ದಲಿತ ಯುವಕರ ಹರಿಪುರ ಬೀಚಿ ಅಭಿಮಾನಿ ಬಳಗಕ್ಕೆ ಆಯ್ಕೆ…!!!

Listen to this article

ದಲಿತ ಯುವಕರ ಹರಿಪುರ ಬೀಚಿ ಅಭಿಮಾನಿ ಬಳಗಕ್ಕೆ ಆಯ್ಕೆ…!!!!!!

ಹರಪನಹಳ್ಳಿ:- ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕಣವಿಹಳ್ಳಿ ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ದಲಿತ ಯುವಕರ ಹರಿಪುರ ಬೀಚಿ ಅಭಿಮಾನಿ ಬಳಗ(ರಿ)ಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ನಿವೃತ್ತ ಪೋಲೀಸ್ ಪಕ್ಕೀರಪ್ಪ ಮೈದೂರು, ಅಧ್ಯಕ್ಷರಾಗಿ ಹಲುವಾಗಲು ಎನ್.ಇಂದ್ರಪ್ಪ, ಉಪಾಧ್ಯಕ್ಷರಾಗಿ ಪ್ರಕಾಶ್ ಬಿದ್ದಾಡಿ ಹರಪನಹಳ್ಳಿ,
ಕೊಂಗನಹೊಸೂರು ಜಗದೀಶ್, ಬಾಗಳಿ ಪರುಶುರಾಮ, ಕಡಬಗೆರೆ ಬಸವರಾಜ್, ಶಿವರಾಜ್ ಹಿರೇಮೇಗಳಗೆರೆ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ನಿಂಗಪ್ಪ ಕಣವಿಹಳ್ಳಿ, ಸಂಘಟನಾ ಕಾರ್ಯದರ್ಶಿಯಾಗಿ ಅಡವಿಹಳ್ಳಿ ರಾಜಪ್ಪ , ಕಾನೂನು ಸಲಹೆಗಾರರಾಗಿ ಪೃಥ್ವೇಶ್ವರ ಪ್ರಭು ನಿರ್ದೇಶಕರಾಗಿ ದೊಡ್ಡಮನೆ ವಸಂತ ಕೂಲಹಳ್ಳಿ, ಕೋಟೆಪ್ಪ ಶೃಂಗಾರತೋಟ, ಪರುಶುರಾಮ ಚಿಗಟೇರಿ, ಪೂಜಾರ್ ಮಂಜುನಾಥ ಹಣಸಿಹಳ್ಳಿ, ಮಾರ್ಗದರ್ಶಕರಾಗಿ ತೆಲಿಗಿ ಹನುಂಮತಪ್ಪ,ನಂದಿಬೇವೂರು ಚಾರೆಪ್ಪ, ಭಂಗಿ ರಮೇಶ್, ಭಂಗಿ ಚಂದ್ರಪ್ಪ,ಮೈದೂರು ಗೋಣ್ಯೆಪ್ಪ,ಮುತ್ತಿಗಿ ನಾಗಪ್ಪ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಮಾರ್ಗದರ್ಶಕರಾದ ಕಣವಿಹಳ್ಳಿ ಮಂಜುನಾಥ ಮಾತನಾಡಿ, ದಲಿತ ವಿದ್ಯಾರ್ಥಿಗಳ ಬೀಚಿ ಅಭಿಮಾನಿ ಬಳಗವನ್ನು 2018ರಲ್ಲಿ ಹೆಸರು ನೋಂದಾಯಿಸಿ ಸಂಘವನ್ನು ಅಸ್ಥಿತ್ವ ತರಲಾಗಿತ್ತು. ಈ ಸಂಘದಡಿ ಅನೇಕ ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಲಾಗಿತ್ತು. ಆದರೆ ಸಂಘವನ್ನು ನೋಂದಾಯಿಸಿರುವುದನ್ನು ಹೊರತುಪಡಿಸಿದರೆ ಉಳಿದಂತೆ ಸಂಘಕ್ಕೆ ಸಂಬಂಧಿಸಿದಂತೆ ಬೈಲಾಕ್ಕೆ ಅನುಗುಣವಾಗಿ ಯಾವುದೇ ಕೆಲಸ ಮಾಡಿಲ್ಲ. ಸಂಘವನ್ನು ಪ್ರತಿವರ್ಷ ಅಡಿಟ್ ಮಾಡಿಲ್ಲ, ಸಂಘದ ನಡಾವಳಿಗಳನ್ನು ನಮೂದಿಸಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಸಂಘದ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಖಾತೆಯನ್ಮು ತೆರೆದಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಸಂಘವನ್ನು ನವೀಕರಣಗೊಳಿಸದಿರುವ ಹಿನ್ನೆಲೆಯಲ್ಲಿ ಸಂಘ ಅಸ್ತಿತ್ವ ಕಳೆದುಕೊಂಡಿದೆ. ಹೀಗಾಗಿ ಹೊಸ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ತಿಳಿಸಿದರು.

ನನ್ನ ಕನಸಿನ ಕೂಸಾಗಿರುವ ದಲಿತ ವಿದ್ಯಾರ್ಥಿಗಳ ಬೀಚಿ ಅಭಿಮಾನಿ ಬಳಗವನ್ನು ಮುನ್ನೆಡೆಸಿಕೊಂಡು ಹೋಗುತ್ತಿರುವ ಪದಾಧಿಕಾರಿಗಳ ನಿಷ್ಕ್ರಿಯತೆಯ ಪರಿಣಾಮ ದಲಿತ ವಿದ್ಯಾರ್ಥಿಗಳ ಬೀಚಿ ಅಭಿಮಾನಿ ಬಳಗ ಅನೂರ್ಜಿತಗೊಂಡಿದೆ. ಹೀಗಾಗಿ ಆ ಸಂಘದ ಹೆಸರು ಮತ್ತು ನನ್ನ ಹೆಸರು ಹೇಳಿಕೊಂಡು ಯಾರಾದರೂ ಬಂದಲ್ಲಿ ನನ್ನ ಗಮನಕ್ಕೆ ತರುವಂತೆ ಕೋರುತ್ತೇನೆ. ಈ ಸಂಘ ಈಗಾಗಲೇ ಅಸ್ಥಿತ್ವದಲ್ಲಿ ಇಲ್ಲದಿರುವುದರಿಂದ ಈ ಹೆಸರಿನ ಸಂಘಕ್ಕೆ ತಾಲೂಕಿನ ಅಧಿಕಾರಿಗಳು, ರಾಜಕೀಯ ನಾಯಕರು, ಸಮಾಜದ ಗಣ್ಯ ವ್ಯಕ್ತಿಗಳು, ಸಾರ್ವಜನಿಕರು ಯಾರು ಸಹಕಾರ ನೀಡಬಾರದು ಎಂದು ಮನವಿ ಮಾಡಿಕೊಂಡರು.

ಇನ್ಮುಂದೆ ನಮ್ಮ ಸಂಘದ ಚಟುವಟಿಕೆಗಳು ದಲಿತ ಯುವಕರ ಹರಿಪುರ ಬೀಚಿ ಅಭಿಮಾನಿ ಬಳಗ(ರಿ) ಹೆಸರಿನಡಿ ನಡೆಯುತ್ತೇವೆ ಎಂದು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ. ನಮ್ಮ ತಾಲೂಕಿನವರೇ ಆದ ಹಾಸ್ಯ ಬ್ರಹ್ಮ ಬೀಚಿ ಅವರ ಚಿಂತನೆಗಳನ್ನು ಜನರಿಗೆ ತಿಳಿಸುವುರ ಜೊತೆಗೆ ಸಾಂಸ್ಕೃತಿಕವಾಗಿ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಹುಣಸಿಹಳ್ಳಿ ಕೋಟ್ರಪ್ಪ ಮಾತನಾಡಿ, ಶೋಷಿತ ಸಮುದಾಯಗಳಿಗೆ ಕಣವಿಹಳ್ಳಿ ಮಂಜುನಾಥ ಅವರು ರಕ್ಷಾಕವಚವಾಗಿದ್ದಾರೆ. ಅವರ ನೇತೃತ್ವದಲ್ಲಿ ನೂತನ ಸಂಘ ಉದಯವಾಗುತ್ತಿರುವ ತೀರ್ಮಾನ ಒಳ್ಳೆಯದು. ಹೊಸ ಸಂಘಟನೆ, ಹೊಸ ಪದಾಧಿಕಾರಿಗಳಿಗೆ ಅವಕಾಶ ನೀಡಿರುವುದು ಹೆಮ್ಮೆ ಕೆಲಸವಾಗಿದೆ ಎಂದರು..

ವರದಿ. ಪ್ರತಾಪ್. ಸಿ. ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend