ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಬಹಿರಂಗ ಸಭೆಗೆ ಕರುಣಾಕರೆಡ್ಡಿಗೆ ಆಹ್ವಾನವಿಲ್ಲ…!!”

Listen to this article

ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಬಹಿರಂಗ ಸಭೆಗೆ ಕರುಣಾಕರೆಡ್ಡಿಗೆ ಆಹ್ವಾನವಿಲ್ಲ |

ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಬಹಿರಂಗ ಸಭೆಗೆ ಕರುಣಾಕರ ರೆಡ್ಡಿಗೆ ಆಹ್ವಾನವಿಲ್ಲ, ವೇದಿಕೆ ಬ್ಯಾನರ್ ನಲ್ಲಿ ಕರುಣಾಕರ ರೆಡ್ಡಿಯ ಫೋಟೋ ನಿರ್ಲಕ್ಷ್ಯ.

ಹರಪನಹಳ್ಳಿ: ತಾಲೂಕಿನ ಕಮ್ಮತ್ತಹಳ್ಳಿ ಗ್ರಾಮದಲ್ಲಿ ಭಾನುವಾರ ಜಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ವಿಧಾನ ಪರಿಷತ್ ಚುನಾವಣೆಯ ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ್ ಅವರ ಪರವಾಗಿ ಮತಯಾಚನೆ ಬಹಿರಂಗ ಸಭೆ ನಡೆಯಿತು. ಈ ಸಭೆಗೆ ಹರಪನಹಳ್ಳಿ ಕ್ಷೇತ್ರದ ಶಾಸಕ ಜಿ.ಕರುಣಾಕರರೆಡ್ಡಿ ಅವರನ್ನು ಆಹ್ವಾನಿಸಿಲ್ಲ. ಜೊತೆಗೆ ವೇದಿಕೆಯ ಬ್ಯಾನರ್‌ನಲ್ಲಿ ಕರುಣಾಕರರೆಡ್ಡಿ ಅವರ ಭಾವಚಿತ್ರವನ್ನು ಕೂಡ ಹಾಕಲಾಗಿರಲಿಲ್ಲ.
ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ವಿ.ರಾಮಚಂದ್ರ ಅವರ ಉಸ್ತುವಾರಿಯಲ್ಲಿ ನಡೆದ ಸಭೆಯಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಕೂಡ ಭಾಗವಹಿಸಿದ್ದರು. ವೇದಿಕೆಯಲ್ಲಿ ಹಾಕಲಾಗಿದ್ದ ಬ್ಯಾನರ್‌ನಲ್ಲಿ ನರೇಂದ್ರ ಮೋದಿ, ಅಮೀತ್ ಶಾ, ಜೆ.ಪಿ.ನಡ್ಡಾ, ಬಸವರಾಜ್ ಬೊಮ್ಮಾಯಿ, ಯಡಿಯೂರಪ್ಪ, ನಳೀನಕುಮಾರ್ ಕಟೀಲ್, ಅನಂದಸಿಂಗ್, ಶ್ರೀರಾಮುಲು, ಜಿ.ಎಂ.ಸಿದ್ದೇಶ್ವರ್, ವೈ.ದೇವೇಂದ್ರಪ್ಪ, ಬಳ್ಳಾರಿ ಚನ್ನಬಸವನಗೌಡ ಸೇರಿದಂತೆ ಹಲವರ ಭಾವಚಿತ್ರ ಹಾಕಲಾಗಿದೆ. ಆದರೆ ಮಾಜಿ ಕಂದಾಯ ಸಚಿವ ಹಾಗೂ ಹಾಲಿ ಹರಪನಹಳ್ಳಿಯ ಶಾಸಕ ಕರುಣಾಕರರೆಡ್ಡಿ ಅವರ ಪೋಟೋ ಇರಲಿಲ್ಲ.

ಹರಪನಹಳ್ಳಿ ತಾಲೂಕಿನ ಅರಸೀಕೆರೆ ಹೋಬಳಿಯ ಕೇವಲ 7 ಗ್ರಾಮ ಪಂಚಾಯ್ತಿಗಳು ಮಾತ್ರ ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿವೆ. ಇಲ್ಲಿಯ ಎಲ್ಲಾ ಕೆಲಸ ಕಾರ್ಯಗಳು ಹರಪನಹಳ್ಳಿ ಕಚೇರಿಗಳಲ್ಲಿಯೇ ನಡೆಯುತ್ತಿವೆ.
ಹೀಗಾಗಿ ಹರಪನಹಳ್ಳಿ ಮತ್ತು ಅರಸೀಕೆರೆ ಹೋಬಳಿ ಒಂದಾನ್ನೊಂದು ಬಿಟ್ಟು ಇಲ್ಲ. ಕೇವಲ ಮತದಾನ ಹಕ್ಕು ಮಾತ್ರ ಜಗಳೂರು ವೀಧಾನಸಭಾ ಕ್ಷೇತ್ರಕ್ಕೆ ಚಲಾಯಿಸುತ್ತಾರೆ. ಉಳಿದ ಎಲ್ಲಾ ಕೆಲಸ ಕಾರ್ಯಗಳಿಗೂ ಹರಪನಹಳ್ಳಿಯೇ ಮೂಲ ಸ್ಥಾನ. ಹೀಗಾಗಿ ಇಲ್ಲಿಯ ಸ್ಥಳೀಯ ಶಾಸಕರನ್ನು ನಿರ್ಲಕ್ಷ್ಯ ಮಾಡಿ ಪ್ರಚಾರ ಸಭೆ ನಡೆಸಲಾಗಿದೆ.ಹರಪನಹಳ್ಳಿ ಶಾಸಕ ಜಿ.ಕರುಣಾಕರರೆಡ್ಡಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವುದಿರಲಿ, ಕೇವಲ ಬ್ಯಾನರ್‌ನಲ್ಲಿ ಪೋಟೋ ಕೂಡ ಹಾಕಿಲ್ಲ. ಹೀಗಾಗಿ ಇಲ್ಲಿ ನೂರಾರು ಅನುಮಾನಗಳು ಕಾಡುತ್ತವೆ.
ಶಾಸಕ ಕರುಣಾಕರರೆಡ್ಡಿ ಅವರಿಂದ ಅಂತರ ಕಾಯದುಕೊಂಡಿರುವ ಹರಪನಹಳ್ಳಿಯ ಬಿಜೆಪಿ ಮುಖಂಡರಾದ.ಜಿ.ನಂಜನಗೌಡ,
ಆರುಂಡಿ ನಾಗರಾಜ್, ಪಿ.ಮಹಾಬಲೇಗೌಡ, ಕರುಣಾಕರರೆಡ್ಡಿ ಅವರ ಮಾಜಿ ಆಪ್ತ ಸಹಾಯಕ ಓಂಕಾರಗೌಡ ಅವರನ್ನು ಸಭೆಗೆ ಆಹ್ವಾನಿಸಿ ಕಾರ್ಯಕ್ರಮ ನಡೆಸಲಾಯಿತು. ಸಭೆಯಲ್ಲಿ ಜಿ.ನಂಜನಗೌಡ, ಆರುಂಡಿ ನಾಗರಾಜ್, ಪಿ.ಮಹಾಬಲೇಶ್ವರ ಗೌಡ ಮಾತನಾಡಿದರು. ಹೀಗಾಗಿ ಕರುಣಾಕರರೆಡ್ಡಿಗೆ ಹಿನ್ನಡೆ ಮಾಡುವ ಉದ್ದೇಶ ಅಡಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತು…

 

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend