ಜುಂಜಪ್ಪನ ಜಾತ್ರೆಯಲ್ಲಿ ಜನವೋ ಜನ ರಸ್ತೆಗಳಲ್ಲಿ ಎತ್ತಿನ ಬಂಡಿಗಳ ದಿಬ್ಬಣ / ಹಾವು, ಚೇಳು ಕಡಿಸಿಕೊಂಡವರ ಹರಕೆ…!!!

Listen to this article

ಜುಂಜಪ್ಪನ ಜಾತ್ರೆಯಲ್ಲಿ ಜನವೋ ಜನ
ರಸ್ತೆಗಳಲ್ಲಿ ಎತ್ತಿನ ಬಂಡಿಗಳ ದಿಬ್ಬಣ / ಹಾವು, ಚೇಳು ಕಡಿಸಿಕೊಂಡವರ ಹರಕೆ

ಐತಿಹಾಸಿಕ ಪರಂಪರೆ ಒಳಗೊಂಡ ತಾಲೂಕಿನ ದುಮ್ಮಿ ಗೊಲ್ಲರಹಟ್ಟಿಯ ಶ್ರೀಜುಂಜಪ್ಪಸ್ವಾಮಿ ಜಾತ್ರಾ ಮಹೋತ್ಸವ ಮಂಗಳವಾರ ಅದ್ಧೂರಿಯಾಗಿ ನೆರವೇರಿತು. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ರಸ್ತೆಗಳಲ್ಲಿ ಎತ್ತಿನ ಬಂಡಿಗಳು, ಟ್ರಾಕ್ಟರ್, ಬೈಕ್, ಆಟೋ, ಕಾರುಗಳ ದಿಬ್ಬಣ ಹೊರಟಂತೆ ಕಾಣುತ್ತಿದ್ದವು.
ದೇವರ ಮೂರ್ತಿಯನ್ನು ಆಭರಣ, ಹಾಗೂ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಗ್ಗೆ ೮ ಗಂಟೆಯಿAದಲೇ ಪೂಜಾ ಕಾರ್ಯಕ್ರಮಗಳು ಆರಂಭವಾದವು. ಮುತ್ತಿನ ಪಲ್ಲಕಿ ಉತ್ಸವ, ಕದಳಿಪೊಜೆ, ಎಲೆ ಪೂಜೆ ಕಾರ್ಯಗಳು ನಡೆದವು. ಉಗ್ಗದ ಗಡಿಗೆ, ಹಾಲು ಕಂಬಿಗೆ, ಹರಗಿನ ಮುದ್ರೆಗೆ, ಕಂಚಿನ ಕಡಗಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು. ಹಾವು, ಚೇಳು ಕಡಿಸಿಕೊಂಡವರು ಮುಡುಪು ಕಟ್ಟಿಕೊಂಡು ಬಂದು ಕರಿಕಂಬಳಿ ಗದ್ದಿಗೆ ಮೇಲೆ ಹಾಕುವ ಮೂಲಕ ಹರಕೆ ತೀರಿಸಿದರು. ರಾತ್ರಿ ವರೆಗೂ `ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಜನಪದ ಕಲಾ ತಂಡಗಳು ಜಾತ್ರೆಗೆ ಮತ್ತಷ್ಟು ಮೆರಗು ತಂದಿದ್ದವು. ಹೆಣ್ಣುಮಕ್ಕಳ ವೀರಗಾಸೆ, ಕೀಲುಕುದುರೆ, ಕರಡಿ ಮಜಲು, ನವಿಲು ಕುಣಿತ, ಡೊಳ್ಳು ಕುಣಿತ, ಕೋಲಾಟ, ಮೊಜಾ ಕುಣಿತ, ನಂದಿ `ದ್ವಜ, ಸೊಬಾನೆ, ಪದ, ವಿವಿಧ, ಸಾಂಸ್ಕೃತಿಕ ವಾದ್ಯಗಳು, ಸೋಮನ ಕುಣಿತ, ಗೊರವರ ಕುಣಿತ, ಟಗರು ಕಾಳಗ, ಪಾನಕ ಬಂಡಿಗಳ ಮೆರವಣಿಗೆ, ಉಂಡೆ ಮಂಡೆ, ಮಹಿಳೆಯರು ಕುಂಭ, ಮೇಳ ನೋಡುಗರ ಕಣ್ಮನ ಸೆಳೆದವು.


ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ರಸ್ತೆ ಬದಿ ಬೈಕ್ಗಳು, ಹೊಲಗಳಲ್ಲಿ ಕಾರು, ಟ್ರಾಕ್ಟರ್, ಆಟೋಗಳನ್ನು ನಿಲ್ಲಿಸಲಾಗಿತ್ತು. ಜಾತ್ರೆಯಲ್ಲಿ ನೂರಾರು ಹೂವು-ಹಣ್ಣು, ತೆಂಗಿನಕಾಯಿ ಅಂಗಡಿಗಳು, ಸಣ್ಣ ಮಕ್ಕಳ ಆಟದ ಸಾಮಾನಿನ ಅಂಗಡಿಗಳು, ಹಲ್ವಾ, ಕಾರ-ಮಂಡಕ್ಕಿ, ಮಿರ್ಚಿ, ಐಸ್ ಕ್ರಿಮ್ ಅಂಗಡಿಗಳು ದೇಗಲುದ ರಸ್ತೆಗಳಲ್ಲಿ ಹಾಕಿಕೊಂಡಿದ್ದರು.
`ಭದ್ರತೆಗಾಗಿ ಹೊಳಲ್ಕೆರೆ, ಚಿಕ್ಕಜಾಜೂರು ಹಾಗೂ ಚಿತ್ರಹಳ್ಳಿ ಠಾಣೆಗಳಿಂದ ಇಬ್ಬರು ಎಸ್‌ಐ, ಒಬ್ಬರು ಸಿಪಿಐ ಸೇರಿದಂತೆ 60 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ಜಾತ್ರಾ ಮಹೋತ್ಸವ ನಡೆಯಿತು ಎಂದು ಸಿಪಿಐ ರವೀಶ್ ತಿಳಿಸಿದರು.

ಹೊಳಲ್ಕೆರೆ ತಾಲೂಕಿನ ದುಮ್ಮಿ ಗೊಲ್ಲರಹಟ್ಟಿಯ ಶ್ರೀಜುಂಜಪ್ಪಸ್ವಾಮಿ ಜಾತ್ರೆ ಮಂಗಳವಾರ ಬುಧವಾರ, ಗುರುವಾರ, ಮೂರುದಿನಗಳ ಕಾಲ ಅದ್ಧೂರಿಯಾಗಿ ನೆರವೇರಿತು.

ಶ್ರೀಜುಂಜಪ್ಪಸ್ವಾಮಿ ಜಾತ್ರೆ ಸೇರಿದ್ದ ಜನಸ್ತೋಮ

ಹೂವು ಹಾಗೂ ಆಭರರಣಗಳಿಂದ ಅಲಂಕೃತಗೊಂಡಿರುವ ಜುಂಜಪ್ಪಸ್ವಾಮಿ ದೇವರ ಮೂರ್ತಿ..

ವರದಿ.ಸುರೇಶ್ ಹೊಳಲ್ಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend