ಕೆಸರು ಗದ್ದೆಯಾದ ರಸ್ತೆ; ಜನರು ನಾಟಿ ಮಾಡಲೆಂದು ಕಾಯುತ್ತಿರಬಹುದಾ ಅಧಿಕಾರಿಗಳು?

Listen to this article

ಕೆಸರು ಗದ್ದೆಯಾದ ರಸ್ತೆ; ಜನರು ನಾಟಿ ಮಾಡಲೆಂದು ಕಾಯುತ್ತಿರಬಹುದಾ ಅಧಿಕಾರಿಗಳು?

ಹರಪನಹಳ್ಳಿ : ಉಲಿಕಟ್ಟಿ ಗ್ರಾಮದಲ್ಲಿ ರಸ್ತೆ

ರಾಜ್ಯಾದ್ಯಂತ ವಿಪರೀತ ಮಳೆ ಸುರಿಯುತ್ತಿರುವ ಬೆನ್ನಲ್ಲೇ ರೈತರ ಬೆಳೆಗಳು ಜಲವೃತಗೂಂಡು ಬೆಳೆನಾಶ ಆಗಿ ಬಹಳಷ್ಟು ನಷ್ಟಾಗಿದ್ದು ಇದು ಒಂದೆಡೆಯಾದರೆ ಕೆಲವೆಡೆ ರಸ್ತೆಗಳು ಕೆಸರೂ ಗೆದ್ದೆಯಾಗಿ ಪಾದಾಚಾರಗಳಿಗೆ ಒಡಾಡಲು ಸಮರ್ಪಕ ರಸ್ತೆಯಿಲ್ಲದೆ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.

ಈ ರಸ್ತೆಯ ವಿಷಯ ಇಂದು ನಿನ್ನೆಯದಲ್ಲ ಸುಮಾರು 25 ವರ್ಷಗಳಿಂದಲೂ ಮಳೆಗಾಲದಲ್ಲಿ ಇದೆ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ರಸ್ತೆಯ ದುರಸ್ಥಿಗೆ ಮಾತ್ರ ಕ್ರಮಕೈಗೂಂಡಿಲ್ಲ.

ರಸ್ತೆ ಕೆಸರು ಗದ್ದೆ ರೀತಿಯಲ್ಲಿ ಪರಿವರ್ತನೆಗೊಂಡಿರುವ ಕಾರಣ ಈ ರಸ್ತೆಯಲ್ಲಿ ಓಡಾಡುವ ಜನರು ಬಟ್ಟೆ ಮೇಲೆತ್ತಿಕೊಂಡು ಕೆಸರು ಗದ್ದೆಯಲ್ಲೇ ಓಡಾಡುವ ರೀತಿಯಲ್ಲಿ ಓಡಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಈ ರಸ್ತೆಯಲ್ಲಿ ವಾಹನ ಚಲಿಸುವ ಚಾಲಕನಂತೂ ಚಾಣಾಕ್ಷ ಚಾಲಕನಗಿರಬೇಕು ಇಲ್ಲದಿದ್ದರೆ ಈ ರಸ್ತೆ ರಾಕ್ಷಸನಂತೆ ಬಾಯಿ ತೆಗೆದು ವಾಹನ ಮತ್ತು ಚಾಲಕ ಇಬ್ಬರನ್ನು ತನ್ನತ್ತ ಸೆಳೆದುಕೊಂಡು ಬಿಡುತ್ತದೆ.

ಪ್ರತಿ ವರ್ಷ ಕಾಟಾಚಾರಕ್ಕೆಂಬುವಂತೆ ನಾಲ್ಕಾರು ಟ್ರಿಪ್ ಮಣ್ಣು ಹಾಕಿಸಿ ಕೈತೂಳೆದುಕೂಳ್ಳುತ್ತಿದ ಪಂಚಾಯತಿ ಈ ಬಾರಿ ಕೂಡ ಅದೆ ಮೂಹರಂ ಮಣ್ಣು ಹಾಕಿ ಕೈತೊಳೆದುಕೊಳ್ಳುವ ಕೆಲಸ ಮಾಡಿದ್ದಾರೆ. ಆದರೆ ಇವರು ಮಾಡಿದ ಈ ಕೆಲಸದಿಂದ ರಸ್ತೆ ಮತ್ತಷ್ಟು ಹಾಳಾಗಿದೆ.

ಈ ರಸ್ತೆಯ ಬದಿಯಲ್ಲಿ ಚರಂಡಿಗಳಿಲ್ಲದ ಕಾರಣ. ಮಳೆಗಾಲ ಮುಗಿಯುವಷ್ಟರಲ್ಲಿ ಕೊಳಚೆ ನೀರು ಸಹ ರಸ್ತೆಗೆ ಬಂದು ನಿಂತು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಎಲ್ಲಾ ಸರಿಯಾಗಿದ್ದರು ಸಹ ಜನರು ರೋಗಗಳಿಗೆ ತುತ್ತಾಗುತ್ತಾರೆ ಅಂದಮೇಲೆ ಈ ರಸ್ತೆಯಲ್ಲಿ ಓಡಾಡುವ ಜನರು ಎಷ್ಟರ ಮಟ್ಟಿಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಹೇಳಿ.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಮಳೆಗಾಲದಲ್ಲಿ ಬಂದು ಬರೀ ಮಣ್ಣನ್ನು ಹಾಕಿಸುವುದು ಮಾತ್ರವಲ್ಲದೆ ಸರಿಯಾದ ರೀತಿಯಲ್ಲಿ ಚರಂಡಿ ಮತ್ತು ರಸ್ತೆ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು…

ವರದಿ. ಪ್ರತಾಪ್. ಸಿ. ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend