ಗುಡೆಕೋಟೆ ಗ್ರಾಮ ಪಂಚಾಯಿತಿಗೆ ಕೂಡ್ಲಿಗಿ ತಾಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿ ಭೇಟಿ…!!!

Listen to this article

ಗುಡೆಕೋಟೆ ಗ್ರಾಮ ಪಂಚಾಯಿತಿಗೆ ಕೂಡ್ಲಿಗಿ ತಾಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿ ಭೇಟಿ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಗ್ರಾಮ ಪಂಚಾಯಿತಿಗೆ ಕೂಡ್ಲಿಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್ ಭೇಟಿ ಮಾಡಿ ಗ್ರಾಮ ಪಂಚಾಯಿತಿ ಕುಂದು ಕೊರತೆ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರ ಉಪಾಧ್ಯಕ್ಷರು ಸದಸ್ಯರುಗಳ ಮತ್ತು ಪಂಚಾಯಿತಿ ಸಿಬ್ಬಂದಿಗಳ ಸಮಸ್ಯೆಗಳನ್ನು ಚರ್ಚಿಸಲಾಯಿತು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಮುರಳಿ ರಾಜ್ ಕೆ ರವರು ಗ್ರಾಮ ಪಂಚಾಯಿತಿಗೆ ಆಗಮಿಸಿದ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್ ರವರನ್ನು ಉದ್ದೇಶಿಸಿ. ಮೊದಲನೇದಾಗಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಮತ್ತು ಸದಸ್ಯರುಗಳ ಗೌರವ ಧನ ನೀಡಬೇಕು ನಮ್ಮ ತಾಲೂಕಿನಲ್ಲಿ ಬರುವ 25 ಗ್ರಾಮ ಪಂಚಾಯಿತಿ PDO ಗಳಲ್ಲಿ ಕೆಲವು ವಿಡಿಯೋಗಳು ಸದಸ್ಯರುಗಳನ್ನು ಗೌರವ ಪೂರ್ವಕವಾಗಿ ನೋಡುವುದಿಲ್ಲ ಅಂತ PDO ಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ನರೇಗಾ ಯೋಜನೆ ಅಡಿಯಲ್ಲಿ ಮೇಟಿಗಳು ಕಂಪ್ಯೂಟರ್ ಆಪರೇಟರ್ಗಳು ನಗದು ಹಣವನ್ನು ತೆಗೆದುಕೊಂಡು ಕೆಲವು ಮೇಟಿಗಳಿಗೆ ಮಾತ್ರ ಕೆಲಸ ಮಾಡಲು ಅನುಕೂಲ ಮಾಡುತ್ತಾರೆ ಸದಸ್ಯರುಗಳನ್ನು ಯಾವುದೇ ರೀತಿಯಿಂದ ಕೆಲಸ ಕಾಮಗಾರಿಗಳ ಬಗ್ಗೆ ಯಾವುದೇ ರೀತಿ ಮಾಹಿತಿಗಳು ನೀಡುವುದಿಲ್ಲ ಅಂಥವರನ್ನು ಕೂಡಲೇ ವಜಾ ಗೊಳಿಸಬೇಕು ಬೇರೆಯವರನ್ನು ಆಯೋಜಿಸಬೇಕು 15 ನೇ ಹಣಕಾಸಿನ ಕ್ರಿಯಾಯೋಜನೆಗಳು ಮಾಡಲು ಕೆಲವು ಪಂಚಾಯತಿಗಳ PDO ಗಳು ತಡ ಮಾಡುತ್ತಿರುವುದು ಬೆಳಕಿಗೆ ಬಂದಿರುತ್ತದೆ ಅಂತಹ PDO ಗಳ ವಿರುದ್ಧ ರಾಮಾಜರಿಗೆಸಬೇಕು ಸಾರ್ವಜನಿಕರ ಪ್ರತಿನಿಧಿಗಳಿಗೆ ಯಾವುದೇ ರೀತಿಯಿಂದ ಪಂಚಾಯಿತಿ ಸಿಬ್ಬಂದಿಗಳು ಸದಸ್ಯರುಗಳ ಮಾತು ಕೇಳದಿದ್ದಲ್ಲಿ ಅಂತವರ ವಿರುದ್ಧ ಕ್ರಮ ಜರುಗಿಸಬೇಕು ಗ್ರಾಮ ಪಂಚಾಯಿತಿ ಸದಸ್ಯರುಗಳು ಆಯ್ಕೆಯಾಗಿ 2 ವರ್ಷ ಆದರೂ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ಆಗುತ್ತಿರುವುದಿಲ್ಲ ಆದ್ದರಿಂದ ಕೆಲವು ಅಭಿವೃದ್ಧಿ ಅಧಿಕಾರಿಗಳು ಅವರ ಮನಸ್ಸಿಗೆ ಬಂದಾಗ ನರೇಗಾ ಯೋಜನೆ ಅಡಿಯಲ್ಲಿ ಸುಮಾರು ಕೂಲಿ ಕಾರ್ಮಿಕರನ್ನು ಮೇಟಿಗಳನ್ನು ತೆಗೆದುಕೊಂಡು ಡಾಟಾ ಎಂಟ್ರಿ ಆಪರೇಟರ್ಗಳ ಮೂಲಕ ಹಣವನ್ನು ತೆಗೆದುಕೊಂಡು ಎನ್ಎಂಆರ್‌ಗಳನ್ನು . ನಿಲ್ಲಿಸಬೇಕು BFT ಹಾಗೂ ಟೆಕ್ನಿಕಲ್ ಇಂಜಿನಿಯರ್ ಅವರ ವಿರುದ್ಧ ಜಾಗೃತಿ ಮೂಡಿಸಬೇಕು ಲಕ್ಷ ಕೋಟಿಗಳು ಅನುದಾನಗಳು ಹೇಳಲು ಮಾತ್ರ ಆದರೆ ಪಂಚಾಯಿತಿಗಳಲ್ಲಿ ಕೆಲವು ಅಧಿಕಾರಿಗಳು ಹಣವನ್ನು ಸಾಕಷ್ಟು ದುರುಪಯೋಗ ಮಾಡುತ್ತಿದ್ದಾರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ನಮ್ಮ ಹಲವಾರು ಕುಂದು ಕೊರತೆಗಳ ಕುರಿತು ರಾಜ್ಯದ ಅಧ್ಯಕ್ಷರಾದ ಶ್ರೀ ಸತೀಶ್ ರವರು ಹಾಗೂ ವಿಜಯನಗರ ಜಿಲ್ಲಾಧ್ಯಕ್ಷರಾದ ಸಣ್ಣಕ್ಕಿ ಲಕ್ಷ್ಮಣ್ ರವರ ಸೂಚನೆ ಮೇರೆಗೆ ಗ್ರಾಮ ಪಂಚಾಯಿತಿ ಕುಂದು ಕೊರತೆಗಳ ಕುರಿತು ರಾಜ್ಯದೊಡೆ ದಿನಾಂಕ 12-12-2022 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೆಂಗಳೂರು ಚಾಲೋ ಕಾರ್ಯಕ್ರಮಕ್ಕೆ ಸಿದ್ಧತೆಗಳು ಮಾಡಿಕೊಂಡು ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳ ಬೇಡಿಕೆಗಳನ್ನು ಸರ್ಕಾರಕ್ಕೆ ನೀಡಲಿದ್ದೇವೆ. ಎಂದು ಮಾತನಾಡಿದರು ಈ ವೇಳೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಕೆಂಚಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಲಲಿತಮ್ಮ ಗೋವಿಂದಪ್ಪ ಉಪಾಧ್ಯಕ್ಷರಾದ y. ಬೋರಯ್ಯ ಸದಸ್ಯರುಗಳಾದ ಎನ್ ಕೃಷ್ಣ. ಕರ್ನಾಟಕ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ತಾಲೂಕು ಅಧ್ಯಕ್ಷ ಮುರಳಿ ರಾಜ್ ಕೆ ಹಾಗೂ ನರೇಗಾ ಯೋಜನೆಯ ಸಿಬ್ಬಂದಿ ಮಹೇಶ್ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಈ ಸಮಯದಲ್ಲಿ ಇದ್ದರು..

ವರದಿ.ಸಿ ಅರುಣ್ ಕುಮಾರ್ ಜುಮ್ಮೊಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend