ದಿ. ಶಿವಪುತ್ರ ಚೆನ್ನಪ್ಪ ಚಲವಾದಿ (೭೪) ಅವರು ನಿನ್ನೆ ಬೆಳಿಗ್ಗೆ ಅನಾರೋಗ್ಯದಿಂದ ವಿಧಿವಶರಾದರೆಂದು ತಿಳಿಸಲು ವಿಷಾದಿಸುತ್ತೇನೆ…!!!

Listen to this article

ದಿ. ಶಿವಪುತ್ರ ಚೆನ್ನಪ್ಪ ಚಲವಾದಿ (೭೪) ಅವರು ನಿನ್ನೆ ಬೆಳಿಗ್ಗೆ ಅನಾರೋಗ್ಯದಿಂದ ವಿಧಿವಶರಾದರೆಂದು ತಿಳಿಸಲು ವಿಷಾದಿಸುತ್ತೇನೆ.

ಅವರು ಜಲ ಸಂಪನ್ಮೂಲ ಇಲಾಖೆಯಲ್ಲಿ ರಜಿಸ್ಟ್ರಾರ್ ಹುದ್ದೆಯಲ್ಲಿ ಕೆಲಸ ನಿವ೯ಹಿಸಿ ನಿವೃತ್ತರಾಗಿದ್ದರು.
ಪತ್ನಿ ಶಶಿಕಲಾ, ಪುತ್ರರಾದ ಪ್ರವೀಣ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಳ್ಳಾರಿ, ನವೀನ, ತಾಂತ್ರಿಕ ಶಿಕ್ಷಣ ಇಲಾಖೆ, ಸಚಿನ, ಪೊಲೀಸ್ ಇನ್ಸಪೆಕ್ಟರ್ ಗೆಸ್ಕಾಂ ವಿಜಿಲನ್ಸ, ಕಲಬುಗಿ೯ಹಾಗೂ ಇಬ್ಬರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

 

ಆಲಮಟ್ಟಿಯಲ್ಲಿ‌ ರಜಿಸ್ಟ್ರಾರ್ ಸಾಹೇಬರು ಎಂದೇ ಹೆಸರುವಾಸಿಯಾಗಿದ್ದ ಶರಣ ಶ್ರೀ ಶಿವಪುತ್ರ ಚಲವಾದಿ ಸಾಹೇಬರು ಕೆಬಿಜೆಎನ್ ಎಲ್ ಎಂ ಡಿ ಕಚೇರಿಯ ರಿಜಿಸ್ಟ್ರಾರ್ ಆಗಿ ಸುಮಾರು 200 ಜನ ಬೆರಳಚ್ಚುಗಾರರ ನೇಮಕಾತಿ, ಹಲವಾರು ಎಂಜಿನಿಯರ್ ನೇಮಕಾತಿ ಸೇರಿ ಹಲವರಿಗೆ ನೌಕರಿ ಭಾಗ್ಯ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

ತಮ್ಮಲ್ಲಿ ವರ್ಗಾವಣೆ ಬಯಸಿ ಬಂದವರಿಗೆ ನಿರಾಶೆ ಮಾಡದೇ, ಇಡೀ ನಿಗಮದಲ್ಲಿ ಸುಮಾರು 500 ಕ್ಕೂ ಅಧಿಕ ವಿವಿಧ ಹುದ್ದೆಗಳ ನೌಕರರಿಗೆ ಅವರು ಬಯಸಿದ ಸ್ಥಳಕ್ಕೆ ವರ್ಗಾವಣೆ ಮಾಡಿದ ಪುಣ್ಯಾತ್ಮರು ಇವರು.
ಇನ್ನೂ ಅವರಲ್ಲಿ ಸಮಸ್ಯೆ ಹೇಳಿಕೊಂಡು ಬಂದವರಿಗೆ ಎಂದೂ ನಿರಾಶೆ ಮಾಡದೇ, ದೊಡ್ಡ ಅಧಿಕಾರಿಯಾಗಿದ್ದರೂ ಎಲ್ಲರಿಗೂ ಚಿಕ್ಕ, ದೊಡ್ಡವರು ಎನ್ನದೇ, ಎಲ್ಲರಿಗೂ ಗೌರವ ನೀಡುವ ವ್ಯಕ್ತಿತ್ವ ಅವರದು..

ಬಹುಮುಖ ಪ್ರತಿಭೆ ;
ಬಹುಮುಖ ಪ್ರತಿಭೆಯಾಗಿದ್ದ ಅವರು ಆಲಮಟ್ಟಿಯಲ್ಲಿ ಸಾಂಸ್ಕೃತಿಕ ವಾತಾವರಣ ಸೃಷ್ಟಿಸಿದರು.

ಸ್ವಪ್ತ ಸ್ವರ ಬಳಗ ಎಂಬ ಸಂಗೀತ ಬಳಗ ಸ್ಥಾಪಿಸಿ, ಅದರ ಮೂಲಕ ನಾಡಿನ ಹಲವಾರು ಪ್ರಮುಖ ಕಲಾವಿದರನ್ನು ಆಲಮಟ್ಟಿ ಗೆ ಕರೆಯಿಸಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಅದರಲ್ಲಿ ಗಂಗೂಬಾಯಿ ಹಾನಗಲ್, ಪಂಡಿತ ಮಾಧವ ಗುಡಿ, ಪುತ್ತೂರು ನರಸಿಂಹಾಚಾರ್ಯ , ಸೇರಿ… ಇನ್ನೂ ಹಲವು ಕಲಾವಿದರನ್ನು ಕರೆಯಿಸಿದರು.

ಅವರು ತಿಂಗಳಿಗೊಮ್ಮೆ ಸಂಗೀತ ಸಂಜೆ ಏರ್ಪಡಿಸಿ ಸಂಗೀತದ ವಾತಾವರಣ ನಿರ್ಮಿಸಿದ ಕೀರ್ತಿ ಇವರದ್ದು.

ಸುಮಾರು 30 ಕ್ಕೂ ಅಧಿಕ ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದ ಕೀರ್ತಿ‌ ಇವರದ್ದು.
ಪುರಾಣ;ಪ್ರತಿ ಶ್ರಾವಣ ಮಾಸದಲ್ಲಿ ಶಿವಕುಮಾರಸ್ವಾಮಿ ಚರಿತೆ ಓದುತ್ತಿದ್ದ ಇವರು, ಕೊನೆಯ ದಿನ ಆಲಮಟ್ಟಿಯ ಪ್ರತಿಯೊಬ್ಬರಿಗೂ ಊಟ ಮಾಡಿಸುತ್ತಿದ್ದರು.
ಬೆಳ್ಳಿ ತುಲಾಭಾರ;
ಇನ್ನೂ ಬೀದರಿನ ಶಿವಕುಮಾರಸ್ವಾಮಿ ಪ್ರಭಾವಕ್ಕೆ ಒಳಗಾಗಿದ್ದ ಇವರು, ಅವರ ಪ್ರವಚನವನ್ನು ಆಲಮಟ್ಟಿಯಲ್ಲಿ 15 ದಿನಗಳ ಕಾಲ ಏರ್ಪಡಿಸಿದ್ದರು.
ನನಗೆ ಇನ್ನೂ ನೆನಪಿದೆ, ಆ ಪ್ರವಚನ ಕೇಳಲು ಆಲಮಟ್ಟಿಯ ಸುತ್ತಮುತ್ತಲಿನ‌ ಹತ್ತಾರು ಗ್ರಾಮಗಳ ನೂರಾರು ಜನರು ಆಗಮಿಸುತ್ತಿದ್ದರು.
ನಿತ್ಯವೂ ಪ್ರವಚನ ಶೋತೃಗಳಿಗೆ ದಾಸೋಹ ವ್ಯವಸ್ಥೆ ಮಾಡಿದ್ದು ಇವರೇ..ಇನ್ನೂ ಶಿವಕುಮಾರ ಶ್ರೀಗಳ ಬೆಳ್ಳಿ ತುಲಾಭಾರ ಮಾಡಿದ್ದು ಇವರೇ…

ಸುಮಾರು 90 ಕೆಜಿ ಬೆಳ್ಳಿಯ ತುಲಾಭಾರ ಆಗಿತ್ತು..
ನಾಣ್ಯದ ತುಲಾಭಾರ;
ಇನ್ನೂ ಗಾನಗಂಧರ್ವ , ಅಂಧರ ಬೆಳಕಿನ ಕಿರಣ ಪುಟ್ಟರಾಜ ಗವಾಯಿಗಳ ನಾಣ್ಯದ ತುಲಾಭಾರ ಸೇವೆಗೈದವರು ಇವರು.ಇವರ ವರ್ಗಾವಣೆಯ ನಂತರ ಆಲಮಟ್ಟಿಯಲ್ಲಿ ಸಾಂಸ್ಕೃತಿಕ ವಾತಾವರಣ ಕ್ಷೀಣಿಸಿತು…
ಈಗಂತೂ ಆ ವಾತಾವರಣ, ಸಂಗೀತ ಸುಧೆ, … ಇಲ್ಲವೇ ಇಲ್ಲ.ಅವರ ದಾನ ಗುಣ, ಮುಖ್ಯವಾಗಿ ದಾಸೋಹ ಗುಣ ವರ್ಣಾತೀತ.ಆಲಮಟ್ಟಿಯಲ್ಲಿ ಅವರ ಬಹುತೇಕ ಒಂದು ದಶಕಗಳ ಕಾಲ ಸೃಷ್ಟಿಸಿದ್ದ ಪ್ರಭಾವಲಯ ನಮ್ಮಂತಹ ಸಹಸ್ರಾರು ಜನರ ಮೇಲಿದೆ..
ಇನ್ನೂ ಇವರ ಪುಣ್ಯ ಕಾರ್ಯದ ಫಲವಾಗಿ ಇವರ ಮಕ್ಕಳೆಲ್ಲರೂ ದೊಡ್ಡ ಅಧಿಕಾರಿ ಹುದ್ದೆಯಲ್ಲಿದ್ದಾರೆ.ಅವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದು, ತಂದೆಯಂತೆ ಪರೋಪಕಾರ ಗುಣ ಅಳವಡಿಸಿ, ಸಹಾಯ ಬಯಸಿ ಬಂದ ಎಲ್ಲರಿಗೂ ನೆರವಾಗುತ್ತಿದ್ದಾರೆ..
ನಮ್ಮ ತಂದೆಯವರು, ಇವರು ಒಳ್ಳೆಯ ಗೆಳೆತನ ಹೊಂದಿದ್ದರು…
ವಿಚಿತ್ರ ಎಂದರೇ ನಮ್ಮ ತಂದೆ ನಿಧನರಾಗಿ ಬರೋಬರ್ರೀ ಒಂದು ತಿಂಗಳಿಗೆ ಇವರು ಇಹಲೋಕ ತ್ಯಜಿಸಿದ್ದಾರೆ…
ಇಂತಹ ಹಿರಿಯ, ಶರಣ ಜೀವಿಯ ಆತ್ಮಕ್ಕೆ ಶಾಂತಿ ದೊರೆಯಲಿ…
ಇಡೀ ಆಲಮಟ್ಟಿ ನಿಮ್ಮ ಧಾರ್ಮಿಕ , ಪರೋಪಕಾರ ಗುಣವನ್ನು ನೆನೆಸುತ್ತಿದೆ..ಚಂದ್ರಶೇಖರ ಕೋಳೇಕರ.

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend