ಕೊಟ್ಟೂರು ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭೇಟಿ, ಪರಿಶೀಲನೆ…!!!

Listen to this article

ಕೊಟ್ಟೂರು ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭೇಟಿ, ಪರಿಶೀಲನೆ
ವಿಜಯನಗರ: ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಕೊಟ್ಟೂರು ತಾಲೂಕು ಕಚೇರಿಗೆ ಮಂಗಳವಾರದಂದು ಭೇಟಿ ನೀಡಿದರು.
ನಂತರ ಜಿಲ್ಲಾಧಿಕಾರಿಗಳು ಕೊಟ್ಟೂರು ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಕಂದಾಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಭೆ ನಡೆಸಿ ಚುನಾವಣಾ ವಿಷಯದ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ಮಾಡಿದರು.


ಪಟ್ಟಣದಲ್ಲಿ ಶೇ.76ರಷ್ಟು ಪರಿಷ್ಕರಣೆ ಪರಿಶೀಲನಾ ಕಾರ್ಯ ಮುಗಿದಿದ್ದು, ಇನ್ನೂ ಶೇ.24ರಷ್ಟು ಬಾಕಿ ಇದೆ. ಸಾಕಷ್ಟು ಜನರು ಮನೆ ಬಿಟ್ಟು ಹೋಗಿದ್ದು, ಮಾಹಿತಿ ಲಭ್ಯವಾಗದೇ ಇರುವ ಕಾರಣ ತೆಗೆದುಹಾಕಲು ತೊಂದರೆಯಾಗಿರುವ ಬಗ್ಗೆ ಮಾಹಿತಿಯನ್ನು ತಹಶೀಲ್ದಾರರು ತಿಳಿಸಲಾಗಿ, ಅಕ್ಕ-ಪಕ್ಕದ ಮನೆಯವರಿಂದ, ಅವರ ಸಂಬಂಧಿಕರಿಂದ ಮನೆ ಖಾಲಿ ಮಾಡಿ ಬೇರೆ ಊರುಗಳಿಗೆ ವಲಸೆ ಹೋಗಿರುವವರ ಮಾಹಿತಿ ಪಡೆದು ಆಧಾರ್‍ಕಾರ್ಡ್ ಮಾಹಿತಿ ಪಡೆದು, ದಾಖಲೆಗಳನ್ನು ಕಡ್ಡಾಯವಾಗಿ ಸಂಗ್ರಹಿಸಿ ಯಾವುದೇ ಲೋಪವಾಗದಂತೆ ತುರ್ತಾಗಿ ವಲಸೆಹೋದ ಮತದಾರರನ್ನು ಪಟ್ಟಿಯನ್ನು ತೆಗೆದು ಹಾಕಲು ಹಾಗೂ ಬೇರೆ ವಾರ್ಡ್‍ಗಳಿಂದ ಬಂದವರ ಬಗ್ಗೆ ಪರಿಶೀಲಿಸಿ ಯಾವುದೇ ಕಾರಣಕ್ಕೂ ಎರಡು ಕಡೆ ಇರದಂತೆ ಕ್ರಮವಹಿಸುವಂತೆ ಬಿಎಲ್‍ಒ ಹಾಗೂ ಬಿಎಲ್‍ಒ ಮೇಲ್ವಿಚಾರಕರಿಗೆ ಸೂಚನೆಯನ್ನು ನೀಡಿದರು.


ಬಿಎಲ್‍ಒ ಜೊತೆ ಗ್ರಾಮ ಲೆಕ್ಕಿಗರನ್ನು ನಿಯೋಜಿಸಿ, ಕಡ್ಡಾಯವಾಗಿ ಆಧಾರ್ ಕಾರ್ಡ್ ಪಡೆದು ಲಿಂಕ್ ಮಾಡಿ ಪಾರದರ್ಶಕವಾಗಿ ಮತದಾರರ ಪಟ್ಟಿಯನ್ನು ಸಿದ್ದಪಡಿಸುವಂತೆ ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಸೇರ್ಪಡೆಗೆ ನಮೂನೆ-6 ಸ್ವೀಕೃತವಾಗಿರುವ ಮತಗಟ್ಟೆಗಳ ಬಗ್ಗೆ ಇನ್ನೊಮ್ಮೆ ಪರಿಶೀಲಿಸುವಂತೆ ನಿರ್ದೇಶನ ನೀಡಿದರು.
ನಂತರ ಪ್ರತಿಯೊಬ್ಬ ಸಿಬ್ಬಂದಿಯವರನ್ನು ಸಂಕಲನವಾರು ಬಾಕಿ ಇರುವ ಕಡತಗಳ ಮಾಹಿತಿಯನ್ನು ಪರಿಶೀಲಿಸುತ್ತಾ, ಬಾಕಿಗೆ ಸಕಾರಣವನ್ನು ಪಡೆಯುತ್ತಾ, ಕಾರಣವಿಲ್ಲದೇ ಕಡತಗಳನ್ನು ಬಾಕಿ ಇಟ್ಟುಕೊಳ್ಳದಂತೆ, ಕಾಲಮಿತಿಗೊಳಪಟ್ಟು ವಿಲೇಗೊಳಿಸಲು ಸೂಚನೆಯನ್ನು ನೀಡಿದರು.


ನಂತರ ಮಾದ್ಯಮದವರ ಜೊತೆ ಸಂವಾದ ನಡೆಸಿ ಮಾಹಿತಿ ಪಡೆದರು. ಶ್ರೀ ಕ್ಷೇತ್ರಕ್ಕೆ ಮಂಜೂರಾಗಿರುವ ಯಾತ್ರಿ ನಿವಾಸವು ಅರ್ಧಕ್ಕೆ ನಿಂತಿರುತ್ತದೆ. ದೇವಸ್ಥಾನದಲ್ಲಿ ಮೂಲಭೂತ ಸೌಕರ್ಯ ಇರುವುದಿಲ್ಲ. ಪಟ್ಟಣದಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದು, 24*7 ಯೋಜನೆ ಅಡಿಯಲ್ಲಿನ ಕಾಮಗಾರಿ ಸುಮಾರು 3 ವರ್ಷವಾದರೂ ಪೂರ್ಣಗೊಂಡಿರುವುದಿಲ್ಲ. ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ವೈದ್ಯಾಧಿಕಾರಿಗಳ ಕೊರತೆ ಇದೆ. ಪಟ್ಟಣದಲ್ಲಿ ಹಾಗೂ ಪಟ್ಟಣ ಸಂಪರ್ಕಿಸುವ ರಸ್ತೆಗಳು ದುರಸ್ಥಿಯಾಗದೇ ಧೂಳಿನಿಂದ ಕೂಡಿವೆ. ಕೊಟ್ಟೂರು ತಾಲೂಕು ಆಗಿ 4 ವರ್ಷಗಳಾಗಿದ್ದರೂ ಎಲ್ಲಾ ಇಲಾಖೆಗಳು ಪ್ರಾರಂಭವಾಗಿರುವುದಿಲ್ಲವೆಂದು ಕುಂದು ಕೊರತೆ ಆಲಿಸಿದ ಅವರು, ಮಾಹಿತಿಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವುದು ಎಂದು ಅವರು ತಿಳಿಸಿದರು.
ಈ ಸಮಯದಲ್ಲಿ ಆಗಮಿಸಿ ಸಾರ್ವಜನಿಕರು ಸಲ್ಲಿಸಿದ ಅಹವಾಲುಗಳನ್ನು ಸ್ವೀಕರಿಸಿ ಪರಿಶೀಲಿಸಿದರು. ನಂತರ ಸಂಗಮೇಶ್ವರ ಗ್ರಾಮದಲ್ಲಿ ಡಿಎಂಎಫ್ ಅಡಿಯಲ್ಲಿ ನಿರ್ಮಿಸಲಿರುವ ಸ್ಮಾರ್ಟ್‍ಕ್ಲಾಸ್ ಕಟ್ಟಡದ ಸ್ಥಳ ಪರಿಶೀಲನೆ ಮಾಡಿದರು. ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟ ವ್ಯವಸ್ಥೆ ವೀಕ್ಷಿಸಿದರು. ನಂತರ ಕೊಟ್ಟೂರಿಗೆ ಆಗಮಿಸಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಸ್ವಚ್ಛತೆ ಹಾಗೂ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿ ವೈದ್ಯರಿಗೆ ಹಾಗೂ ಸಿಬ್ಬಂದಿಯವರಿಗೆ ಸಾರ್ವಜನಿಕರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.

 

ವರದಿ.ನಾಗಲಿಂಗಾಚಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend