ಪ್ರಕೃತಿ ವಿಧಿಸಿದ ಲಾಕ್ ಡೌನ್ ಮಳೆ…!!!

Listen to this article

ಪ್ರಕೃತಿ ವಿಧಿಸಿದ ಲಾಕ್ ಡೌನ್ ಮಳೆ.
ಹೂವಿನ ಹಡಗಲಿ ತಾಲೂಕಿನಾದ್ಯಾಂತ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈ ದಿನ ಭಾನುವಾರವಾಗಿದ್ದರೂ ಮಾರುಕಟ್ಟೆ ,ಪಟ್ಟಣದ ಪ್ರಮುಖ ಬೀಡಿಗಳು ಖಾಲಿ ಖಾಲಿಯಾಗಿದ್ದವು.. ಕೆಲವು ಅಂಗಡಿಗಳು ಬೀದಿ ಬದಿಯ ಹೂ,ಹಣ್ಣು ವ್ಯಾಪಾರಿಗಳು ಇದ್ದರೂ ಕೊಳ್ಳುವ ಜನರಿರಲಿಲ್ಲ. ವಾತಾವರಣ ಒಂದು ರೀತಿಯ ಲಾಕ್ ಡೌನ್ ನಂತಿತ್ತು.
ಇವತ್ತೆ ಸ್ವಲ್ಪ ವ್ಯಾಪಾರ ಆಗ್ತಿತ್ತು.ಮಳೆ ಇರೊದಕ್ಕೆ ಜನ ಯಾರು ಹೊರಗಡೆ ಬರುತ್ತಿಲ್ಲ ಹಾಗಾಗಿ ವ್ಯಾಪರನೇ ಇಲ್ಲ. ಲಾಕ್ ಡೌನ್ ನಲ್ಲಿ ಉಪವಾಸ ಸತ್ತು ಬದುಕಿದಿವಿ ಹೀಗೂ ಹಿಂಗ ಆದರೆ ಹೇಗೆ ಬದುಕೊಂದು ಎಂದು ಪಾನಿಪೂರಿ ವ್ಯಾಪಾರಿ ಅಳಲು ತೋಡಿಕೊಂಡರು.
ಒಬ್ಬ ರೈತರು ಹಿಂಗಾ ಮಳೆ ಹತ್ತಿಕೊಂಡರೆ.. ನಾವು ಹೊಲದಲ್ಲಿ ಕೆಲಸ ಮಾಡೊದಾದ್ರೂ ಹೆಂಗೆ ?. ಅಗ್ಲೆ ಮೆಕ್ಕೆಜೋಳ ಬೆಳ್ಳಗ ಆಗ್ತಿದೆ ಹಿಂಗೆ ಆದರೆ ಈ ವರ್ಷದ ಬೆಳೆ ದಕ್ಕಿಸಿಕೊಳ್ಳೊದು ತುಂಬಾ ಕಷ್ಟ ಇದೆ ಎಂದು ಅತಂಕ ವ್ಯಕ್ತ ಪಡಿಸಿದರು.

ವರದಿ – ಅಜಯ.ಚ ಹೂವಿನ ಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend