ಶಿಘ್ರದಲ್ಲಿ ಮೀಸಲಾತಿ ಹೆಚ್ಚಳ ಮಾಡಲು ಸರ್ಕಾರ ಬದ್ದವಾಗಿದೆ ಎಂದ ಬಿ.ಶ್ರೀರಾಮುಲು…!!!

Listen to this article

ಶಿಘ್ರದಲ್ಲಿ ಮೀಸಲಾತಿ ಹೆಚ್ಚಳ ಮಾಡಲು ಸರ್ಕಾರ ಬದ್ದವಾಗಿದೆ ಎಂದ ಬಿ.ಶ್ರೀರಾಮುಲು………

ಹರಪನಹಳ್ಳಿ:-ಬಹುದಿನಗಳ ಕಾಲ ಮೀಸಲಾತಿ ಹೆಚ್ಚಳ ವಿಚಾರವಾಗಿ ಎದ್ದಿರುವ ವಿವಾದವನ್ನು ಪರಿಹರಿಸುವ ಮೂಲಕ ಶಿಘ್ರದಲ್ಲಿ ಮೀಸಲಾತಿ ಹೆಚ್ಚಳ ಮಾಡಲು ಸರ್ಕಾರ ಬದ್ದವಾಗಿದೆ ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ಹೇಳಿದರು.

ತಾಲೂಕಿನ ಹಲುವಾಗಲು ಗ್ರಾಮದಲ್ಲಿ ನೂತನ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡಿದರು.
ಬರುವ ಅಕ್ಟೋಬರ್ 8ರಂದು ಸರ್ವ ಪಕ್ಷಗಳ ಸಭೆ ಕರೆದು ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ ಶೇ 17 ರಷ್ಟು ಹಾಗೂ ವಾಲ್ಮೀಕಿನಾಯಕ ಜನಾಂಗಕ್ಕೆ 7.5 ರಷ್ಟು ಮೀಸಲಾತಿ ಹೆಚ್ಚಳ ಮಾಡಲು ಸರ್ಕಾರ ಸನ್ನದ್ದವಾಗಿದೆ ಎಂದರು.

ರಾಜ್ಯದಲ್ಲಿ 9 ಲಕ್ಷ ಕಿಲೋ ಮೀಟರ ಸಂಚರಿಸಿದ ಬಸ್ಸುಗಳ ಬದಲಾವಣೆ ಮಾಡುವ ಗುರಿ ಇದೆ. ಕಲ್ಯಾಣ ಕರ್ನಾಟಕಕ್ಕೆ 650 ಬಸ್ಸುಗಳು ಸೇರಿದಂತೆ ಒಟ್ಟು ರಾಜ್ಯದಲ್ಲಿ 3500 ಹೊಸ ಬಸ್ಸುಗಳ ಖರೀದಿ ಮಾಡಲಾಗುವುದು. ಹರಪನಹಳ್ಳಿ ಸಾರಿಗೆ ಘಟಕಕ್ಕೆ 15-20 ಹೊಸ ಬಸ್ಸುಗಳನ್ನು ಶೀಘ್ರ ನೀಡಲಾಗುವುದು, ಸದಸ್ಯ 6 ಬಸ್ಸುಗಳನ್ನು ನೀಡುತ್ತೇನೆ ಎಂದ ಅವರು ತಿಳಿಸಿದರು.
ಸಾರಿಗೆ ಸಿಬ್ಬಂದಿಗೆ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ವೇತನ ಪಾವತಿಗೆ ಕ್ರಮ ಕೈಗೊಳ್ಳುವುದಾಗಿ ಹಾಗೂ ಸಾರಿಗೆ ನೌಕರರಿಗೆ ವೇತನ ಪರಿಷ್ಕರಣೆ ಸಹ ಮಾಡಲಾಗುವುದು ಎಂದು ಅವರು ತಿಳಿಸಿದರು.

ಹರಪನಹಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಾಲ್ಮೀಕಿ ಭವನ ನಿಮಾರ್ಣಕ್ಕೆ 10 ಕೋಟಿ ರು. ಮಂಜೂರು ಮಾಡುವುದಾಗಿ ಹೇಳಿದ ಅವರು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಶಾಸಕ ಜಿ.ಕರುಣಾಕರರೆಡ್ಡಿಯವರನ್ನು 2023 ರ ಚುನಾವಣೆಯಲ್ಲಿ ಪುನರ್ ಆಯ್ಕೆ ಮಾಡಿ ಎಂದು ಜನರಲ್ಲಿ ಕೋರಿದರು.

ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ ಹರಪನಹಳ್ಳಿ ಕ್ಷೇತ್ರಕ್ಕೆ ರಸ್ತೆ, ಕುಡಿಯುವ ನೀರು, ಹಾಸ್ಚೆಲ್ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಕಳೆದ ನಾಲ್ಕು ವರೆ ವರ್ಷದಲ್ಲಿ 1 ಸಾವಿರ ಕೋಟಿ ರು. ಅನುದಾನ ತಂದಿದ್ದೆನೆ ಕೆರೆಗಳಿಗೆ ನದಿಯಿಂದ ನೀರು ತುಂಬಿಸುವ ಯೋಜನೆ ಬಹುತೇಕ ಪೂರ್ಣಗೊಂಡಿದ್ದು, ಡಿಸೆಂಬರ ತಿಂಗಳಲ್ಲಿ ಮುಖ್ಯಮಂತ್ರಿಯವರಿಂದ ಉದ್ಘಾಟನೆ ಮಾಡಿಸುವೆ ಹಲುವಾಗಲು ಗ್ರಾಮಕ್ಕೆ 22 ಕೋಟಿ ರು.ಅನುದಾನ ಬಂದಿದೆ, ಮಲ್ಲಜ್ಜನ ಕಟ್ಟೆ ಬಳಿ 2 ಕೋಟಿ ರು. ರಸ್ತೆ ನಿರ್ಮಾಣಕ್ಕೆ ಮಂಜೂರಾಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೆಶಕ ಆರುಂಡಿ ನಾಗರಾಜ, ಹಲುವಾಗಲು ಗ್ರಾ.ಪಂ ಅಧ್ಯಕ್ಷ ರುದ್ರಪ್ಪ, ಪುರಸಭಾ ಅಧ್ಯಕ್ಷ ಅಶೋಕ, ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ, ತಹಶೀಲ್ದಾರ ಡಾ.ಶಿವಕುಮಾರ ಬಿರಾದಾರ, ಬಿಜೆಪಿ ಎಸ್,ಟಿ ಘಟಕದ ಅಧ್ಯಕ್ಷ ತಳವಾರ ಮನೋಜ, ಮುಖಂಡರಾದ ಕಲ್ಲೇರ ಬಸವರಾಜ, ವಿಷ್ಣು ರೆಡ್ಡಿ, ಲೋಕೇಶ, ಸಾರಿಗೆ ಸಂಸ್ಥೆಯ ಹೊಸಪೇಟೆ ವಿಭಾಗದ ಡಿ.ಕೊಟ್ರಪ್ಪ, ಮಹಾದೇವಪ್ಪ, ಕೆ.ಎಂ.ಶಿವಕುಮಾರ, ಹರಪನಹಳ್ಳಿ ಡಿಪೋ ವ್ಯವಸ್ಥಾಪಕ ವಿನಾಯಕ ಸಾಲಿಮಠ, ಜಿ.ಪಂ ಮಾಜಿ ಸದಸ್ಯೆ ಸುವರ್ಣ ನಾಗರಾಜ ಇತರರು ಹಾಜರಿದ್ದರು…

ವರದಿ.ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend