ಸರ್ಕಾರಿ ಆದರ್ಶ ವಿದ್ಯಾಲಯ ಹೊಸಪೇಟೆ ವಿಜಯನಗರ ಜಿಲ್ಲೆ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ…!!!

Listen to this article

ಸರ್ಕಾರಿ ಆದರ್ಶ ವಿದ್ಯಾಲಯ ಹೊಸಪೇಟೆ ವಿಜಯನಗರ ಜಿಲ್ಲೆ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ
ಸರ್ಕಾರಿ ಆದರ್ಶ ವಿದ್ಯಾಲಯ ಹೊಸಪೇಟೆ ವಿಜಯನಗರ ಶಾಲೆಯಲ್ಲಿ 6/3/2024 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಣೆ ಮಾಡಿದರು
ಮುಖ್ಯಅತಿಥಿಗಳಾಗಿ ಶ್ರೀಯುತ ಸುಧಾಕರ್ ಹಾಗೂ ಶ್ರೀಯುತ ವಸಂತಯ್ಯ ಹಿರೇಮಠ ಶಿಕ್ಷಣ ಅಧಿಕಾರಿಗಳು ಎಸ್ ಡಿ ಎಂ ಸಿ ಸದಸ್ಯರು ಅಧ್ಯಕ್ಷರು ಹಾಗೂ ಶಾಲಾ ಶಿಕ್ಷಕರು ಮುಖ್ಯ ಗುರುಗಳು ಉಪಸ್ಥಿತರಿದ್ದರು.


ಶಾಲಾ ಶಿಕ್ಷಕರಾದ ಗಂಗಾಧರರು ಮಕ್ಕಳನ್ನು ಉದ್ದೇಶಿಸಿ ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವವನ್ನು ಸರಳವಾಗಿ ತಿಳಿಸಿದರು ಅಜ್ಞಾನದಿಂದ ಜ್ಞಾನದ ಕಡೆಗೆ ಹೋಗುವುದೇ ವಿಜ್ಞಾನ ಮುಖ್ಯ ಅತಿಥಿಗಳಾದ ಶ್ರೀಯುತ ಸುಧಾಕರವರು ಪ್ರತಿ ವರ್ಷ ಫೆಬ್ರವರಿ 28 ರಂದು ಸರ್ ಸಿ ವಿ ರಾಮನ್ ರ’ರಾಮನ್ ಪರಿಣಾಮ’ ಅವಿಷ್ಕಾರದ ಸ್ಮರಣಾರ್ಥವಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವಿಜ್ಞಾ ವಿಭಾಗದಿಂದ ನೊಬೆಲ್ ಪಡೆದ ಏಷ್ಯಾದ ಮೊಟ್ಟ ಮೊದಲ ವಿಜ್ಞಾನಿ ಎಂಬ ಖ್ಯಾತಿ ರಾಮನ್ ಅವರಿಗಿದೆ. ಎಂದು ಮಕ್ಕಳಿಗೆ ತಿಳಿಸಿದರು ಹಾಗೂ ಮುಖ್ಯ ಅತಿಥಿಗಳಾದ ವಸಂತಯ್ಯ ಹಿರೇಮಠ ಅವರು ಮಕ್ಕಳನ್ನು ಉದ್ದೇಶಿಸಿ ನಿಮ್ಮಲ್ಲಿ ಹೊಸ ವಿಷಯಗಳ ಪ್ರಶ್ನೆಗಳ ಮೂಡಬೇಕು ಅದಕ್ಕೆ ಉತ್ತರ ಹುಡುಕುವುದೇ ಆವಿಷ್ಕಾರ ಎಂದು ಸರಳ ರೂಪದಲ್ಲಿ ತಿಳಿಸಿದರು
ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಶಾಲಾ ಮಕ್ಕಳಿಂದ ಭರತನಾಟ್ಯ ತಬಲವಾದ್ಯ ಅತ್ಯುತ್ತಮ ಪ್ರದೇಶದ ಕಂಡುಬಂದಿತ್ತು ತಬಲವಾದ್ಯದ ಮಕ್ಕಳು ನೆರೆದಿದ್ದ ಶಿಕ್ಷಕರು ಅತಿಥಿಗಳು ಶಾಲಾ ಮಕ್ಕಳನ್ನು ಮಂತ್ರ ಮುಗ್ಧರನ್ನಾಗಿ ಮಾಡಿದರು ತಬಲ ವಾದ್ಯವನ್ನು ಪ್ರಶಂಸಿಸಿ ಶ್ರೀಯುತ ಸುಧಾಕರ್ ಅವರು ತಬಲ ವಾದ್ಯದ ಮಕ್ಕಳಿಗೆ ಬಹುಮಾನಿಸಿ ಪ್ರೋತ್ಸಾಹಿಸಿದರು.

 


ಶಾಲಾ ಶಿಕ್ಷಕರು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅತ್ಯಂತ ಉತ್ಸಾಹ ಹಾಗೂ ಪರಿಶ್ರಮದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಆದಿತ್ಯ L 1 ಚಂದ್ರಯಾನ 3 ಅಣುವಿನಿಂದ ವಿದ್ಯುತ್ತು ಹೇಗೆ ವಿಭಜಿಸುತ್ತದೆ ವಿದ್ಯುತ್ತನ್ನು ಹೇಗೆ ಶೇಖರಿಸಬೇಕು ಜ್ವಾಲಾಮುಖಿಗಳು ಸೌರಮಂಡಲ ನೀರಿನ ಶುದ್ಧೀಕರಣ ಕೃಷಿ ಮಾದರಿ ಹೈಡ್ರಾಲಿಕ್ ಸೇತುವೆ ಮಾನವನ ದೇಹದ ಅಂಗಾಂಗಗಳ ಕುರಿತು ವಿವರಣೆ ಇನ್ನು ಅನೇಕ ವಿಷಯಗಳನ್ನು ಒಳಗೊಂಡಿತ್ತು…

ವರದಿ. ಗಣೇಶ್, ಕೆ, ಹೊಸಪೇಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend