ಪಾತಲಿಂಗೇಶ್ವರ ಸ್ವಾಮಿಯ ಉಂಡಿಯಾ ಎಣಿಕೆ ಕಾರ್ಯ ಗ್ರಾಮಸ್ಥರ ಸಮ್ಮುಖದಲ್ಲಿ ಭರದಿಂದ ಸಾಗಿತು …!!!

Listen to this article

ಚಳ್ಳಕೆರೆ ತಾಲೂಕು ತಳುಕು ಹೋಬಳಿ ದೊಡ್ಡಬಾತಿ ಹಳ್ಳಿ ಗ್ರಾಮದ ಪಾತಲಿಂಗೇಶ್ವರ ಸ್ವಾಮಿ ದೇವಸ್ಥಾನದ ಹತ್ತು ವರ್ಷಗಳ ವಿವಾದಕ್ಕೆ ಇಂದು ತೆರೆ ಎಳೆಯಲಾಯಿತು ಇಲ್ಲಿನ ಪಾತಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರ ನಡುವೆ ಇವರ ವಿವಾದವಿತ್ತು ಕಳೆದ ಎಂಟು ವರ್ಷಗಳಿಂದ ದೇವಸ್ಥಾನದ ಹುಂಡಿಯನ್ನು ತೆರೆದಿರಲಿಲ್ಲ ಹಲವಾರು ಹಿರಿಯ ಗ್ರಾಮಸ್ಥರುಗಳು ತಾಲೂಕು ಕಚೇರಿಗೆ ಭೇಟಿ ನೀಡಿ ಆಂಧ್ರಪ್ರದೇಶದ ಬಹುತೇಕ ಗ್ರಾಮಗಳಲ್ಲಿ ಈ ದೇವರ ಭಕ್ತಾದಿಗಳಿದ್ದು ದೇವರ ಪೂಜಾ ಕೈಂಕರ್ಯಗಳು ಮತ್ತು ಜಾತ್ರಾಮಹೋತ್ಸವದ ವಿಧಿ ವಿಧಾನಗಳು ವಿವಾದದಿಂದ ತೊಡಕಾಗಿತ್ತು ಆದಷ್ಟು ಬೇಗ ದೇವಸ್ಥಾನಕ್ಕೆ ಭೇಟಿ ನೀಡಿ ಈ ವಿವಾದವನ್ನು ಬಗೆಹರಿಸುವ ಅಂತೆ ಮನವಿ ಮಾಡಲಾಗಿತ್ತು ಸದರಿ ಮನವಿಯನ್ನು ಪರಿಶೀಲಿಸಿ

ಇಂದು ಗ್ರಾಮಕ್ಕೆ ಭೇಟಿ ನೀಡಿ ಇಡೀ ಊರಿನ ಗ್ರಾಮಸ್ಥರನ್ನು ಒಂದೆಡೆ ಸೇರಿಸಿ ವಿವಾದದ ಕುರಿತು ವಿಸ್ತೃತ ಚರ್ಚೆ ನಡೆಸಿ ಗ್ರಾಮಸ್ಥರ ಮನವೊಲಿಸಲಾಗಿದೆ ಇರುವಂತಹ ಆಡಳಿತ ಮಂಡಳಿಯನ್ನು ಬರ್ಖಾಸ್ತುಗೊಳಿಸಿ ಹೊಸ ಆಡಳಿತ ಮಂಡಳಿಯನ್ನು ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಅಭಿಪ್ರಾಯದಂತೆ ರಚಿಸಲಾಗುವುದು ಹಾಗೂ ಸುಮಾರು 10 ವರ್ಷಗಳಿಂದ ಹುಂಡಿಯನ್ನು ತೆರೆಯದೆ ಇರುವುದರಿಂದ ಮುಂಡಿಯಲ್ ಇರುವಂತಹ ಹಣ ಮುಕ್ತಾವಾಗಿರಬಹುದು ಆದ್ದರಿಂದ ಇಂದೆ ಹುಂಡಿಯನ್ನು ತೆರೆಯಲು ಗ್ರಾಮಸ್ಥರನ್ನು ಒಪಿಸಿ ಕಾಣಿಕೆ ಕುಂಡಿ ತೆರೆಯಲಾಯಿತು ಗ್ರಾಮಸ್ಥರ ಸಮಕ್ಷಮದಲ್ಲಿ ಉಂಡಿಯಾ ಎಣಿಕೆ ಕಾರ್ಯ ಭರದಿಂದ ಸಾಗಿದೆ ಮುಂದಿನ ಸಮಿತಿಯನ್ನು ರಚಿಸುವ ವರೆಗೆ ಗ್ರಾಮದಲ್ಲಿ ಸಾಮರಸ್ಯ ಕಾಪಾಡಿಕೊಳ್ಳುವಂತೆ ದೇವರ ಪೂಜಾಕೈಂಕರ್ಯ ಗಳಿಗೆ ಯಾವುದೇ ಬಾದಕ ಬಾರದಂತೆ ಮತ್ತು ದೇವಸ್ಥಾನದ ವಶದಲ್ಲಿ ಇರುವಂತಹ ಎಲ್ಲಾ ಒಡವೆ ವೈಢೂರ್ಯಗಳನ್ನು ಮುಂದಿನ ಆಡಳಿತ ಮಂಡಳಿ ರಚಿಸುವ ವೇಳೆಯಲ್ಲಿ ಯಾರ್ಯಾರ ಬಳಿ ಇದೆಯೋ ಒಡವೆಗಳನ್ನು ಹಾಜರುಪಡಿಸುವಂತೆ ಎಲ್ಲರಿಗೂ ತಿಳಿ ಹೇಳಿದರು ಇದಕ್ಕೆ ಗ್ರಾಮಸ್ಥರುಗಳು ಒಪ್ಪಿಗೆ ಸೂಚಿಸಿ ಮತ್ತು ತಾಲೂಕು ದಂಡಾಧಿಕಾರಿಗಳು ಸೂಚಿಸುವಂತೆಗ್ರಾಮಸ್ಥರೆಲ್ಕ ನಡೆದುಕೊಳ್ಳುವುದಾಗಿ ಭರವಸೆ ನೀಡಿದರು ಒಟ್ಟು ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿ ಸಂಭ್ರಮ ಮನೆಮಾಡಿತ್ತು ಪರಶುರಾಂಪುರ ಪೊಲೀಸ್ ಉಪನಿರೀಕ್ಷಕ ರಾದ ಶ್ರೀಮತಿ ಸ್ವಾತಿ ಮುಖಂಡರಾದ ಪಾತಪ್ಪನಗುಡಿ ಚಿತ್ರಪ್ಪನರಸಿಂಹ ಮೂರ್ತಿ ಪೊಲೀಸ್ ಮತ್ತು ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು..

ವರದಿ. ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend