ನಿಯಮ ಉಲ್ಲಂಘನೆ ಸರ್ವರಿಗೂ ಸಂಕಷ್ಟ-ಪಿಎಸ್ಐ ರಾಮಪ್ಪ…!!!

Listen to this article

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಗುಡೇಕೋಟೆ:ನಿಯಮ ಉಲ್ಲಂಘನೆ ಸರ್ವರಿಗೂ ಸಂಕಷ್ಟ-ಪಿಎಸ್ಐ ರಾ‍ಮಪ್ಪ*<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರೌಢಶಾಲೆಯಲ್ಲಿ,ಪೊಲೀಸ್ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಜರುಗಿತು.
ಪಿಎಸ್ಐ ರಾಮಪ್ಪ ಮಾತನಾಡಿ ಯುವಕರು ದೇಶದ ಬಹು ದೊಡ್ಡ ಆಸ್ಥಿಯಾಗಿದ್ದಾರೆ. ಮೋಜಿಗಾಗಿ ಯುವಕರು ರಸ್ಥೆಯಲ್ಲಿ ಮಾಡುವ ಅಚಾತೂರ್ಯಗಳಿಂದ,
ಅನೇಕ ಕುಟುಂಬಗಳು ಸಂಕಷ್ಟ ಅನುಭವಿಸುತ್ತವೆ ಹಾಗೂ ಬೀದಿಗೆ ಬರುತ್ತವೆ.ರಸ್ಥೆಯಲ್ಲಿ ಮೋಜಿಗಾಗಿ ಚಾಲನೆ ಮಾಡುವುದು ನಿಷಿದ್ಧ, ಪೋಷಕರು ವಾಹನ ನೀಡುವ ಮುನ್ನ ಅಗತ್ಯ ಜಾಗ್ರತೆ ವಹಿಸ ಬೇಕೆಂದರು.
ಕೂಡ್ಲಿಗಿ ಸಿಪಿಐ ವಸಂತ ಡಿ.ಅಸೋದೆ ಹಸಿರು ನಿಶಾನೆ ತೋರಿ ಜಾಥಕ್ಕೆ ಚಾಲನೆ ನಿಡಿ ಮಾತನಾಡಿದರು,ರಸ್ಥೆ ನಿಯಮಗಳ ಪಾಲನೆ ಕಾನೂನು ಪರಿಪಾಲನೆ ಮಾತ್ರವಲ್ಲ.ಸ್ವಂ ರಕ್ಷಕ ಹಾಗೂ ಸರ್ವರಿಗೂ ರಕ್ಷಾ ಕವಚವಾಗಿದೆ,ಸಂಚಾರಿ ನಿಯಮ ಪರಿಪಾಲಿ ಸುವುದು ಪ್ರತಿಯೊಬ್ಬರ ಕರ್ಥವ್ಯ ಎಂದರು.ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಪ್ರಾಚಾರ್ಯ ಗಿರೀಶ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಿಆರ್ಪಿ ಗೋವಿಂದಪ್ಪ ರಸ್ತೆ ಸುರಕ್ಷತಾ ನಿಯಮಗಳ ಪ್ರಮಾಣ ವಚನ ಬೋಧಿಸಿದರು, ಪ್ರೌಢಶಾಲಾ ಮುಖ್ಯ ಶಿಕ್ಷಕ ಪಾಂಡುರಂಗ, ಉಪನ್ಯಾಸಕರಾದ ಕೆ. ನಾಗರಾಜ್,ತಿಮ್ಮಪ್ಪ,ದೈಹಿಕ ಶಿಕ್ಷಕ ಕೊಟ್ರೇಶ್,ಧರ್ಮಸ್ಥಳ ಸಂಘದ ಸಂಯೋಜಕ ದುರ್ಗೇಶ್, ಉಪನ್ಯಾಸಕರು ಮತ್ತು ಪ್ರೌಢಶಾಲಾ ಎಲ್ಲಾ ಶಿಕ್ಷಕರು ವೇದಿಕೆಯಲ್ಲಿದ್ದರು.
ವಿದ್ಯಾರ್ಥಿಗಳು,ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಜರಿದ್ದರು.ಮಹಮ್ಮದ್ ರಫಿಕ್ ಸ್ವಾಗತಿಸಿ ನಿರೂಪಿಸಿದರು.ಬೀದಿ ಬೀದಿಗಳಲ್ಲಿ ಜಾಥ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend