ಸಿದ್ದರಾಮಯ್ಯ ಅವರೊಬ್ಬ ನಿಜವಾದ ಅಹಿಂದ ನಾಯಕರೇ..?

Listen to this article

ಸಿದ್ದರಾಮಯ್ಯ ಅವರೊಬ್ಬ ನಿಜವಾದ ಅಹಿಂದ ನಾಯಕರೇ..?

🔹 ಖಂಡಿತವಾಗಿಯೂ ಇಲ್ಲ “ಅಹಿಂದ” ಎಂಬ ಪದದಿಂದ ಇವರು “ಅ” ಯಿಂದ ಅಲ್ಪಸಂಖ್ಯಾತರನ್ನು ತುಳಿದು “ಹಿ” ಯಿಂದ ನಕಲಿ ಹಿಂದುತ್ವ ಪಕ್ಷವಾದ ಬಿಜೆಪಿ ಯನ್ನು ಅಧಿಕಾರಕ್ಕೆ ತರುವುದು “ದ” ಯಿಂದ ದಲಿತ ನಾಯಕರನ್ನು ತುಳಿದು ಅಧಿಕಾರ ಮಾಡುವುದೆ ಅಹಿಂದ ಪದದ ಅರ್ಥ.

🔹 ಇವರ ಬಗ್ಗೆ ಹೀಗೊಂದು ಅನುಮಾನ ಮುಡಲು ಕೆಲವು ಕಾರಣಗಳಿವೆ, ಯಾರು ಕೂಡ ಒಬ್ಬ ವ್ಯಕ್ತಿಯನ್ನು ಸುಖ ಸುಮ್ಮನೆ ಅನುಮಾನ ಪಡುವುದಿಲ್ಲ, ಅವರ ಮಾಡುವ ಕೆಲಸದಲ್ಲಿ ಅವರು ನಡೆದುಕೊಳ್ಳುವ ರೀತಿಯಲ್ಲಿ, ಹಾಗೂ ಅವರ ತಮ್ಮ ರಾಜಕೀಯ ಲಾಭಕ್ಕಾಗಿ ಇನ್ನೊಬ್ಬ ರಾಜಕೀಯ ನಾಯಕರನ್ನು ತುಳಿಯುವ ಕುತಂತ್ರಗಳು ನೋಡಿದರೆ ಇದು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನಲ್ಲಿ ಅನುಮಾನ ಮೂಡುವಂತ್ತೆಮಾಡುತ್ತದ್ದೆ.

🔹 ಸಿದ್ದರಾಮಯ್ಯ ನವರು ಮುಖ್ಯಮಂತ್ರಿ ಇರುವಾಗ ಎಸ್ಸಿ ಎಸ್ಟಿ ಮತ್ತು ಮುಸ್ಲಿಮರಿಗಾಗಿ ತಂದ ಶಾದಿ ಭಾಗ್ಯ, ಹಾಗೂ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗಾಗಿ ಕ್ಷೀರ ಭಾಗ್ಯ ಹಾಗೂ ಪ್ರವಾಸ ಭಾಗ್ಯ ದಂತಹ ಕೆಲವು ಯೋಜನೆಗಳಿಂದಾಗಿ, ಎಸ್ಸಿ ಎಸ್ಟಿ ಮತ್ತು ಮುಸ್ಲಿಂ ಸಮುದಾಯಗಳ ಮೇಲೆ‌ ಉಳಿದ ಹಿಂದುಳಿದ ಸಮುದಾಯಗಳ ಜನರ ದ್ವೇಷ ಹೆಚ್ಚಾಗುವಂತೆ ಮಾಡಿತು, ಸಿದ್ದರಾಮಯ್ಯ ನವರು ಉತ್ತಮ ರಾಜಕಾರಣಿಯೇ ಆಗಿದಿದ್ದರೆ ಇಂತಹ ಕೆಲಸಕ್ಕೆ ಬಾರದ ಯೋಜನೆಗಳನ್ನು ತಂದು ಹಿಂದುಳಿದ ವರ್ಗಗಳ ಮತ್ತು ಎಸ್ಸಿ ಎಸ್ಟಿ ಮುಸ್ಲಿಂ ಸಮುದಾಯಗಳ ಮದ್ಯಯೇ ದ್ವೇಷ ಹರಡುವ ಕೆಲಸ ಮಾಡುತ್ತಿರಲಿಲ್ಲ.

🔹 ಎಸ್ಸಿ ಎಸ್ಟಿ ಮೀಸಲಾತಿ ಹಾಗೂ ಮುಸ್ಲಿಮರ ವಿರೋಧಿಗಳಾದ ಬಿಜೆಪಿ ಆರ್ ಎಸ್ಸೆಸ್ ನವರು ಕೂಡ ಇಂತಹ ಸಂದರ್ಭ ಬರುವುದನ್ನೆ ಕಾಯ್ದುಕೊಂಡು ಕೂತಿದ್ದರು. ಯಾವಾಗ ಸಿದ್ದರಾಮಯ್ಯ ಇಂತಹ ಕೆಲಸಕ್ಕೆ ಬಾರದ ಯೋಜನೆಗಳು ಜಾರಿಗೆ ತಂದ ಕೂಡಲೇ, ಬಿಜೆಪಿ ಮತ್ತು ಆರ್ ಎಸ್ಸೆಸ್ ನವರು ಮೀಸಲಾತಿ ಬಗ್ಗೆ ಹಾಗೂ ಮುಸ್ಲಿಮರ ಬಗ್ಗೆ ತಮ್ಮ ಐಟಿ ಸೇಲ್ ಮೂಲಕ ನಮ್ಮ ನಮ್ಮ ಜನರ ಮದ್ಯಯೇ ದ್ವೇಷ ಹರಡಲು ಶುರುಮಾಡಿದರು, ಸಮಾಜದಲ್ಲಿ ಇಂತಹ ದ್ವೇಷ ಹರಡುವ ನಾಯಿಗಳಿಗೆ ಸಿದ್ದರಾಮಯ್ಯ ನವರು ಮತ್ತಷ್ಟು ಅಂತಹ ನಾಯಿಗಳಿಗೆ ಬಿಸ್ಕತ್ತು ಹಾಕುವ ಕೆಲಸ ಮಾಡಿದರು.

🔹 ಕ್ಷೀರ ಭಾಗ್ಯ ಯೋಜನೆ ಎಂದರೆ ಏನು? ಶಾಲೆಗಳಲ್ಲಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಎರಡು ಮೊಟ್ಟೆ ಒಂದು ಗ್ಲಾಸ್‌ ಹಾಲು ಕೊಡಲಾಗುತ್ತಿತ್ತು, ಉಳಿದ ಮಕ್ಕಳಿಗೆ ಒಂದು ಮೊಟ್ಟೆ ಒಂದು ಗ್ಲಾಸ್ ಹಾಲು ಕೊಡಲಾಗುತ್ತಿತ್ತು, ಎಸ್ಸಿ ಎಸ್ಟಿ ಮಕ್ಕಳಿಗೆ ಒಂದು ಮೊಟ್ಟೆ ಜಾಸ್ತಿ ಕೊಡುವುದರಿಂದ ಆ ಮಕ್ಕಳಲ್ಲೇನು ಪೌಸ್ಠಿಕತೆ ಹೆಚ್ಚಾಗಿ ಇಷ್ಟು ಉದ್ದ ಇಷ್ಟು ದಪ್ಪ ಆಗ್ತಿದ್ರಾ..! ಉಳಿದ ಮಕ್ಕಳು ಒಂದು ಮೊಟ್ಟೆ ಕಡಿಮೆ ತಿನ್ನುವುದರಿಂದ ಪೌಷ್ಠಿಕತೆ ಕಡಿಮೆಯಾಗಿ ಗಾಳಿಗೆ ಬಿದ್ದು ಬಿಡ್ತಿದ್ರಾ..! ಸಿದ್ದರಾಮಯ್ಯ ನವರು ಇಂತಹ ಯೋಜನೆಗಳು ತಂದು ಉಳಿದ ಸಮುದಾಯದವರ ಮನಸ್ಸಿನಲ್ಲಿ ಎಸ್ಸಿ ಎಸ್ಟಿ ಸಮುದಾಯಗಳ ಮೇಲೆ‌ ಜಾತಿ ಮತ್ತು ಮೀಸಲಾತಿ ದ್ವೇಷ ಹರಡಲೆಂದೆ‌ ಇಂತಹ ಕುತಂತ್ರಗಳು ಮಾಡಿದ್ರಾ ಎಂಬ ಅನುಮಾನ ಕೂಡ ಹುಟ್ಟಿಕೊಳ್ಳುತ್ತದೆ ಇನ್ನಾದರೂ ಅರ್ಥ ಮಾಡಿಕೊಂಡು ಇದರ ಬಗ್ಗೆ ಗಮನ ಕೊಡಬೇಕಾಗಿದೆ..


ವರದಿ.ಪ್ರತಾಪ್ ಚಲುವಾದಿ ಹರಪನಹಳ್ಳಿ ತಾಲ್ಲೂಕು ಛಲವಾದಿ ಮಹಾಸಭಾ ಘಟಕದ ಪ್ರಧಾನ ಕಾರ್ಯದರ್ಶಿ..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend