ಅಂಗದಾನ ಶ್ರೇಷ್ಠ ದಾನ: ಡಾ. ಎo ಜಿ ಶಿವರಾಮು…!!!

Listen to this article

ಅಂಗದಾನ ಶ್ರೇಷ್ಠ ದಾನ: ಡಾ. ಎo ಜಿ ಶಿವರಾಮು

ಅಂಗದಾನ ಶ್ರೇಷ್ಠವಾದದ್ದು ಮತ್ತು ಇದರ ಬಗ್ಗೆ ಅರೋಗ್ಯ ಕಾರ್ಯಕರ್ತರಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಬಹಳ ಅಗತ್ಯ ಎಂದು ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎo ಜಿ ಶಿವರಾಮು ಅವರು‌ ತಿಳಿಸಿದರು.

ಅವರು ಇಂದು ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ನ್ಯಾಯವೈದ್ಯಶಾಸ್ತ್ರ ವಿಭಾಗ, ವಿದ್ಯಾರ್ಥಿ ಬೆಂಬಲಿತ ಕೋಶ ಹಾಗೂ ಮೋಹನ್ ಫೌಂಡೇಶನ್ ಇವರುಗಳ ಸಂಯುಕ್ತಾಶ್ರಯದಲ್ಲಿ ಅಂಗಗಳ ದಾನ ಮತ್ತು ಅಂಗಗಳ ಕಸಿ ವಿಷಯಕ್ಕೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಕಾರ್ಯಾಗಾರ ಮತ್ತು ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಂಗಾಂಗ ದಾನದಿಂದ ಬೇರೆಯವರ ಜೀವ ಉಳಿಸಿ ಅವರ ಬಾಳಿಗೆ ಬೆಳಕಾಗಬಹುದು ಎಂದು ಹೇಳಿದರು


ಅಂಗಾಂಗ ಕಸಿ ತಜ್ಞರಾದ ಡಾ ಸುನಿಲ್ ಸೆನ್ವಿ ಅವರು ಅಂಗಾಂಗ ಕಸಿ ಒಂದು ಸವಾಲು. ವ್ಯಕ್ತಿ ಮೃತಪಟ್ಟ ಮೇಲೆ ಗರ್ಭಕೋಶ ಲಿವರ್, ಪಿತ್ತಕೋಶ, ಮೂತ್ರಕೋಶ, ಹಾಗೂ ಕಣ್ಣುಗಳನ್ನು ದಾನ ಮಾಡಿದರೆ ಈ ಅಂಗಾಂಗಗಳನ್ನು ಬೇರೆಯವರಿಗೆ ಜೋಡಿಸಿ ಅವರ ಆರೋಗ್ಯ ಉತ್ತಮ ಪಡಿಸಬಹುದು ಎಂದು ಹೇಳಿದರು.

ಮೋಹನ ಫೌಂಡೇಶನ್ ನ ರಜನಿ ಅವರು ಮಾತನಾಡುತ್ತ ಮೋಹನ್ ಫೌಂಡೇಶನ್ ಅಂಗಾಂಗ ಕಸಿಯ ಅಗತ್ಯ ಇರುವವರಿಗೆ ದಾನಿಗಳ ಪರಿಚಯ ಮಾಡಲಾಗುವುದು ಎಂದು ಹೇಳಿದರು.

ಡಾ. ಚಿನ್ಮಯ ಸ್ವಾಗತಸಿದರು, ಕಾರ್ಯಕ್ರಮದಲ್ಲಿ
ನ್ಯಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕುಮಾರ್. ಡಾ. ವಿಜಯಕುಮಾರ್, ಡಾ ಉತ್ತಮ್, ನಾರಾಯಣ ಗೌಡ ಸುಮಾರು 400ಕ್ಕೂ ಹೆಚ್ಚು ವೈದ್ಯಕೀಯ, ನರ್ಸಿಂಗ್ ವಿದ್ಯಾರ್ಥಿಗಳು ಬೋಧಕ , ಬೋದಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು…

ವರದಿ. ಸುರೇಶ್. ಮಂಡ್ಯ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend