ಸಂತೋಷ್ ಲಾಡ್ ರವರ ಪೌರಾಕಾರ್ಮಿಕ ಪೌoಡೇಷನ್ ವತಿಯಿಂದ ಆರೋಗ್ಯ ಕಿಟ್ ವಿತರಣೆ ಕಾರ್ಯಕ್ರಮ ಮಾಡಲಾಯಿತು…!!!

Listen to this article

ಹರಪನಹಳ್ಳಿ ತಾಲೂಕು ವಿಜಯನಗರ ಜಿಲ್ಲೆಯಲ್ಲಿ ಹಿಂದು ನಡೆದ ಮಾಜಿ ಸಚಿವರು ಆದ ಸಂತೋಷ ಲಾಡ್ ರವರ ಪೌರಾಕಾರ್ಮಿಕ ಪೌಡೀಷನ್ ಹಾಗೂ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಅರೋಗ್ಯ ಕಿಟ್ ವಿತರಣೆ ಹಾಗೂ ಅಭಿನಂದನೆಗಳ ಕಾರ್ಯಕ್ರಮ ಜರುಗಿತು

ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ತರಳು ಬಾಳು ಕಲ್ಯಾಣ ಮಂಟಪ ದಲ್ಲಿ ನಡೆದ ತಾಲೂಕಿನ ಸಮಸ್ತ ಆಶಾ ಕಾರ್ಯಕರ್ತೆಯರಿಗೆ ಹಾಗೂ ತಾಲೂಕಿನ ಸಮಸ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮಕ್ಕೆ ವೇದಿಕೆಯ ಮೇಲೆ ಸ್ವಾಗತ ಕೋರಿದ ಎಲ್ಲಾ ತಾಲೂಕಿನಲ್ಲಿರುವ ವಿವಿಧ ಸಂಘಟನೆಯ ಪದಾಧಿಕಾರಿಗಳನ್ನು ಎಮ್ ಟಿ ಸುಭಾಷ್ ಚಂದ್ರ ರವರು ಸ್ವಾಗತವನ್ನು ಕೋರಿದರು

* ಎ ಐ ಸಿಸಿ, ಕಾಂಗ್ರೆಸ್ ವಕ್ತರರು ಮತ್ತು ಸಂಜೆವಿನಿ ಮಿಷನ್ ಸಂಸ್ಥಾಪಕರಾದ ಕವಿತ ರೆಡ್ಡಿ ಮಾತನಾಡಿ,ಆಶಾ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಅನನ್ಯವಾದದ್ದು. ಅವರ ಸೇವೆ ಬೆಲೆ ಕಟ್ಟಲಾಗದಂತಹದ್ದಾಗಿದ್ದು, ಈ ಮೂಲಕ ಅವರ ಸಮಾಜ ಸೇವಾ ಮನೋಭಾವವನ್ನು ಗೌರವಿಸುತ್ತಿದೆ. ಈ ಮೂಲಕ ಅವರ ಸೇವೆಯಲ್ಲಿ ಉತ್ತೇಜಿಸುವ ಸಣ್ಣ ಪ್ರಯತ್ನ ಇದಾಗಿದೆ ಎಂದರು.
ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯವಾದದ್ದು, ಇವರು ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಶ್ರಮಿಸಿರುತ್ತಾರೆ. ಅವರಿಗೆ ಸನ್ಮಾನ ಮಾಡಬೇಕೆಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ಹರಪನಹಳ್ಳಿ,ಹಡಗಲಿ,ಹಗರಿಬೊಮ್ಮನಹಳ್ಳಿ ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಲಾಗುತ್ತಿದೆ ಎಂದರು.
*ನಿರುದ್ಯೋಗ ಸಮಸ್ಯೆ,ವಿದ್ಯಾರ್ಥಿಗಳ ಸಮಸ್ಯ,ನಿವಾರಣೆ ಆಗಬೇಕಿದೆ.
*ಆಶಾಕಾರ್ಯಕ್ರತ್ರಿಯರಿಗೆ ಕಾಯಂ ಗೊಳಿಸಬೇಕು ಅಥವಾ ಕನಿಷ್ಠ ವೇತನವನ್ನು ನೀಡಬೇಕು ಎಂದು ಹೇಳಿದರು.
* ಕರೋನ ಬಂದ ಸಂದರ್ಭದಲ್ಲಿ ಬಾಣಂತಿಯರಿಗೆ ರೇಷನ್ ಮುಟ್ಟುವ ಕೆಲಸದಿಂದ ಇಡಿದು ಹೆರಿಗೆ ಆಗುವವರಿಗೆ ಅವರಿಗೆ ಸಹಾಯ ಮಾಡುವುದು,
* ಪೌರ ಕಾರ್ಮಿಕರ ಹಗಲು ರಾತ್ರಿಯನ್ನದೆ ಕಾರ್ಯನಿರ್ವಾಹಣೆಗೆ ಉತ್ತಮ ಶ್ಲಾಘಸಿದರು,ಈ ಕಾರ್ಯಕ್ರಮದ ಕೇಂದ್ರ ಬಿಂದು ಆಗಿರುವಂತ ಸನ್ಮಾನ್ಯ ಶ್ರೀ ಮಾಜಿ ಸಚಿವರು ಆದ ಸಂತೋಷ ಲಾಡ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದ ಉದ್ದೇಶಿಸಿ.ಭಾಷವನ್ನು ಪ್ರಾರಂಭಿಸಿದರು
*ಕರ್ನಾಟಕದಲ್ಲಿ  42,000.ಆಶಾ ಕಾರ್ಯಕರ್ತರು 65,000 ಅಂಗನವಾಡಿ ಕಾರ್ಯಕರ್ತರು 1.25 ಅಕ್ಷರ ದಾಸೋಹದ ಕಾರ್ಯಕರ್ತರು ಇದ್ದರೆ ಎಂಬ ಮಾಹಿತಿಯನ್ನು ನೀಡಿದರು.
*
ಐ.ಸಿ.ಡಿ.ಎಸ್ ಸೇವೆಗಳು

ಪೂರಕ ಪೌಷ್ಠಿಕ ಆಹಾರ
ಚುಚ್ಚುಮದ್ದು
ಆರೋಗ್ಯ ತಪಾಸಣೆ
ಮಾಹಿತಿ ಸೇವೆ
ಶಾಲಾಪೂರ್ವ ಶಿಕ್ಷಣ
ಪೌಷ್ಠಿಕತೆ ಮತ್ತು ಆರೋಗ್ಯ ಶಿಕ್ಷಣ

ರಾಜ್ಯದ ಎಲ್ಲಾ 175 ತಾಲ್ಲೂಕುಗಳಲ್ಲೂ 181 ಗ್ರಾಮಾಂತರ, 12 ಗುಡ್ಡಗಾಡು ಯೋಜನೆ ಹಾಗು 11 ನಗರ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರ ಗಳ ಮುಖಾಂತರ ಅನುಷ್ಠಾನಗೊಳ್ಳುತ್ತಿದೆ. ರಾಜ್ಯದಲ್ಲಿ ಒಟ್ಟು 61187 ಅಂಗನವಾಡಿ ಕೇಂದ್ರ ಗಳು ಹಾಗೂ 3331 ಮಿನಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 2012-13 ನೇ ಸಾಲಿನಲ್ಲಿ 55.07 ಲಕ್ಷ ಫಲಾನುಭವಿಗಳಿಗೆ ಸೇವೆಗಳನ್ನು ಒದಗಿಸಲಾಗಿರುತ್ತದೆ.

ಆಡಳಿತ ವೆಚ್ಚ: 2008-09 ರವರೆಗೆ ಐಸಿಡಿಎಸ್ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸಕರ್ಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದು, 2009-10 ನೇ ಸಾಲಿನಿಂದ ಶೇ 90:10 ಅನುಪಾತದಲ್ಲಿ ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಭರಿಸುತ್ತವೆ. ಅನುದಾನವನ್ನು ಸಿಬ್ಬಂದಿ ವೇತನ, ಗೌರವಧನ, ಉಸ್ತುವಾರಿ ಮತ್ತು ಮೌಲ್ಯಮಾಪನ, ಶಾಲಾ ಪೂರ್ವ ಶಿಕ್ಷಣ ಹಾಗೂ ಮೆಡಿಸಿನ್ ಕಿಟ್ ಖರೀದಿ ಇತ್ಯಾದಿ ವೆಚ್ಚಗಳಿಗಾಗಿ ಭರಿಸಲಾಗುತ್ತಿದೆ.
ಅಂಗನವಾಡಿ ಕಾರ್ಯಕತರ್ೆ / ಸಹಾಯಕಿಯರಿಗೆ ಸಮವಸ್ತ್ರ: ಕೇಂದ್ರ ಸಕರ್ಾರದ ಮಾರ್ಗಸೂಚಿಯ ದಿ:22-10-12 ರಂತೆ ಪ್ರತಿ ವರ್ಷ ಅಂಗನವಾಡಿ ಕಾರ್ಯಕತರ್ೆ /ಅಂಗನವಾಡಿ ಸಹಾಯಕಿಯರಿಗೆ ಪ್ರತಿ ಸೀರೆಗೆ ರೂ. 300/- ಗಳಂತೆ ಎರಡು ಸೀರೆಗಳನ್ನು ಒದಗಿಸಬೇಕಾಗಿರುತ್ತದೆ.2012-13 ನೇ ಸಾಲಿನಲ್ಲಿ ವಾಸ್ತಸವಾಗಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 121648 ಅಂ.ಕಾ/ಮಿನಿ.ಕಾ/ ಅಂ.ಸಾ ಯರಿಗೆ ವರ್ಷಕ್ಕೆ 2 ಸೀರೆಯಂತೆ ಮ:ಕೆ.ಎಚ್.ಡಿ.ಸಿ ಸಂಸ್ಥೆಯವರು ಸರಬರಾಜು ಮಾಡುತ್ತಾರೆ.
ಶಾಲಾ ಪೂರ್ವ ಶಿಕ್ಷಣ ಕಿಟ್: ಸಮಗ್ರ ಶಿಶು ಅಬಿವೃದ್ದಿ ಯೋಜನೆ ಆಡಳಿತ ವೆಚ್ಚದಡಿ ಪ್ರತಿ ಅಂಗನವಾಡಿ ಕೇಂದ್ರ ಹಾಗು ಮಿನಿ ಕೇಂದ್ರಕ್ಕೆ ವಾಷರ್ಿಕ ರೂ 1000 ಹಾಗು ರೂ 500 ಗಳ ಅನುದಾನವನ್ನು ಅನುಕ್ರಮವಾಗಿ ಶಾಲಾ ಪೂರ್ವ ಶಿಕ್ಷಣ ಕಿಟ್ಗಾಗಿ ನಿಗದಿಪಡಿಸಲಾಗಿದೆ. ರಾಜ್ಯದ್ಯಾಂತ ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟ ಹಾಗೂ ಏಕ ರೂಪತೆ ತರುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಒಂದು ಸಮಿತಿಯನ್ನು ರಚಿಸಿ, ನುರಿತ ಶಿಕ್ಷಣ ತಜ್ಞರ ಹಾಗೂ ವಿವಿಧ ಆಯ್ದ ಅಆಖ ಕರ್ಮಚಾರಿಗಳ ಕಾರ್ಯಗಾರ ನಡೆಸಿ, ಮಾದರಿ ಕಿಟ್ ಅಬಿವೃದ್ದಿ ಪಡಿಸಲಾಗಿದೆ. ಹೀಗೆ ಅಬಿವೃದ್ಧಿ ಪಡಿಸಿದ ಮಾದರಿ ಕಿಟ್ ನ್ನು ರಾಜ್ಯದ ಎಲ್ಲಾ 64518 ಅಂಗನವಾಡಿ ಕೇಂದ್ರಗಳಗೆ ಸರಬರಾಜು ಮಾಡಲು ಜಿಲ್ಲಾ ಮಟ್ಟದಲ್ಲಿ ಇ- ಟೆಂಡರ್ ಪ್ರಕ್ರಿಯೆ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ.
ಮೆಡಿಸಿನ್ ಕಿಟ್: ಸಮಗ್ರ ಶಿಶು ಅಬಿವೃದ್ದಿ ಯೋಜನೆ ಆಡಳಿತ ವೆಚ್ಚದಡಿ 61187 ಅಂ.ಕೇಂದ್ರಗಳು ಹಾಗೂ 3331 ಮಿನಿ ಅಂ.ಕೇಂದ್ರಗಳಿಗೆ ಪ್ರತಿ ಅಂ.ಕೇಂದ್ರಕ್ಕೆ ರೂ 600/- ರಂತೆ ಹಾಗೂ ಪ್ರತಿ ಮಿನಿ ಅಂ.ಕೇಂದ್ರಕ್ಕೆ ರೂ 300/- ರಂತೆ ಮೆಡಿಸಿನ್ ಕಿಟ್ಗಳನ್ನು ಒದಗಿಸಲಾಗಿದೆ.ಎಂದು ಹೇಳಿದರು

ಅನೆಕ ಗಣ್ಯ ಮಾನ್ಯರು ವಿವಿದ ಇಲಾಖೆಗಳ ಹರಪನಹಳ್ಳಿಯ ಅರೋಗ್ಯ ಅಧಿಕಾರಿಗಳು,
ಸದಸ್ಯರು, ಜನಪ್ರತಿನಿಧಿಗಳು ವಿವಿದ ಸಂಘಟನೆಗಳ ಪದಾಧಿಕಾರಿಗಳು,ಪತ್ರಿಕೆ ಮಾಧ್ಯಮದವರು ವೇದಿಕೆಯಲ್ಲಿದ್ದರು.ತಾಲೂಕಿನ ಸಮಸ್ತ ಆಶಾಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಕಾರ್ಯಕ್ರಮದಲ್ಲಿ ಭಾಗಿಯಾಗಿ ಸನ್ಮಾನ ಸ್ವೀಕರಿಸಿದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend