ಅಕ್ಟೊಬರ್ 10.ಮತ್ತು 11ರಂದು ಬಂಜಾರ ಬುಡಕಟ್ಟು ಸಮುದಾಯಗಳ ಉತ್ಸವ…!!!

Listen to this article

ಅಕ್ಟೊಬರ್ 10.ಮತ್ತು 11ರಂದು ಬಂಜಾರ ಬುಡಕಟ್ಟು ಸಮುದಾಯಗಳ ಉತ್ಸವ…….

ಹರಪನಹಳ್ಳಿ.ಅಕ್ಟೊಬರ್ 10.11ರಂದು . ಬಂಜಾರ ಬುಡಕಟ್ಟು ಸಮುದಾಯಗಳ ಉತ್ಸವವನ್ನು ಚಿತ್ರದುರ್ಗದ ದಿ.ನಿಜಲಿಂಗಪ್ಪ ಸ್ಮಾರಕ ಭವನದಲ್ಲಿ ಅ.10 ಮತ್ತು 11ರಂದು ಎರಡು ದಿನಗಳ ಕಾಲ ಆಚರಿಸಲಾಗುವುದು ಎಂದು ಚಿತ್ರದುರ್ಗ ಬಂಜಾರ ಗುರುಪೀಠ ಶ್ರೀ ಸೇವಾಲಾಲ್ ಸರ್ದಾರ್ ಸ್ವಾಮಿಜಿ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲೋಕ ಕಲ್ಯಾಣಾರ್ಥಕವಾಗಿ ಶ್ರೀ ಸೇವಾಲಾಲ್ ಬೋಗ್ ಸಾಮೂಹಿಕ ಪೂಜೆ ಪ್ರಾರ್ಥನೆ ನೇರವೇರಲಿದೆ.

ಕುಗ್ರಾಮ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವಂತೆ ಈಗಾಗಲೇ ಒತ್ತಾಯಿಸಲಾಗಿದ್ದು.

ಇದರ ಭಾಗವಾಗಿ ಕಂದಾಯ ಸಚಿವ ಆರ್.ಅಶೋಕ ರವರು ಕಂದಾಯ ಗ್ರಾಮ ಮಾಡುವ ಬಗ್ಗೆ ಚಾಲನೆ ನೀಡಿದ್ದು, ಇನ್ನಷ್ಟು ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ಈ ಉತ್ಸವದಲ್ಲಿ ಆಗ್ರಹಿಸಲಾಗುವುದು ಎಂದು ಹೇಳಿದರು.

ಬಂಜಾರ ಬುಡಕಟ್ಟು ಸಂಸ್ಕøತಿ ಉತ್ಸವವು ಸಂಸ್ಕøತಿ, ಕಲೆ, ನೃತ್ಯ ಇವುಗಳ ಉಳಿವಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಲಂಬಾಣಿಗರು ವಿಜಯನಗರ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರು ಕಡು ಬಡವರಾಗಿದ್ದು ಹೊಟ್ಟೆಪಾಡಿಗಾಗಿ ಕೂಲಿ ಅರಸಿ ವಲಸೆ ಹೋಗುತ್ತಿದ್ದಾರೆ ಈ ಉತ್ಸವದಲ್ಲಿ ಬಂಜಾರ ಸಮುದಾಯದ ಸಮಸ್ಯೆಗಳನ್ನು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಆದ್ದರಿಂದ ಹರಪನಹಳ್ಳಿ ತಾಲೂಕು ಸೇರಿದಂತೆ ವಿಜಯನಗರ ಜಿಲ್ಲೆಯಲ್ಲಿರುವ ಬಂಜಾರ(ಲಂಬಾಣಿ) ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮಾಹಿತಿ ನೀಡಿದರು.
ಬಾಕ್ಸ್:ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಗಾಗಿ ಒತ್ತಾಯಿಸಿ ವಾಲ್ಮೀಕಿ ಶ್ರೀಗಳು ಅಹೋರಾತ್ರಿಧರಣಿ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಸರ್ವ ಪಕ್ಷಗಳ ಸಭೆಯಲ್ಲಿ ಸರ್ಕಾರ ಶ್ರೀಗಳ ಬೇಡಿಕೆ ಈಡೇರಿಸದಿದ್ದಲ್ಲಿ ಹಿಂದುಳಿದ ವರ್ಗದ ಎಲ್ಲಾ ಮಠಾಧೀಶರು ಸೇರಿ ಧರಣಿಯನ್ನು ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಸೇವಾಲಾಲ್ ಸರ್ದಾರ್ ಸ್ವಾಮೀಜಿ, ಚಿತ್ರದುರ್ಗ ಬಂಜಾರ ಗುರುಪೀಠ,
ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ಮುಖಂಡರಾದ ಈಶ್ವರನಾಯ್ಕ, ಧರ್ಮ ಪ್ರಚಾರಕ ನಾಗುನಾಯ್ಕ, ಕರ್ನಾಟಕ ಬಂಜಾರ ರಕ್ಷಣಾ ವೇಧಿಕೆ ರಾಜ್ಯಾಧ್ಯಕ್ಷ ಶಿವಣ್ಣನಾಯ್ಕ, ಪ್ರಸನ್ನ, ಸೇರಿದಂತೆ ಇತರರು ಇದ್ದರು…

ವರದಿ. ಪ್ರತಾಪ್. ಸಿ. ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend