ತುಂಗಭದ್ರಾ ಜಲಾಶಯ ಕಾಲುವೆಗಳಿಗೆ ನೀರು ಬಿಡುಗಡೆ…!!!

Listen to this article
ತುಂಗಭದ್ರಾ ಜಲಾಶಯ ಕಾಲುವೆಗಳಿಗೆ ನೀರು ಬಿಡುಗಡೆ .

ರಾಯಚೂರು, ಕೊಪ್ಪಳ , ಮತ್ತು ಬಳ್ಳಾರಿ ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಿಂದ ಎಡದಂಡೆ, ಬಲದಂಡೆ ಕಾಲುವೆಗಳಿಗೆ ಹಾಗೂ ವಿಜಯನಗರ ಕಾಲುವೆಗಳಿಗೆ ಜಲಾಶಯಕ್ಕೆ ಪೂಜೆ ಸಲ್ಲಿಸುವ ಮೂಲಕ ಸಂಸದ ಸಂಗಣ್ಣ ಕರಡಿ ಅವರು ಪುತ್ರ, ಕೆಡಿಪಿ ಸದಸ್ಯ ಅಮರೇಶ ಕರಡಿ ಅವರು ನೀರು ಬಿಡುಗಡೆಗೆ ಮಾಡಿದರು.

ಭಾನುವಾರ ಮುನಿರಾಬಾದ್ ನ ತುಂಗಭದ್ರಾ ಜಲಾಶಯಕ್ಕೆ ಜನಪ್ರತಿನಿಧಿಗಳು, ರೈತರು, ಗಣ್ಯರೊಂದಿಗೆ ಪೂಜೆ ಸಲ್ಲಿಸಿದ ಅವರು, ತುಂಗಭದ್ರಾ ಜಲಾಶಯ 115ನೇ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಜು. 18 ರಿಂದ ವಿವಿಧ ಕಾಲುವೆಗಳಿಗೆ  ನ.30 ರವರೆಗೆ ನೀರು ಜಲಾಶಯದಿಂದ ನೀರು ಹರಿಸುವದಕ್ಕೆ ಅಧಿಕೃತವಾಗಿ ಚಾಲನೆಯನ್ನು ನೀಡಿ ಮಾತನಾಡಿದರು.
ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಬಂದ ಮೇಲೆ ಜಲಾಶಯದಿಂದ ಎರಡನೇ ವರ್ಷದಲ್ಲಿ ಎರಡು ಬೆಳೆಗಳಿಗೆ ನೀರು ಹರಿಸಲಾಗುತ್ತಿದೆ, ತುಂಗಭದ್ರಾ ಜಲಾಶಯವು  ತ್ರೀವಳಿ ಜಿಲ್ಲೆಗಳ ರೈತರ ಜೀವನಾಡಿಯಾಗಿದೆ, ಬಿಜೆಪಿ ಸರ್ಕಾರ ರೈತರ ಪರವಾಗಿರುವದರಿಂದ ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಗೆ ನೀರು ಹರಿಸುವ ದೃಢನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ರೈತರ ಹಿತದೃಷ್ಠಿಯಿಂದ ಸರ್ಕಾರ ಕಾಲುವೆಗಳಿಗೆ ನೀರು ಹರಿಸುತ್ತಿದ್ದು, ಜಲಾಶಯದ ವಿವಿಧ ಕಾಲುವೆಗಳಿಂದ ಹರಿವು ನೀರಿನ ಸದುಪಯೋಗವಾಗಬೇಕು, ನಮ್ಮ ಪ್ರದೇಶ ಸಂಪೂರ್ಣವಾಗಿ ನೀರಾವರಿ ಪ್ರದೇಶವಾಗಬೇಕು ಅದಕ್ಕೆ ಅನುಷ್ಠಾನದಲ್ಲಿರುವ ವಿವಿಧ ನೀರಾವರಿ ಯೋಜನೆಗಳಿಗೆ ಸರ್ಕಾರ ಚಾಲನೆಯನ್ನು ನೀಡಿದೆ ಎಂದರು.

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಕನಕಗಿರಿ ಶಾಸಕ ಬಸವರಾಜ ದಡೇಸೂಗರ್, ಕಾಡಾ ಅಧ್ಯಕ್ಷ ತಿಪ್ಪೆರುದ್ರಯ್ಯಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ ಮೈನಳ್ಳಿ, ಪ್ರಮುಖರಾದ ಪಾಲಕ್ಷಪ್ಪ ಗುಂಗಾಡಿ, ಬಸವಾರಜ ಭೋವಿ, ಪ್ರದೀಪ ಹಿಟ್ನಾಳ, ಉಪಸ್ಥಿತರಿದ್ದರು.

ವರದಿ. ಮಂಜುನಾಥ್, ದೊಡ್ಡಮನಿ
Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend