ಸ್ವ ಸಹಾಯ ಸಂಘಗಳು ಆರ್ಥಿಕವಾಗಿ ಸದೃಢವಾಗಬೇಕು….

Listen to this article
ವರದಿ. ಧನಂಜಯ್ ಹಡಗಲಿ
ಸ್ವ ಸಹಾಯ ಸಂಘಗಳು ಆರ್ಥಿಕವಾಗಿ ಸದೃಢವಾಗಬೇಕು: ಕೆ.ಲಲಿತಮ್ಮ
ಹೂವಿನಹಡಗಲಿ: ಪಟ್ಟಣದ ಕೃಷಿ ಇಲಾಖೆ ವತಿಯಿಂದ ಸ್ವ ಸಹಾಯ ಸಂಘಗಳಿಗೆ ತರಭೇತಿ ನೀಡಲಾಯಿತು. ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತಿ ಬಳ್ಳಾರಿ, ಕೃಷಿ ಇಲಾಖೆ ಹೂವಿನಹಡಗಲಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ,2020 -21 ನೆಯ ಸಾಲಿನ ಆತ್ಮ ಯೋಜನೆಯಡಿಯಲ್ಲಿ ಮಹಿಳಾ ಸ್ವ ಸಹಾಯ ಹಾಗೂ ರೈತ ಆಸಕ್ತ ಗುಂಪುಗಳಿಗೆ, ಸಾಮಾರ್ಥ್ಯ, ಕೌಶಲ್ಯ ಅಭಿವೃದ್ಧಿ ತರಭೇತಿ ಕಾರ್ಯಕ್ರಮ ಉದ್ಘಾಟಿಸಿ ಕೃಷಿ ಇಲಾಖೆ ಅಧಿಕಾರಿ ನೀಲಾನಾಯ್ಕ ಮಹಿಳೆಯರು ಸಬಲ ಸಧೃಡ ಹೊಂದಿ, ಮಹಿಳೆಯರು, ಶೈಕ್ಷಣಿಕ ಅಭಿವೃದ್ಧಿಗೆ, ಪ್ರಗತಿ ಹೊಂದಲು ತರಭೇತಿ ಕಾರ್ಯಕ್ರಮ ಮುಖ್ಯ ಎಂದರು.                                                                    ಪ್ರಿಯಾ.ಕೆ. ಮಾತನಾಡಿ  “ಮಹಿಳೆಯರು, ಆರ್ಥಿಕವಾಗಿ ಅಭಿವೃದ್ದಿ ಪಥದತ್ತ ಸಾಗಲು ಇಂತಹ ತರಭೇತಿ ಶಿಬಿರ ಅಗತ್ಯ ಮತ್ತು ಅನಿವಾರ್ಯ ಎಂದರು. ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು, ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವ ಯೋಜನೆಗಳನ್ನು ಜಾರಿಗೆ ತಂದು, ಅವರನ್ನು ಸಬಲ, ಸಧೃಡ ಮಾಡಲು ಏನೆಲ್ಲಾ ಮಹತ್ವದ ಕೆಲಸಗಳನ್ನು ಮಾಡುತ್ತಿದೆ. ಮಹಿಳೆಯರು ತರಭೇತಿ ಪಡೆದು, ಆರ್ಥಿಕ ಮಟ್ಟ ಸುಧಾರಣೆ ಮಾಡಿಕೊಳ್ಳಬೇ ಕೆಂದರು.”   ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕಿ ಕೆ.ಲಲಿತಮ್ಮ ಮಾತನಾಡಿ “ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಅಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಪಟ್ಟ ಶ್ರಮ ಅಪಾರವಾದುದು. ಮಹಿಳೆಯರು ಮತ ಚಲಾಯಿಸಿ, ಮುನ್ನಡೆದು, ಅಧಿಕಾರಿ,ಹಾಗೂ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಮುಂತಾದ ಹುದ್ದೆಗಳನ್ನು ಹಿಡಿಯಲು ಕಾನೂನು ರೂಪಿಸಿದ್ದರಿಂದ ಇಷ್ಟೆಲ್ಲಾ ಮಹಿಳೆಯರು ಮುಂದುವರೆದು ಪ್ರಗತಿ ಹೊಂದಲು ಸಾಧ್ಯವಾಯಿತು. ಮಹಿಳಾ ಸ್ವ ಸಹಾಯ ಸಂಘಗಳ ಮಹಿಳೆಯರು ಅರ್ಥಿಕವಾಗಿ ಸಧೃಡವಾಗಬೇಕು. ಇಂದಿನ ಮಹಿಳೆಯರು ಯಾವುದಕ್ಕೂ ಕಡಿಮೆ ಇಲ್ಲ. ಸಾಧನೆ ಶಿಖರ ಏರಿದ, ಕಲೆ, ಸಾಹಿತ್ಯ, ಸಂಗೀತ ನೃತ್ಯ, ಶಿಕ್ಷಣ, ಆರ್ಥಿಕ ತಜ್ಞರು, ವಿಜ್ಞಾನಿ, ನ್ಯಾಯಾಧೀಶೆ, ನ್ಯಾಯವಾದಿ,ಉಪನ್ಯಾಸಕಿ, ಶಿಕ್ಷಕಿ, ಬಿಇಒ, ತಹಸೀಲ್ದಾರ್, ಎಸಿ,ಡಿಸಿ, ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದಲ್ಲಿ ಸಾಧಿಸುತ್ತಾ, ಕೆಲಸ ನಿರ್ವಹಣೆ ಮಾಡುತ್ತಿರುವ ಬಗ್ಗೆ ನಮಗೆಲ್ಲ ಗೊತ್ತಿರುವ ವಿಷಯವೇ ಆಗಿದೆ.”ಎಂದು ಹೇಳಿದರು.                                                      ಈ ಸಂದರ್ಭದಲ್ಲಿ ರವಿ ಸರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ವಿಜಯಲಕ್ಷ್ಮಿ, ಸವಿತಾ, ಚನ್ನವೀರಮ್ಮ, ಮುಂತಾದ ಮಹಿಳೆಯರು ತರಭೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend