ಮೊದಲ ಬಾರಿ ಕಾನಹೊಸಹಳ್ಳಿ ನಾಡಕಚೇರಿಗೆ ಭೇಟಿ ನೀಡಿದ ತಹಸಿಲ್ದಾರ್ ಟಿ.ಜಗದೀಶ್ ರವರು…!!!

Listen to this article

ದಿನಾಂಕ.28/5/2021. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ

ಮೊದಲ ಬಾರಿ ಕಾನಹೊಸಹಳ್ಳಿ ನಾಡಕಚೇರಿಗೆ ಭೇಟಿ ನೀಡಿದ ತಹಸಿಲ್ದಾರ್ ಟಿ.ಜಗದೀಶ.
ತಾಲೂಕಿನ ಕಾನಹೊಸಹಳ್ಳಿ ಗ್ರಾಮದ ನಾಡಕಚೇರಿಗೆ ಮಾನ್ಯ ತಹಸೀಲ್ದಾರರಾದ .ಟಿ ಜಗದೀಶ್ ರವರು ಭೇಟಿ ನೀಡಿ ನಾಡಕಚೇರಿಯ ಉಪತಹಸೀಲ್ದಾರರು , ಕಚೇರಿಯ ಸಿಬ್ಬಂದಿ ಹಾಗೂ ಹೊಸಹಳ್ಳಿ ಹೋಬಳಿ ಗೆ ಸಂಬಂಧಪಟ್ಟ ಎಲ್ಲಾ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ಮೊದಲನೆಯದಾಗಿ ಎಲ್ಲಾ ಸಿಬ್ಬಂದಿಗಳ ಆರೋಗ್ಯದ ಬಗ್ಗೆ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರ ಆರೋಗ್ಯದ ಬಗ್ಗೆ ವಿಚಾರಿಸಿದರು. ಕಚೇರಿಯ ಸಿಬ್ಬಂದಿಗಳು ತಮ್ಮ ತಮ್ಮ ಕೆಲಸಗಳನ್ನು ಬೇಜವಾಬ್ದಾರಿ ಮಾಡದೆ ಸಕಾಲ ದಲ್ಲಿ ಸಾರ್ವಜನಿಕರ ಕಾರ್ಯ ನಿರ್ವಹಿಸಬೇಕು, ಸಿಬ್ಬಂದಿಗಳು ಸಾರ್ವಜನಿಕರಲ್ಲಿ ಸೌಮ್ಯತೆಯಿಂದ ವರ್ತನೆ ಮಾಡಿ ಅವರ ಕೆಲಸಗಳನ್ನು ಪ್ರಾಮಾಣಿಕತೆಯಿಂದ ಮಾಡಿಕೊಡಬೇಕೆಂದು ಕಿವಿಮಾತು ಹೇಳಿದರು. ಯಾವುದೇ ಕಾರಣಕ್ಕೆ ಕಚೇರಿಗೆ ಸಂಬಂಧಿಸಿದ ಕೆಲಸಗಳನ್ನು ಬಾಕಿ ಉಳಿಸಿಕೊಳ್ಳುದಂತೆ ಸಮಯಕ್ಕೆ ಸರಿಯಾಗಿ ಸಕಾಲದಲ್ಲಿ ಕೆಲಸ ಮಾಡಬೇಕೆಂದು ಸಿಬ್ಬಂದಿಗಳಿಗೆ ಮನವರಿಕೆ ಮಾಡಿದರು. ನಂತರ ಕೋವಿಡ್ 19 ರ ಮಾರ್ಗಸೂಚಿಗಳ ಬಗ್ಗೆ ಚರ್ಚಿಸಲಾಯಿತು.ಇನ್ನು ನಾಡ ಕಚೇರಿಯ ಕೆಲವು ಕಾಗದ ಪತ್ರಗಳನ್ನು ಪರಿಶೀಲಿಸಿದರು ಈ ಸಂದರ್ಭದಲ್ಲಿ ನಾಡಕಛೇರಿಯ ಉಪ ತಹಶೀಲ್ದಾರ್ ಚಂದ್ರಮೋಹನ್,ಕಂದಾಯ ನಿರೀಕ್ಷಕ ಮುರುಳಿಕೃಷ್ಣ, ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀನಿವಾಸ ಕೊಂಡಿ, ಅಂಬುಜಾಕ್ಷಿ, ಚೈತ್ರ, ಅನಿತಾ,ಮರುಳುಸಿದ್ದಪ್ಪ, ರಾಘವೇಂದ್ರ, ಕೊಟ್ರೇಶ್, ಮುರುಗೇಶ್, ಕಂಪ್ಯೂಟರ್ ಆಪರೇಟರ್ ಮಂಜುನಾಥ್ ಸೇರಿ ಗಾಮ ಸಹಾಯಕ ಬೋರಪ್ಪ ಇದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend