ಇಂದು ‘ರಾಬದ’ ನೂತನ ರಾಷ್ಟ್ರಾಧ್ಯಕ್ಷರಾಗಿ ‘ಬಸವಪ್ರಕಾಶ್ ಸ್ವಾಮೀಜಿ’ ಆಯ್ಕೆ?

Listen to this article

ಇಂದು ‘ರಾಬದ’ ನೂತನ ರಾಷ್ಟ್ರಾಧ್ಯಕ್ಷರಾಗಿ ‘ಬಸವಪ್ರಕಾಶ್ ಸ್ವಾಮೀಜಿ’ ಆಯ್ಕೆ?

ಮೊನ್ನೆ ಬಸವ ಧರ್ಮ ಪೀಠದ ‘ಗಂಗಾ ಮಾತಾಜಿ’ ಅವರು “ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಗಾಗಿ ಮತ್ತು ‘ರಾಬದ’ ಸಂಘಟನೆಯ ಹಿತದೃಷ್ಟಿಯಿಂದ ಬಸವಣ್ಣನವರ ವಚನಾಂಕಿತ ‘ಲಿಂಗದೇವ’ ವಾಪಸ್ಸು ಪಡೆಯುತ್ತಿದ್ದೇವೆ, ಇನ್ಮುಂದೆ ನಾವು ಪ್ರಕಟಿಸುವ ಪುಸ್ತಕ – ವಾರದ ಪ್ರಾರ್ಥನೆಯಲ್ಲಿ ‘ಕೂಡಲಸಂಗಮದೇವ’ ಮಾತ್ರ ಬಳಸುತ್ತೇವೆ” ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದರು. ನಾಡಿನ ಬಸವಾನುಯಾಯಿಗಳು ಮತ್ತು ಹಲವು ಸ್ವಾಮೀಜಿಗಳು ಅವರ ಈ ನಿಲುವಿಗೆ ಹರ್ಷ ವ್ಯಕ್ತಪಡಿಸಿ ಮುಕ್ತವಾಗಿ ಸ್ವಾಗತಿಸಿದ್ದಾರೆ.

ಆದರೆ, ಮಾತೆಮಹಾದೇವಿ ಅವರ ಮೇಲೆ ಅಪಾರ ಗೌರವ, ಪ್ರೀತಿ, ಅಭಿಮಾನವುಳ್ಳ ರಾಷ್ಟ್ರೀಯ ಬಸವ ದಳದ ಬಹುತೇಕ ಕಾರ್ಯಕರ್ತರು ಗಂಗಾ ಮಾತಾಜಿಯವರ ಈ ನಿಲುವಿಗೆ ಮತ್ತು ಹಿಂತೆಗೆದುಕೊಳ್ಳಲು ಬಳಸಿದ ಮಾರ್ಗಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಸವ ಧರ್ಮ ಪೀಠದ ಐದಾರು ಜನ ಸ್ವಾಮೀಜಿಗಳು ಗಂಗಾ ಮಾತಾಜಿಯವರ ಅಪ್ರಜಾಸತ್ಮಾಕ ನಿಲುವಿಗೆ ನಮ್ಮ ವಿರೋಧವಿದೆ ಎಂದು ಬಹಿರಂಗವಾಗಿಯೆ ಹೇಳಿಕೆ ನೀಡುತ್ತಿದ್ದಾರೆ.

ಜೊತೆಗೆ, ಬಸದ ಧರ್ಮ ಪೀಠ ಮತ್ತು ರಾಷ್ಟ್ರೀಯ ಬಸದ ದಳದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗೆ ‘ಬಸವರಾಜ ಧನ್ನೂರ’ ಅವರೇ ಮೂಲ ಕಾರಣಕರ್ತರಾಗಿದ್ದಾರೆ ಎಂದು ಆರೋಪಿಸಿ, ಮೊನ್ನೆ ಚಿತ್ರದುರ್ಗದಲ್ಲಿ ‘ರಾಬದ’ ಕೇಂದ್ರ ಸಮಿತಿಯ ಸರ್ವ ಸದಸ್ಯರು ಸಭೆ ಸೇರಿ, ಸಭೆಯಲ್ಲಿ ಒಮ್ಮತದಿಂದ ‘ರಾಬದ’ ರಾಷ್ಟ್ರಾಧ್ಯಕ್ಷ ಸ್ಥಾನದಿಂದ ಅವರನ್ನು ಉಚ್ಚಾಟನೆ ಮಾಡಿದ್ದಾರೆ.

ಇದಾದ ಮರುದಿನದೇ ಗಂಗಾ ಮಾತಾಜಿ ಅವರು ಚಿತ್ರದುರ್ಗದ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯಕ್ಕೆ ಯಾವುದೇ ಕಾನೂನಿನ ಬಲವಿಲ್ಲ.ಹಾಗಾಗಿ ಅವರ ನಿರ್ಣಯವನ್ನು ಅಮಾನ್ಯವಾಗಿದೆ. ನಾವು ಇದನ್ನು ಸುತಾರಾಂ ಒಪ್ಪುವುದಿಲ್ಲ. ಧನ್ನೂರ ಅವರೇ ರಾಷ್ಟ್ರಾಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದು ಹೇಳಿದರು.

ಇದ್ಕಕೆ ‘ರಾಬದ’ ಕೇಂದ್ರ ಸಮಿತಿಯ ಅಧ್ಯಕ್ಷರು – ಕಾರ್ಯದರ್ಶಿ ಮತ್ತು ಇತರ ಸದ್ಯಸರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ” ‘ರಾಬದ’ ನೋಂದಣಿ ಆಗಿರುವ ಸಂಘಟನೆಯಾಗಿದೆ, ಸಂಘಟನೆಯನ್ನು ಬಲಹೀನಗೊಳಿಸುವ ಮತ್ತು ಸಂಘಟನೆಯ ಸಂವಿಧಾನಕ್ಕೆ ವಿರೋಧವಾಗಿ ನಡೆದ್ದುಕೊಳ್ಳುವವರ ವಿರುದ್ಧ ಕ್ರಮ ತೆಗೆದುಕೊಳ್ಳುವ, ಉಚ್ಚಾಟಿಸುವ ಕಾನೂನಾತ್ಮಕ ಹಕ್ಕು – ಅಧಿಕಾರ ಸಂಘಟನೆಯ ಕೇಂದ್ರ ಸಮಿತಿಗೆ ಇದೆ” ಎಂದು ಕೇಂದ್ರ ಸಮಿತಿಯ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ‘ದಿ ಪೊಲಿಟಿಕ್’ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ನಂಬಲರ್ಹ ಮೂಲಗಳ ಪ್ರಕಾರ ಇಂದು ‘ರಾಬದ’ ಕೇಂದ್ರ ಸಮಿತಿಯು ‘ರಾಬದ’ ನೂತನ ರಾಷ್ಟ್ರಾಧ್ಯಕ್ಷರನ್ನಾಗಿ ಬಸವ ಧರ್ಮ ಪೀಠದ ಯಂಗ್ ಮತ್ತು ಡೈನಾಮಿಕ್ ಆದ ‘ಬಸವಪ್ರಕಾಶ ಸ್ವಾಮೀಜಿ’ಯವರನ್ನ ಅಧಿಕೃತವಾಗಿ ಆಯ್ಕೆ ಮಾಡಿ ಮಾಧ್ಯಮಗಳ ಎದುರಿಗೆ ಘೋಷಣೆ ಮಾಡುವ ಸಾಧ್ಯತೆಯಿದೆ.

ಈ ಕುರಿತು ‘ದಿ ಪೊಲಿಟಿಕ್’ ಬಸವಪ್ರಕಾಶ ಸ್ವಾಮೀಜಿ ಜತೆಗೆ ಮಾತನಾಡಿದಾಗ ” ‘ರಾಬದ’ ಮತ್ತು ‘ಬಸವಧರ್ಮ ಪೀಠ’ ಉಳಿಸಲು, ರಾಷ್ಟ್ರೀಯ ಬಸವ ದಳದ ಕೇಂದ್ರ ಸಮಿತಿ ಮತ್ತು ಬಸದ ಧರ್ಮ ಪೀಠದ ಅನುಯಾಯಿಗಳು ತೆಗೆದುಕೊಳ್ಳುವ ತಿರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ನನ್ನನ್ನು ‘ರಾಬದ’ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಅವರು ಆಯ್ಕೆ ಮಾಡಿದರೆ ಖಂಡಿತಾ ನಾನು ಸ್ವೀಕರಿಸುತ್ತೇನೆ.ಜತೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಬಲಪಡಿಸುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ…

 

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend