ಅಂಬೇಡ್ಕರ್ ಸಿದ್ದಾಂತ ಮುಗಿಸಲು ಕಮ್ಯುನಿಸ್ಟರು ನೇಮಿಸಿದ ಸುಪಾರಿ ಹಂತಕನಿವನು ಆನಂದ್_ತೆಲ್ತುಂಬ್ಡೆ…!!!

Listen to this article

ಅಂಬೇಡ್ಕರ್ ಸಿದ್ದಾಂತ ಮುಗಿಸಲು ಕಮ್ಯುನಿಸ್ಟರು ನೇಮಿಸಿದ ಸುಪಾರಿ ಹಂತಕನಿವನು ಆನಂದ್_ತೆಲ್ತುಂಬ್ಡೆ

ಅಂಬೇಡ್ಕರ್ ವಾದವನ್ನು ಸೋಲಿಸಲು ಬ್ರಾಹ್ಮಣರು ಮಾರ್ಕ್ಸ್ ವಾದವನ್ನು ಮುಂದೆ ಮಾಡುವOತ ಕುತಂತ್ರ ಮಾಡುತ್ತಲೇ ಬಂದಿದ್ದಾರೆ.ಆದರೆ ಜನ ಮೊದಲಿನಂತಲ್ಲ !ಎಚ್ಚರಾಗಿದ್ದಾರೆ.ಅವರು ಎಷ್ಟೇ ಕಮ್ಯುನಿಸಮ್ ಎಬ್ಬಿಸಿ ನಿಲ್ಲಿಸುತ್ತೆನೆOದರೂ ಅದು ಅಸಾಧ್ಯ.ಜನರಿಗೆ ಯಾರೂ ಹೇಳಿ ಕೊಡಬೇಕಾಗಿಲ್ಲ.ತಮ್ಮ ಹಿOದಿದ್ದ ಪರಿಸ್ಥಿತಿಗಳಿOದ ಮೊದಲೆಲ್ಲಿದ್ದೆವು & ಈಗೆಲ್ಲಿದ್ದೇವೆOದು ಅರಿತವರಾಗಿದ್ದಾರೆ.ಅದಕ್ಕಾಗಿ ಯಾಮಾರಿಸಲು ಸಾಧ್ಯಾವಿಲ್ಲ.ಅಷ್ಟಕ್ಕೂ ಅಬ್ಬರದ ಬಾಷಣಗಳನ್ನು ಕೆಳಬಹುದು,ಕರೆದರೆ ಸೇರಬಹುದು,ಅದು ಜ್ಞಾನ ವೃದ್ದಿಗಾಗಿ ಮಾತ್ರ.
ಕೆಲವರು ಏನು ಹೆಳಬಲ್ಲರು ಎಂಬುದಕ್ಕಾಗಿ,ಇನ್ನೂ ಕೆಲವರು ಇನ್ನೊOದಾವುದಕ್ಕೊ ಸೇರಿರುತ್ತಾರೆ ಹೊರತಾಗಿ ಅಂಧಾಭಿಮಾನಿಗಳಾಗಳು ಅಲ್ಲ.ನೆನಪಿರಲಿ ಅಂಬೇಡ್ಕರ್ ವಾದ ಮತ್ತು ಮಾರ್ಕ್ಸ್ ವಾದ ಒಟ್ಟೊಟ್ಟಿಗೆ ಸಾಗಲು ಸಾಧ್ಯವೇ ಇಲ್ಲ.ಈ ನೆಲದಲ್ಲಿ ಕಡೇಪಕ್ಷ ಗೌರವಾನ್ವೀತ ಒಂದು ಸ್ಥಾನವೂ ಕಮ್ಯುನಿಸ್ಟಗೆ ಸಿಗುವುದಿಲ್ಲ.ಏಕೆOದರೆ ಇಲ್ಲಿ ಏನೇ ಇದ್ದರೂ ಅದು ಭೀಮವಾದ ಮತ್ತು ಮನುವಾದದ ಸಂಘರ್ಷ ಮೊದಲಿನಿOದಲೂ ಇದೆ.ಮುಂದೇಯೂ ಇರುತ್ತದೆ.ಅದಕ್ಕಾಗಿ ಇಲ್ಲಿ ಬೇರೆ ಯಾವ ವಾದಕ್ಕೂ ನೆಲೆ ಇಲ್ಲ.ಕಡೆ ಪಕ್ಷ ಸೋಲು-ಗೆಲುವುಗಳ ಕಾದಾಟದಲ್ಲಿ ಕನಿಷ್ಟತಮ ಸ್ಪರ್ಧೆಗೂ ಕಮ್ಯುನಿಸ್ಟರಿಗೆ ಅವಕಾಶವಿರುವುದಿಲ್ಲ ! ಸ್ಪರ್ಧೆಗೆ ಅವಕಾಶ ಪಡೆಯಲು ಅರ್ಹತೆಯೇ ಇಲ್ಲವೆoದಾಗ ಸೋಲು -ಗೆಲುವಿನ ಮಾತೆಲ್ಲಿ ಬಂತು -ಕಮ್ಯುನಿಸ್ಟ್ ಗೆಲುವಿನ ಇಂಥಹ ಲೆಕ್ಕಾಚಾರದ ಮನುಷ್ಯರನ್ನು ಸಮಾಜ ಚಿಂತಕರೆOದು ಕರೆಯುವುದೇ ದೊಡ್ಡ ತಪ್ಪು.
ಇದನ್ನೆಲ್ಲ ಹೇಳಲೇ ಬೇಕಾಗಿದೆ.ನಿನ್ನೆ ಕಾನ್ಸೀರಾಮರದೊOದು ಕಮ್ಯುನಿಸ್ಟ್ ಬಗೆಗಿನ ಹೇಳಿಕೆ ಹಾಕಿದ್ದೆ.ಅದು ಎಷ್ಟು ಸತ್ಯವಾದುದೆOದರೆ ಕಮ್ಯುನಿಸ್ಟರ ಕುತಂತ್ರಗಳನ್ನೆಲ್ಲ ನೋಡುತ್ತಿದ್ದರೆ ಅದು ಅಕ್ಷರಶ ಸತ್ಯ !
ಮನುವಾದಿಗಳ ಒಂದು ತಂತ್ರವೆOದರೆ ಯಾರನ್ನು ಹೊಡೆದು ಮುಗಿಸಬೇಕಾಗಿದೆಯೋ ಅವರಲ್ಲಿOದನೊಬ್ಬನನ್ನೇ ಅವರನ್ನು ಮುಗಿಸಲು ಬಳಸಿಕೊಳ್ಳುವುದು ! ಇದು ಅವರ ದೊಡ್ಡ ತಂತ್ರಗಾರಿಕೆ.
ಅಂಬೇಡ್ಕರರ ಕುಟುOಬದ ಸದಸ್ಯರಾಗಿರುವ ಆನಂದ್ ತೇಲ್ತುOಬಡೆ ಮೂಲಕವೇ ಅಂಬೇಡ್ಕರರ ವಿಚಾರದಾರೆಗಳ ವಿರುದ್ದ ಬರೆಯಿಸಿ ಅಂಬೇಡ್ಕರ್ ಸಿದ್ದಾOತ ಉಪಯೋಗಕ್ಕೆ ಬಾರದು ಎಂಬOತ ವಿಚಾರಗಳನ್ನು ಅಂಬೇಡ್ಕರರನ್ನು ಆರಾಧಿಸುವ ಜನರಲ್ಲಿಯೇ ತುಂಬಿ ಅವರು ಅಂಬೇಡ್ಕರರಿOದ ದೂರ ಸರಿಯುವOತೆ ಮಾಡುವುದಿದೆಯಲ್ಲ ಇದು ಮಹಾನ್ ಘಾತುಕ ಕೆಲಸವಲ್ಲದೆ ಮತ್ತೇನು !? ಆದರೂ ಇದರ ಅರಿವಿಲ್ಲದ ಜನ ತೇಲ್ತುOಬಡೆಯನ್ನು ಅಂಬೇಡ್ಕರ್ ವಾದಿ ಎಂದು ಬರೆದುಕೊಳ್ಳುತ್ತಿರುವುದು ವ್ಯಂಗವಲ್ಲವೇ !?
ತೇಲ್ತುOಬಡೆ ತನ್ನ ಚಿಂತನೆಗಳನ್ನು ಹೀಗೆ ಹರಿಯಬಿಟ್ಟಿದ್ದಾನೆ ; ಅಂಬೇಡ್ಕರ್ ತನ್ನ ತಕ್ಷಣದ ಗುರಿಗಳನ್ನು ಈಡೇರಿಸಿಕೊಳ್ಳಲು ಮಾತ್ರ ಉತ್ಸಾಹ ಹೊOದಿದ್ದರು ಎಂದು ಹೇಳುವ ಮೂಲಕವೇ ಅಂಬೇಡ್ಕರ್ ಎನ್ನುವ ಒಂದು ಶಕ್ತಿಯನ್ನು ಸಂಕುಚಿತ ನೆಲೆಗೆ ತಂದು ನಿಲ್ಲಿಸುತ್ತಾನೆ.
ಇನ್ನು ಮಾರ್ಕ್ಸ್ ನ ಬಗ್ಗೆ ಅದೆಷ್ಟು ಪ್ರೀತಿ !ಪ್ರೀತಿ ಅನ್ನುವುದಕ್ಕಿಂತ ತನ್ನನ್ನು ಎತ್ತಿಹಿಡಿಯುತ್ತಿರುವ ಕಮ್ಯುನಿಸ್ಟ್ ಮಾಲೀಕರ ತೃಪ್ತಿಗಾಗಿ ಹೀಗೆ ನಿಯತ್ತಿನ ಕಾಯಕದಲ್ಲಿ ಅಂದರೆ ; ಭಾರತದ ಶ್ರಮಜೀವಿಗಳು (ದಲಿತರು ) ವರ್ಗ ಸಂಘರ್ಷದ ಮೂಲಕ ರಾಷ್ಟ್ರದ ಅಧಿಕಾರವನ್ನು ಪಡೆದುಕೊಳ್ಳಬೇಕೆನ್ನುವ ಮಾರ್ಕ್ಸ್ ಸಿದ್ದಾಂತದ ಬದಲು ಡಾ.ಅಂಬೇಡ್ಕರರು ಸಂವಿದಾನದ ಮೂಲಕ ರಾಷ್ಟ್ರ ನಿರ್ಮಾಣ ಮಾಡಬೇಕೆನ್ನುವ ಅಂಬೇಡ್ಕರ್ ವಿಚಾರ ತಪ್ಪು ಎನ್ನುತ್ತಾನೆ.
ಸಂವಿದಾನ ಬರೆಯುವ ಮೂಲಕ ರಾಷ್ಟ್ರ ನಿರ್ಮಾಣ ಬಯಸಿದ್ದ ಅಂಬೇಡ್ಕರ ಕೈಗೆನೇ ಪೆನ್ನು ಕೊಟ್ಟು ಅಂತ ಸಂವಿದಾನ ಬರೆಸಿದ್ದೇ ವ್ಯಂಗ್ಯ ! ಬೇರೆಯವರಿಗಾಗಿ ಸಂವಿದಾನ ಬರೆಯುವOತೆ ಮಾಡಿ ಅವರನ್ನು ಶೋಚನೀಯ ಸ್ಥಿತಿಗೆ ಇಳಿಸಿದ್ದು ಇತಿಹಾಸದ ತೀರ್ಪು ತಪ್ಪಿಲ್ಲ.ವರ್ಗ ಸಂಘರ್ಷದಿOದ ಮಾತ್ರ ರಾಷ್ಟ್ರವನ್ನು ಜಯಿಸಬಹುದು.ಮಾರ್ಕ್ಸ್ ಏನು ಹೇಳಿದ್ದಾನೋ ಅದು ಮಾತ್ರ ಊರ್ಜಿತವಾಗಿದೆ.
ಈ ಮೂಲಕ ಅಂಬೇಡ್ಕರ್ ವಿಚಾರದಾರೆಗಳೇ ನಿಸ್ಪ್ರಯೋಜಕವೆOದು ಹೇಳಿಬಿಡುವ ವ್ಯಕ್ತಿ ತನ್ನನ್ನು ಬಂದಿಸುವ ಕಡೆ ಘಳಿಗೆಯವರೆಗೂ ಅದೇ ನಿಸ್ಪ್ರಯೋಜಕವೆOದು ಯಾರ ವಿಚಾರದಾರೆಗಳನ್ನು ಖಂಡಿಸಿದ್ದನೋ ಯಾವ ಸಂವಿದಾನ ನಿಸ್ಪ್ರಯೋಜಕನೆOದನೋ ಅವುಗಳ ನೆರವಿನೊಳಗೆ ತನ್ನ ಬಂದನದಿOದ ಬಿಡುಗಡೆಗೊಳ್ಳಲು ಹಂಬಲಿಸಿದ್ದು ವ್ಯಂಗ್ಯವಲ್ಲವೇ !?
ವರ್ಗ ಸಂಘರ್ಷದಿOದ,ರಕ್ತ ಕ್ರಾಂತಿಯಿOದ ಮಾತ್ರ ಶಾಸ್ವತ ಪರಿಹಾರ ಎಂದವನು ಕೇವಲ ಒಂದು ಬಂದನದ ಭೀತಿಯಿOದ ಏನೆಲ್ಲ ಚಡಪಡಿಕೆ ಇತ್ತಲ್ಲ ಅವನಲ್ಲಿ ! ಅವನು ಅಥವಾ ಇಂಥಹ ಬುದ್ದಿಜೀವಿಗಳ ಮುಖವಾಡ ತೊಟ್ಟ ಕಮ್ಯುನಿಸ್ಟರು ಕೇವಲ ಮುಗ್ದರನ್ನು ಪ್ರಚೋದಿಸಿ ಬಲಿಪೀಠಕ್ಕೆ ಮುಗ್ದ ದಲಿತ ಆದಿವಾಸಿಗಳನ್ನು ರವಾನಿಸುವ ದಲ್ಲಾಳಿಗಳಲ್ಲದೆ ಇನ್ನೇನು !?
ಬಹುಜನ ಸಮಾಜದ ಬಗ್ಗೆ ಹೀಗೆ ಹೇಳುತ್ತಾನೆ ; ಬಹುಜನ ಎಂಬುದು ಒಂದಷ್ಟು ಜಾತಿಗಳ ತತಕ್ಷಣದ ಅಗತ್ಯಗಳಿಗಾಗಿ ಒಟ್ಟುಗೂಡುವ ಕೆಲಸವೆOದು !
ಅಂಬೇಡ್ಕರರ ಧರ್ಮಾOತರ,ಸಂಘರ್ಷಗಳೆಲ್ಲ ನಗಣ್ಯವಾಗಿ ಕಾಣುತ್ತದಿವನಿಗೆ.ಇನ್ನು ಒಟ್ಟಾರೆಯಾಗಿ ಅಂಬೇಡ್ಕರ್ ಅತೀ ಶ್ರೇಷ್ಠ ಎಂದು ಹೇಳುವುದೇ ಸಂಕುಚಿತ ಮನೋಭಾವವಾಗಿ ಕಾಣುತ್ತದOತೆ ಈ ಮನುಷ್ಯನಿಗೆ ! ಇಂದು ಜಗತ್ತಿನ ಅತೀ ಶ್ರೇಷ್ಠ ವ್ಯಕ್ತಿಯಾಗಿರುವ ಅಂಬೇಡ್ಕರ್ ಮಾನವ ಕುಲದ ನಿಜವಾದ ಉದ್ದಾರಕ. ಈ ಪ್ರಜ್ಞೆ ಎಲ್ಲರಲ್ಲಿರುವಾಗ ಹಸಿರಿನಲ್ಲಿ ಹಸಿರು ಬಣ್ಣದ ಹಾವು ಬಿದ್ದOತೆ ಬಿದ್ದುಕೊOಡು ವಿಷ ಕಕ್ಕುತ್ತಿರುವ ನಿಜವಾದ ಇಂತವರ ರೂಪ ಯಾರಿಗೂ ಕಾಣುತ್ತಿಲ್ಲ.ಏಕೆOದರೆ ಹಸಿರು ಹುಲ್ಲಿನಲ್ಲಿ ಹಸಿರು ಹಾವಾಗಿ ಬಿದ್ದುಕೊOಡಿದ್ದಾರೆ.ಬೇರೆ ಬಣ್ಣದ್ದಾಗಿದ್ದರೆ ಕಾಣಿಸುತ್ತಿತ್ತು ಆದರೆ ಹುಲ್ಲೂ ಹಸಿರು ಹಾವೂ ಹಸಿರು ಆಗಿರುವುದರಿOದ ಹಾವು ಕಾಣಿಸದು.ಇದು ಅಪಾಯ ಜಾಸ್ತಿ.ಏಕೆOದರೆ ಸ್ವಲ್ಪ ಮೈ ಮರೆತರೂ ಅದು ಕಚ್ಚಿ ಬಿಡುವ ಅಪಾಯ ಹೆಚ್ಚು.ಅದಕ್ಕಾಗಿ ಹಸಿರು ಹಾವಿನOತಿರುವ ಕಮ್ಯುನಿಸ್ಟ್ ಬಗ್ಗೆ ಹೆಚ್ಚು ಜಾಗೃತರಾಗಿರುವುದೇ ಸರಿಯಾದ ಮಾರ್ಗ.
ಡಾ.ಗೌತಮ್ ಬನಸೋಡೆ
(ಈ ಸತ್ಯ ಬರೆಯಲು ಸಮಗ್ರ ಅಧ್ಯಯನ, ಸಾಮಾನ್ಯಜ್ಞಾನದ ಧೈರ್ಯ ಬೇಕು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend