ಹೂಡೇಂ: ಸಾಧನೆಯ ಕನಸು ನಿರಂತರ ಓದುವಿನಿಂದ ಗುರಿ ಈಡೇರಿಸಿಕೊಳ್ಳಲು ಸಾಧ್ಯ..!!

Listen to this article

ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ

ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿ ಇಂದು ದಿನಾಂಕ 12-02-2021ನೇ ಶುಕ್ರವಾರದಂದು ಗ್ರಾಮ ಪಂಚಾಯಿತಿ ಗ್ರಂಥಾಲಯ ವತಿಯಿಂದ > ಓದುವ ಬೆಳಕು ಮತ್ತು ಮಕ್ಕಳ ಸ್ನೇಹಿ< ಪ್ರತಿ ವಿದ್ಯಾರ್ಥಿ ಸಾಧನೆಯ ದೊಡ್ಡ ಕನಸು
ಮತ್ತು ಗುರಿಯನ್ನು ಹೊಂದಿರಬೇಕು ಇದನ್ನು ಸಾರ್ಥಕಗೊಳಿಸಲು ಸತತ ಪರಿಶ್ರಮ ನಿರಂತರ ಓದು ಮಕ್ಕಳದಾಗಬೇಕು ಮಕ್ಕಳು ಕೇವಲ ಸರಕಾರಿ ಕೆಲಸ,ಪರಿಕ್ಷೆಯ ಅಂಕಗಳಿಗೆ
ಓದಬಾರದು ಜ್ಞಾನ, ಸಂಸ್ಕಾರ, ಸಮಾಜದ ಅರಿವಿಗಾಗಿ ನಮ್ಮನ್ನು ನಾವು ತಿಳಿದುಕೊಳ್ಳಲು ಓದಬೇಕು. ಓದುವ ಬೆಳಕು ಮತ್ತು ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಪ್ರಾರ್ಥನೆ ಮಾಡಿದರು. ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು. ಗೋವಿಂದಪ್ಪ ಸರ್ ಸ್ವಾಗತ ಮಾಡಿದರು. ಗ್ರಾಮ ಪಂಚಾಯತಿ ಸದಸ್ಯರಾದ ಅಜ್ಜಣ್ಣ ಇವರು ಗ್ರಂಥಾಲಯದಲ್ಲಿ ಪುಸ್ತಕಗಳು ಮತ್ತು ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಲು ಮಕ್ಕಳಿಗೆ ತಿಳಿಸಿದರು.ಆರೋಗ್ಯ ಇಲಾಖೆಯ ಪ್ರೇಮ ಸಿಸ್ಟರ್ ಇವರುರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ದ ಬಗ್ಗೆ ಮತ್ತು ರೋಗನಿರೋಧಕ ಪ್ರಾಮುಖ್ಯತೆಯನ್ನು ಕುರಿತು ತಿಳಿಸಿದರು. ಗೋವಿಂದಪ್ಪ ಸರ್ ಇವರು ಬಾಲ್ಯವಿವಾಹವನ್ನು ಕುರಿತು ಹಾಗೂ ಸ.ಹಿ.ಪ್ರಾ .ಶಾಲೆಯ ಮುಖ್ಯ ಶಿಕ್ಷಕರಾದ ಸೋಮಶೇಖರಪ್ಪ ಇವರು ಶಿಕ್ಷಣ ವಂಚಿತ ಮಕ್ಕಳ ಬಗ್ಗೆ ಮಾತನಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಾಂತೇಶ ಸ್ವಾಮಿ, ಕಾರ್ಯದರ್ಶಿ ಚಂದ್ರಪ್ಪ , ಬಿಲ್ ಕಲೆಕ್ಟರ್ ತಿಪ್ಪೇರುದ್ರಪ್ಪ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರು ತುಡುಮ ಗುರುರಾಜ್ ಹಾಜರಿದ್ದರು. ಮತ್ತು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ವಿ ಆರ್ ಡಬ್ಲ್ಯೂ ಸಲ್ಮಾ ಹಾಗೂ ಎಲ್ಲಾ ಶಾಲಾ ಮುಖ್ಯಗುರುಗಳು ಸಹಶಿಕ್ಷಕರು ಪ್ರೀತಿಯ ಮಕ್ಕಳು, ಊರಿನ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು . ಅಧ್ಯಕ್ಷರು ಕರಿಬಸಮ್ಮ ದುರುಗಪ್ಪ ಉಪಾಧ್ಯಕ್ಷರು ರಘು , ಸರ್ವ ಸದಸ್ಯರು, ಎಸ್ಡಿಎಂಸಿ ಅಧ್ಯಕ್ಷರು ಚೀನಯ್ಯ, ಅಭಿವೃದ್ಧಿ ಅಧಿಕಾರಿಗಳು ಮಂಹಾತೇಶ್, ಕಾರ್ಯದರ್ಶಿಗಳು, ಗ್ರಂಥಪಾಲಕರು ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದರು. ಮಚ್ಚೇಂದ್ರಪ್ಪ ಶಿಕ್ಷಕರು ವಂದನಾರ್ಪಣೆ ಮಾಡಿದರು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend