಿ ಯುವ ವೇದಿಕೆ ಉಪಾಧ್ಯಕ್ಷರಾದ ಕೊಲುಮೆ ಹಟ್ಟಿ ಸೂರ್ಯಪ್ರಕಾಶ್, ವಾಲ್ಮೀಕಿ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು..

ವರದಿ. ವಿರೇಶ್, ಕೆ, ಎಸ್, ಎಚ್ಚರಿಕೆ ವಾರ ಪತ್ರಿಕೆ ವರದಿಗಾರರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend