ರಾಜ್ಯದ ಗ್ರಾಮ ಪಂಚಾಯತಿ ಸದಸ್ಯರಿಗೆ, ಹಾಗೂ ಪಿಡಿಒ ಮತ್ತು ಕಾರ್ಯದರ್ಶಿ ಗಳಿಗೆ ದೂರದೃಷ್ಟಿ ಯೋಜನೆ ತಯಾರಿಕೆ ಶಿಬಿರ…!!!

Listen to this article

ದಿನಾಂಕ 21-9-2022 ರಿಂದ ರಾಜ್ಯದ ಗ್ರಾಮ ಪಂಚಾಯತಿ ಸದಸ್ಯರಿಗೆ, ಹಾಗೂ ಪಿಡಿಒ ಮತ್ತು ಕಾರ್ಯದರ್ಶಿ ಗಳಿಗೆ ದೂರದೃಷ್ಟಿ ಯೋಜನೆ ತಯಾರಿಕೆ ಕುರಿತು ಮೂರು ದಿನಗಳ ತರಬೇತಿಯನ್ನು 40 ಜನರ ಒಂದು ಗುಂಪಿನಂತೆ ತಾಲ್ಲೂಕಿನ ಸಾಮರ್ಥ್ಯ ಸೌಧಗಳಲ್ಲಿ 3 ದಿನ ತರಬೇತಿಯನ್ನು ಏರ್ಪಡಿಸಲಾಗಿದೆ.

ದೂರದೃಷ್ಟಿ ಯೋಜನೆ ಎಂದರೆ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂದು ಇರುವ ಮೂಲಭೂತ ಸೌಕರ್ಯಗಳು ಹಾಗೂ ಅವಶ್ಯಕತೆಯಿರುವ ಸೌಕರ್ಯಗಳು ಏನು ಅವುಗಳನ್ನೂ ಮುಂದಿನ ಐದು ವರ್ಷಗಳಲ್ಲಿ ಹೇಗೆ ಗ್ರಾಮ ಪಂಚಾಯತಿ ಒದಗಿಸಬೇಕು‌ ಅದಕ್ಕಾಗಿ ಬೇಕಾಗಿರುವ ಹಣ ಎಷ್ಟು ,ಹಣದ ಮೂಲ‌ ಯಾವುದು ಎಂದು ಗುರುತಿಸಿಕೊಳ್ಳುವ ಒಂದು ಬಹಳ ಮುಖ್ಯ ವಾದ ಪ್ರಕ್ರಿಯೆ.

ಯೋಜನೆಯನ್ನು ಹೇಗೆ ತಯಾರಿಸ ಬೇಕು, ಯಾರು ಯಾರು ಭಾಗವಹಿಸ ಬೇಕು, ಯಾರ ಜವಬ್ದಾರಿ ಏನು . ಯೋಜನೆ ತಯಾರಿಕೆಯಿಂದಾಗುವ ಉಪಯೋಗ, ಈ ವಿಷಯಗಳನ್ನು ಮೂರು ದಿನದ ತರಬೇತಿಯಲ್ಲಿ ತಿಳಿಸಿ ಕೊಡಲಾಗುವುದು.
ಆದ್ದರಿಂದ ದಯಮಾಡಿ ಎಲ್ಲಾ ಗ್ರಾಮ ಪಂಚಾಯತಿ ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಮತ್ತು ಸದಸ್ಯರು ತಮ್ಮ ಪಿಡಿಒ, ಹಾಗೂ ಕಾರ್ಯದರ್ಶಿ ಗಳೊಂದಿಗೆ ಒಂದು ದಿನವೂ ತಪ್ಪದೇ ಭಾಗವಹಿಸಿ ತಮ್ಮ ಗ್ರಾಮ ಪಂಚಾಯತಿಯ ದೂರದೃಷ್ಟಿ ಯೋಜನೆಯನ್ನು ರಚಿಸೊಣ ನಮ್ಮ ಗ್ರಾಮದ ಅಭಿವೃದ್ಧಿಗೆ ಶ್ರಮಿಸಸೊಣಾ

ಯಾವುದೇ ಕಾರಣಕ್ಕೂ ತರಬೇತಿಗೆ ಗೈರು ಆಗದೆ ಭಾಗವಹಿಸೊಣಾ. ಈ ವಿಷಯವನ್ನು ಇತರೆ ಗ್ರಾಮ ಪಂಚಾಯತಿ ಸದಸ್ಯರಿಗೆ ತಿಳಿಸಿ ತರಬೇತಿಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ. ಪಂಚಾಯತ್ ರಾಜ್ ಬಲಗೊಳಿಸೊಣಾ ಅಭಿವೃದ್ಧಿಯತ್ತಾ ಸಾಗೊಣಾ .
– ರೇಖಾಲೋಕೆಶ್ ಕಿಚುಡಿ.
ರಾಜ್ಯಾಸಹಕಾರ್ಯದರ್ಶಿ
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಶ್ವೇತ ಬಸವರಾಜ್ ಅಧ್ಯಕ್ಷರು ಹೊನ್ನಾಳಿ ತಾಲೂಕು.

ವರದಿ. ರೇಖಾ, ಆರ್, ಲಿಂಗಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend