ವಿದ್ಯಾರ್ಥಿ ಸಂಘಟನೆಯಾದ ಎಸ್.ಎಫ್.ಐ ವತಿಯಿಂದ ಬಸ್ ಸ್ಟಾಪ್ ಮುತ್ತಿಗೆ…!!!

Listen to this article

ವಿದ್ಯಾರ್ಥಿ ಸಂಘಟನೆಯಾದ ಎಸ್.ಎಫ್.ಐ ವತಿಯಿಂದ ಬಸ್ ಸ್ಟಾಪ್ ಮುತ್ತಿಗೆ…….

ಹರಪನಹಳ್ಳಿ :-ಬಸ್ ಸೌಲಭ್ಯ ಕಲ್ಪಿಸಿ ಕೊಡುವ ಬಗ್ಗೆ 12 ಬಾರಿ ಮನವಿ ಕೊಟ್ಟರು ನಿರ್ಲಕ್ಯ ತೋರುತ್ತಿದ್ದಾರೆ. ಅದರಿಂದ ನಾವು ಬಸ್ ಸ್ಟಾಪ್ ಮುತ್ತಿಗೆ ಹಾಕಿದ್ದೇವೇ ಸರಿಯಾದ ಸಮಯಕ್ಕೆ ಬಸ್​ಗಳನ್ನು ಬಿಡುವಂತೆ ಬಸ್ ನಿಲ್ದಾಣದಲ್ಲಿ ಬಸ್​ಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಪಟ್ಟಣದ ವರವಲಯದ ಬಸ್ ಡಿಪೋ ಹಿಂಭಾಗದಲ್ಲಿ ಇರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಸತಿ ನಿಲಯಗ ಮತ್ತು ದೇವರಾಜ್ ಅರಸು ವಸತಿ ನಿಲಯಗಳಿಂದ ವಿದ್ಯಾಭ್ಯಾಸ ಮಾಡುತ್ತಿರುವ ಕಾಲೇಜ್ ಗಳು 4 ರಿಂದ 5 KM ದೂರವಿದ್ದು ವಿದ್ಯಾರ್ಥಿಗಳು ದಿನನಿತ್ಯ ನಡೆದು ಕೊಂಡು ಹೋಗಿ ನಡೆದು ಕೊಂಡು ಬರುವ ಪರಸ್ಥಿತಿ ನಿರ್ಮಾಣ ವಾಗಿದೆ,

ವಿದ್ಯಾರ್ಥಿ ಮುಖಂಡ ವೆಂಕಟೇಶ್ ಮಾತನಾಡಿ ಬಸ್ ಸೌಲಭ್ಯ ಕಲ್ಪಿಸಿ ಕೊಡುವ ಬಗ್ಗೆ 12 ಬಾರಿ ಮನವಿ ಕೊಟ್ಟರು ನಿರ್ಲಕ್ಯ ತೋರುತ್ತಿದ್ದಾರೆ ಅದರಿಂದ ನಾವು ಬಸ್ ಸ್ಟಾಪ್ ಮುತ್ತಿಗೆ ಹಾಕಿದ್ದೇವೆ ಎಂದು, ಬಸ್ ಸೌಲಭ್ಯ ಇಲ್ಲದಿರುವ ಕಾರಣದಿಂದ ವಿದ್ಯಾರ್ಥಿಗಳು ನಡೆದು ಕೊಂಡು ಹೋಗುವಷ್ಟರಲ್ಲಿ ತರಗತಿಗಳು ಪ್ರಾರಂಭವಾಗಿರುತ್ತದೆ ಅದರಿಂದ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ತರಗತಿಗೆ ಹೋಗಲು ಸಮಸ್ಯೆ ಆಗುತ್ತಿದೆ ಎಂದರು.

ಸಾರಿಗೆ ವ್ಯವಸ್ಥಾಪಕರು ಸ್ಥಳಕ್ಕೆ ದಾವಿಸಿ ಮುಂದಿನ ದಿನಗಳಲ್ಲಿ ಈ ರೀತಿ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಹೇಳಿ ಭರವಸೆ ನೀಡಿ ಸ್ಥಳದಲ್ಲೇ ಬಸ್ ವ್ಯವಸ್ಥೆ ಕಲ್ಪಿಸಿ ಕೊಟ್ಟರು.

ವಿದ್ಯಾರ್ಥಿ ಮುಖಂಡರಾದ ಪ್ರಸನ್ನ, ಸಂಜು, ಬಸವರಾಜ್, ಚೇತನ್, ಕಿರಣ್ ನಾಯ್ಕ್ , ರಾಘವೇಂದ್ರ ,ಚೇತನ್ , ಸುದೀಪ್, ಅರುಣ್ ಕುಮಾರ್,
ದ್ರಾವಿಡ, ಪ್ರವೀಣ್ ಕುಮಾರ್, ಪ್ರಭು, ರವಿಚೌಹಾಣ್, ಇನ್ನಿತರರು ಇದ್ದರು.

ವರದಿ.ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend