ಕ್ಷೇತ್ರದ ಜನರಿಗೆ ಉಸಿರಿಗೆ ಉಸಿರಾಗಿ ನಿಂತ ಜನನಾಯಕ…!!!

Listen to this article

ನಮ್ಮ ಕರುನಾಡಲ್ಲಿ  ಜನರು ತಮ್ಮ ಜನಸೇವಕರನ್ನು ಐದು ವರುಷಕ್ಕೆ ಒಂದು ಬಾರೀ ಆಯ್ಕೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಆಯ್ಕೆಯನ್ನು ಮಾಡುತ್ತಾರೆ ಅಂದರೆ ಆಯ್ಕೆಯಾದ ಜನಪ್ರತಿನಿದಿ ಮುಂದೆ ನಮ್ಮ ಒಂದು ಕಷ್ಟಕಾಲದಲ್ಲಿ ನಮ್ಮಗಳ ಒಂದು ಸೇವೆಯನ್ನು ಮಾಡುವರೋ ಅಥವಾ ಇಲ್ಲವೋ ಹಾಗೂ ಕ್ಷೇತ್ರದ ಮತದಾರರ ಅಭಿವೃದ್ಧಿಗೆ ಹೇಗೆ ಶ್ರಮಿಸುತ್ತಾರೆ ಎನ್ನುವ ಎಲ್ಲಾ ಆಲೋಚನೆಗಳನ್ನು ಇಟ್ಟುಕೊಂಡು ಆಯ್ಕೆಮಾಡುತ್ತಾರೆ ಅದನ್ನು ಕೆಲವರು ಹುಸಿಗೊಳಿಸುತ್ತಾರೆ ಮತ್ತೆ ಕೆಲವರು ಜನರ ಒಂದು ಊಹೆಗಿಂತ ಹೆಚ್ಚಿನ ರೀತಿಯಲ್ಲಿ ಕಾರ್ಯವನ್ನು ಮಾಡುತ್ತಾರೆ, ಅಂದರೆ ಈಗ ನಾವು ಹೇಳಹೊರಟಿರುವ ಕ್ಷೇತ್ರದ ಯಾವ ರಾಜಕಾರಣಿ ಬಗ್ಗೆ ಅನ್ನುವ ಒಂದು ಅನುಭವ ತಮಗೆ ಬಾಸವಾಗಿರಬಹುದು, ಅನ್ನಿಸುತ್ತೆ ಅಂದರೆ ಹೊನ್ನಳ್ಳಿ ಕ್ಷೇತ್ರದ ಹೆಸರಾಂತ ನಾಯಕ ಶ್ರೀರೇಣುಕಾಚಾರ್ಯ ರ ಬಗ್ಗೆ ನೇರ ನಡೆ ನುಡಿಗಳಿಗೆ ಹೆಸರುವಾಸಿ ಆಗೆಯೇ ಇದ್ದದ್ದನ್ನು ಇದ್ದ ಹಾಗೆ ಮಾತನಾಡುವ ಜನನಾಯಕ ಅನ್ನಿಸಿಕೋಂಡಿರುವ ಇವರು.ಅಂದು ಆ ರೀತಿ ವರ್ತಿಸಿದ್ದ ಅದೇ ರಾಜಕಾರಣಿ ಇಂದು ಇಡೀ ದೇಶದ ಜನಪ್ರತಿನಿಧಿಗಳು ನೋಡಿ ಕಲಿಯಬೇಕಾದ ರೀತಿಯಲ್ಲಿ ಅವಿರತವಾಗಿ ಜನರಿಗಾಗಿ ಶ್ರಮಿಸುತ್ತಿದ್ದಾರೆ. ಹೊನ್ನಾಳಿ-ನ್ಯಾಮತಿ ಕ್ಷೇತ್ರದ ಶಾಸಕ ಎಂ.ಪಿ ರೇಣುಕಾಚಾರ್ಯ ಕೋವಿಡ್-19 ಸೋಂಕಿಗೆ ಎಲ್ಲರೂ ಸೋತು ಶರಣಾಗುತ್ತಿರುವ ಈ ವಿಷಮ ಸಮಯದಲ್ಲಿ ನಿಜಕ್ಕೂ ತನ್ನ ಪ್ರಾಣವನ್ನೂ ಪಣಕ್ಕಿಟ್ಟು ಜನಸೇವೆಯಲ್ಲಿ ತೊಡಗಿದ್ದಾರೆ. ಕರೋನ ಪಾಸಿಟಿವ್ ಇರುವ ವ್ಯಕ್ತಿಯನ್ನು ಸ್ವತಃ ಕುಟುಂಬದವರೇ ದೂರ ಇಡುತ್ತಿರುವ ಎಷ್ಟೋ ವರದಿಗಳನ್ನು ನೋಡಿದ್ದೇವೆ. ಈ ಮನುಷ್ಯ ಮಾತ್ರ ತನ್ನ ಮತಕ್ಷೇತ್ರದ ತುಂಬಾ ಹಗಲು ರಾತ್ರಿ ನೋಡದೆ ಕರೊನಾ ಸೋಂಕಿತರ ಸಹಾಯಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ಕಳೆದ ವರ್ಷದ ಕರಾಳ ಅವಧಿಯಲ್ಲೂ ಪ್ರತಿ ಊರಿನ ಜನರಿಗೆ ಆಹಾರ, ಔಷಧಿ ಸೇರಿದಂತೆ ಅಗತ್ಯ ಸಾಮಗ್ರಿ ನೀಡುವುದರ ಜೊತೆಗೆ ಹಣಕಾಸು ನೆರವನ್ನೂ ನೀಡಿದ್ದರು.

ಈ ಸಲವಂತೂ ಕರೋನ ಗ್ರಾಮೀಣ ಪ್ರದೇಶದಲ್ಲಿ ರಣಕೇಕೆ ಹಾಕಿಬಿಟ್ಟಿದೆ. ಸಾವೆಂಬುದು ಸಾಮಾನ್ಯ ಪ್ರಕ್ರಿಯೆ ಎಂಬಂತೆ ಲೆಕ್ಕ ಮೀರಿ ಪ್ರಾಣಹಾನಿಯಾಗುತ್ತಿವೆ. ಈ ಸಂದರ್ಭದಲ್ಲಿ ಒಬ್ಬ ಶಾಸಕ ಏನೆಲ್ಲಾ ಮಾಡಲು ಸಾಧ್ಯ ಎಂಬುದನ್ನ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ.

ಪ್ರಾರಂಭದಲ್ಲಿ ಇವರ ಕೆಲಸ ಪ್ರಚಾರ ತಂತ್ರ ಅನ್ನುವ ಹೀಯಾಳಿಕೆಯನ್ನೂ ಅನೇಕರು ಮಾಡಿದ್ದಿದೆ. ಚುನಾವಣೆಯ ಸಂದರ್ಭ ಮಾತ್ರ ಕೋಟಿಗಟ್ಟಲೆ ಸುರಿಯುವ ರಾಜಕಾರಣಿಗಳು, ಯಾರೋ ಕೊಟ್ಟ ಹಣ ಇನ್ನಾರಿಗೋ ತಲುಪಿಸಿ ತಮ್ಮ ಕೊಡುಗೆ ಎಂಬಂತೆ ಬಿಂಬಿಸುವ ಸುದ್ದಿವಾಹಿನಿಗಳು ಮತ್ತು ಅದರಲ್ಲಿ ಅರಚಾಡೊ ನೌಕರಸ್ಥರ ನಡುವೆ ಎಂ.ಪಿ ರೇಣುಕಾಚಾರ್ಯ ಅಂಥವರು ಅವರ ಕ್ಷೇತ್ರದ ಎಷ್ಟೋ ಜನತೆಗೆ ದೇವರೇ ಆಗಿದ್ದಾರೆಂದರೆ ಕೆಲವರಿಗೆ ಮೈಯುರಿ ಆಗಬಹುದೇನೋ….

ನಮ್ಮ ರಾಜ್ಯದಲ್ಲಿರುವ 224+75 ಶಾಸಕರು, 28+12 ಸಂಸದರಲ್ಲಿ ಯಾವೊಬ್ಬ ಜನಪ್ರತಿನಿಧಿಯೂ ಮಾಡದ ಪರಮಾದ್ಭುತ ಕೆಲಸ ಮಾಡುತ್ತಿದ್ದು, ಅವರ ಶಕ್ತಿ ಇನ್ನೂ ಹೆಚ್ಚಾಗಲಿ. ಉಳಿದ ಶಾಸಕ, ಸಂಸದರಿಗೆ ಇವರನ್ನು ನೋಡಿಯಾದರೂ ಕೊಂಚ ಕಾಳಜಿ ಕ್ಷೇತ್ರಗಳ ಜನತೆ ಬಗ್ಗೆ ಮೂಡಲಿ. ಎಂಬುದೇ ನಮ್ಮ ರಾಜ್ಯದ ಜನತೆಯ ಹಾಗೂ ನಮ್ಮ ಎಚ್ಚರಿಕೆ ಕ್ರಾಂತಿಕಾರಿ ವಾರಪತ್ರಿಕೆಯ ಆಶಯ…..

ವರದಿ. ರೇಖಾ, ಆರ್, ಲಿಂಗಾಪುರ

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend