ಹರ್ ಘರ್ ತಿರಂಗ ಅಭಿಯಾನ : ಡಿ. ಸಿ. ಯಶವಂತ್ ವಿ ಗುರುಕರ್…!!!

Listen to this article

ಹರ್ ಘರ್ ತಿರಂಗ ಅಭಿಯಾನ : ಡಿ. ಸಿ. ಯಶವಂತ್ ವಿ ಗುರುಕರ್.

ಆಜಾದೀ ಕಾ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರವು ” ಹರ್ ಘರ್ ತಿರಂಗಾ ” ಎಂಬ ಘೋಷವಾಕ್ಯದೊಂದಿಗೆ ಆಗಸ್ಟ್ 11ರಿಂದ 17ರ ವರೆಗೆ ದೇಶದ ಪ್ರತಿ ಮನೆ-ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸಿ ದೇಶಭಕ್ತಿ ಬಿಡಿಸಲು ಅಭಿಯಾನ ಹಮ್ಮಿಕೊಂಡಿದ್ದು. ಕಲಬುರ್ಗಿ ಜಿಲ್ಲೆಯ ಪ್ರತಿಯೊಬ್ಬರು ತಮ್ಮ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮನವಿ ಮಾಡಿದ್ದಾರೆ. ಸಾರ್ವಜನಿಕರು ತಮ್ಮ ಮನೆಗಳ ಮೇಲೆ ಸ್ವಂತ ಖರ್ಚಿನಲ್ಲಿ ರಾಷ್ಟ್ರಧ್ವಜ ಕರಿದಿಸಿ ಆಗಸ್ಟ್ 11 ರಿಂದ 17ರವರೆಗೆ ಹಾರಿಸಬೇಕೆಂದು ಅವರು ತಿಳಿಸಿದ್ದಾರೆ. ಈ ಅಭಿಯಾನದಲ್ಲಿ ಜಿಲ್ಲಾ ಪಂಚಾಯತ್. ತಾಲೂಕ ಪಂಚಾಯತ್ ಹಾಗೂ ವಿಶೇಷವಾದ ಗ್ರಾಮ ಪಂಚಾಯತಿಗಳಿಂದ ತಮ್ಮ ಕಾರ್ಯವ್ಯಾಪ್ತಿಯಲ್ಲಿನ ರಾಜ್ಯ ಸರ್ಕಾರದ ಸರ್ಕಾರಿ. ಅರೆ ಸರ್ಕಾರಿ ನಿಗಮ ಮಂಡಳಿಗಳು. ಸಾರ್ವಜನಿಕ ಉದ್ಯಮಿಗಳು. ಸ್ವಸಹಾಯ ಗುಂಪುಗಳು.ನಾಗರಿಕ ಸಂಸ್ಥೆಗಳು. ಸಾರ್ವಜನಿಕರು. ಶಾಲಾ ಕಾಲೇಜು ಮಕ್ಕಳು ಮತ್ತು ಸಿಬ್ಬಂದಿ ಸಹಕರಿಸುವಂತೆ ಕೋರಿದ್ದಾರೆ. ಇನ್ನು ಸ್ಥಳೀಯ ಪಂಚಾಯತ್ ರಾಜ್. ಪೌರ ಸಂಸ್ಥೆ ಗಳು. ಸ್ವಸಹಾಯ ಸಂಘಗಳ ಒಕ್ಕೂಟಗಳು. ಅಂಗನವಾಡಿ ಕೇಂದ್ರಗಳು. ಪ್ರಾಥಮಿಕ ಆರೋಗ್ಯ ಕೇಂದ್ರಗಳು. ಉಪಕೇಂದ್ರ. ಸಹಕಾರ ಸಂಘಗಳು. ಉಪ ಅಂಚೆ ಕಚೇರಿಗಳಲ್ಲಿ ಆಶಾ ಕಾರ್ಯಕರ್ತೆಯರು. ಅಂಗನವಾಡಿ ಕಾರ್ಯಕರ್ತೆಯರು. ಗ್ರಾಮ ರೋಜ್ಗಾರ ಸೇವಕರು. ಶಿಕ್ಷಕರು ಎಲ್ಲರನ್ನೂ ಉತ್ತೇಜಿಸಿ ಸಕ್ರಿಯವಾಗಿ ಬಾಗಿ ಸುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದ್ದಾರೆ. ಸರ್ ಘರ್ ತಿರಂಗಾ ಅಭಿಯಾನದಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ಭಾಗವಹಿಸುವಂತಾಗಲು ಗ್ರಾಮೀಣ ಭಾಗದ ಸಂಸ್ಥೆಗಳು ಪಥಸಂಚಲನ. ವಿಚಾರ ಸಂಕಿರಣ. ಗುಂಪು ಚರ್ಚೆ. ಪೋಸ್ಟರ್ ಗಳ ಮುಖೇನ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಡಿ.ಸಿ. ತಿಳಿಸಿದ್ದಾರೆ..

ವರದಿ.ಬಸಯ್ಯ ಹಿರೇಮಠ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend